Income Tax Returns : ಮಾರ್ಚ್ 15ರವರೆಗೆ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ!

By Suvarna News  |  First Published Jan 11, 2022, 7:02 PM IST

ಮಾರ್ಚ್ 15ರವರೆಗೆ ಐಟಿಆರ್ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ
ಟ್ವೀಟ್ ಮೂಲಕ ಪ್ರಕಟಣೆ ನೀಡಿದ ಆದಾಯ ತೆರಿಗೆ ಇಲಾಖೆ
ಟ್ಯಾಕ್ಸ್ ಆಡಿಟ್ ಸಲ್ಲಿಕೆಗೆ ಫೆ. 15 ಅಂತಿಮ ದಿನ
 


ಬೆಂಗಳೂರು (ಜ. 11): ದೇಶದಲ್ಲಿ ಕರೋನಾವೈರಸ್ (COVID) ಪರಿಸ್ಥಿತಿಯಿಂದಾಗಿ ಎದುರಾದ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು  ಹಣಕಾಸು ಸಚಿವಾಲಯದ ಆದಾಯ ತೆರಿಗೆ ವಿಭಾಗ, ಟ್ಯಾಕ್ಸ್ ಆಡಿಟ್ ವರದಿಯನ್ನು (audit reports for the assessment year )ಸಲ್ಲಿಸುವ ಗಡುವನ್ನು ಫೆಬ್ರವರಿ 15ರವರೆಗೆ ವಿಸ್ತರಣೆ ಮಾಡಿದ್ದರೆ, ಕಾರ್ಪೋರೇಟ್ ಆದಾಯ ತೆರಿಗೆ ರಿಟರ್ನ್ಸ್ (income tax return filing) ಸಲ್ಲಿಸುವ ಕೊನೆಯ ದಿನವನ್ನು 2022ರ ಮಾರ್ಚ್ 15ರವರೆಗೆ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಿದೆ. ಇದರಿಂದಾಗಿ 2020-21ರ ಹಣಕಾಸು ವರ್ಸದ ಐಟಿಆರ್ ನ್ನು ಮಾರ್ಚ್ 15ರ ಒಳಗಾಗಿ ಸಲ್ಲಿಕೆ ಮಾಡಬಹುದು.

ದೇಶದಲ್ಲಿ ಚಾರ್ಟೆಡ್ ಅಕೌಂಟೆಂಟ್ ಗಳನ್ನು ಪ್ರತಿನಿಧಿಸುವ ಹಲವಾರು ಗುಂಪುಗಳ ವಿನಂತಿಯ ಮೇರೆಗೆ ಸರ್ಕಾರವು ಈ ನಿರ್ಧಾರ ಮಾಡದೆ. ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ಮತ್ತು ಆದಾಯ ತೆರಿಗೆ ವೆಬ್ ಸೈಟ್ ನಲ್ಲಿ ಇದ್ದ ಸಮಸ್ಯೆಯಿಂದಾಗಿ ಐಟಿಆರ್ ಗೆ (ITR)ಸಮಸ್ಯೆ ಆಗಿದೆ ಆ ಕಾರಣದಿಂದಾಗಿ ಗಡುವನ್ನು ವಿಸ್ತರಣೆ ಮಾಡಬೇಕು ಎಂದು ಕೇಳಿಕೊಳ್ಳಲಾಗಿತ್ತು.  ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (CBDT) ನೀಡಿದ ಹಿಂದಿನ ನಿರ್ದೇಶನದ ಪ್ರಕಾರ, ವೈಯಕ್ತಿಕ ತೆರಿಗೆದಾರರಿಗೆ ITR ಗಳನ್ನು ಸಲ್ಲಿಸಲು 2021ರ ಡಿಸೆಂಬರ್ 31 ಕೊನೆಯ ದಿನವಾಗಿತ್ತು. ಆದರೆ, ಹಣಕಾಸು ಸಚಿವಾಲಯದ (finance ministry) ಹೊಸ ಸುತ್ತೋಲೆಯ ಪ್ರಕಾರ ಇದನ್ನು ಮಾರ್ಚ್ 15ರವರೆಗೆ ವಿಸ್ತರಣೆ ಮಾಡಲಾಗಿದೆ.

ಕಂಪನಿಗಳು ಟ್ಯಾಕ್ಸ್ ಆಡಿಟ್ ಸಲ್ಲಿಸಲು 2022ರ ಜನವರಿ 15 ಅಂತಿಮ ದಿನವಾಗಿತ್ತು. ಗಡುವಿನ ನಂತರ ಸ್ವೀಕರಿಸಿದ ಸಲ್ಲಿಕೆಗಳಿಗೆ 5 ಸಾವಿರ ರೂಪಾಯಿ ದಂಡ ಕಟ್ಟಬೇಕಿತ್ತು. "ಹಿಂದಿನ ವರ್ಷ 2020-21 ರ ಕಾಯಿದೆಯ ಯಾವುದೇ ನಿಬಂಧನೆಯ ಅಡಿಯಲ್ಲಿ ಲೆಕ್ಕಪರಿಶೋಧನೆಯ ವರದಿಯನ್ನು ಸಲ್ಲಿಸುವ ಅಂತಿಮ ದಿನಾಂಕ, ಇದು 31 ಅಕ್ಟೋಬರ್, 2021 ಆಗಿತ್ತು, ಮೌಲ್ಯಮಾಪಕರ ಸಂದರ್ಭದಲ್ಲಿ ವಿವರಣೆ 2 ರ ಉಪ-ವಿಭಾಗಕ್ಕೆ (ಎಎ) ಉಲ್ಲೇಖಿಸಲಾಗಿದೆ 1) ಕಾಯಿದೆಯ ಸೆಕ್ಷನ್ 139 ಅನ್ನು ಈ ಮೂಲಕ 2022ರ ಫೆಬ್ರವರಿ 15ರವರೆಗೆ ವಿಸ್‌ತರಣೆ ಮಾಡಲಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

On consideration of difficulties reported by taxpayers/stakeholders due to Covid & in e-filing of Audit reports for AY 2021-22 under the IT Act, 1961, CBDT further extends due dates for filing of Audit reports & ITRs for AY 21-22. Circular No. 01/2022 dated 11.01.2022 issued. pic.twitter.com/2Ggata8Bq3

— Income Tax India (@IncomeTaxIndia)


"ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಡಿಸೆಂಬರ್ 31ರ ನಂತರಕ್ಕೆ ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಮುಂದಿಲ್ಲ' ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ (Revenue secretary Tarun Bajaj) ಹೇಳಿದ ನಡುವೆಯೂ ಸರ್ಕಾರದಿಂದ ಈ ಪ್ರಕಟಣೆ ಘೋಷಣೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಇದಕ್ಕೂ ಮುನ್ನ ಕೇಂದ್ರ ಸರ್ಕಾರವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು 2021ರ ಜುಲೈ 31ರ ಮೂಲ ಗಡುವಿನಿಂದ 2021ರ ಡಿಸೆಂಬರ್ 31ರವರೆಗೆ ವಿಸ್ತರಣೆ ಮಾಡಿತ್ತು.

Tap to resize

Latest Videos

Tax Returns: ಆದಾಯ ತೆರಿಗೆ ಪಾವತಿ ಗಡುವು ವಿಸ್ತರಣೆ ಇಲ್ಲ: ಕೇಂದ್ರ
ಈಗಾಗಲೇ ಕೋಟಿಗಟ್ಟಲೆ ರಿಟರ್ನ್ಸ್ ಗಳು ಸಲ್ಲಿಕೆಯಾಗಿವೆ. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ನಲ್ಲಿ (e-filing ) ಸಾಕಷ್ಟು ತಾಂತ್ರಿಕ ಸಮಸ್ಯೆಗಳನ್ನು ತೆರಿಗೆದಾರರು ಎದುರಿಸಿದ್ದಾರೆ. ಈ ಕುರಿತಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (finance minister Nirmala Sitharaman), ಸೈಟ್ ನ ಕಾರ್ಯನಿರ್ವಹಣೆ ಮಾಡುವ ಇನ್ಫೋಸಿಸ್ ಕಂಪನಿಯ ಜೊತೆಗೂ ಮಾತುಕತೆ ನಡೆಸಿದ್ದರು. ನಿಗದಿತ ದಿನಾಂಕದೊಳಗೆ ಅಂದ್ರೆ ಮಾರ್ಚ್ 15ರೊಳಗೆ ಐಟಿಆರ್ ಫೈಲ್ ಮಾಡದಿದ್ರೆ 5ಸಾವಿರ ರೂ. ದಂಡ(Fine) ಪಾವತಿಸಬೇಕಾಗುತ್ತದೆ. ಆದ್ರೆ ತೆರಿಗೆಗೊಳಪಡೋ ಆದಾಯ 5ಲಕ್ಷ ರೂ. ಗಿಂತ ಹೆಚ್ಚಿದ್ರೆ ಮಾತ್ರ ಇದು ಅನ್ವಯಿಸುತ್ತದೆ. ಒಂದು ವೇಳೆ ತೆರಿಗೆಗೊಳಪಡೋ ಆದಾಯ 5ಲಕ್ಷ ರೂ.ಗಿಂತ ಕಡಿಮೆಯಿದ್ರೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ. 

click me!