ಬೆಂಗಳೂರಿನಲ್ಲಿ ಗೂಗಲ್‌ನ ಹೊಸ ಕಚೇರಿ, ಅಬ್ಬಬ್ಬಾ ತಿಂಗಳ ಬಾಡಿಗೆ ಇಷ್ಟೊಂದು ಕೋಟಿನಾ?

By Vinutha PerlaFirst Published May 28, 2024, 3:11 PM IST
Highlights

ಗೂಗಲ್‌ನ ಬೆಂಗಳೂರು ಕಚೇರಿಯು ಯುನೈಟೆಡ್ ಸ್ಟೇಟ್ಸ್‌ನ ಹೊರಗಿನ ಕಂಪನಿಯ ಅತಿದೊಡ್ಡ ಮತ್ತು ಪ್ರಮುಖ ಕಚೇರಿಗಳಲ್ಲಿ ಒಂದಾಗಿದೆ. ಸದ್ಯ ಈ ಕಂಪೆನಿಯು ಬೆಂಗಳೂರಿನ ಹೊಸ ಜಾಗವನ್ನು ಗುತ್ತಿಗೆ ಪಡೆದಿದೆ. ಇದರ ಬಾಡಿಗೆ ಕೇವಲ ಒಂದು ತಿಂಗಳಿಗೆ ಬರೋಬ್ಬರಿ  4 ಕೋಟಿ ಮೀರುತ್ತದೆ.

ಬೆಂಗಳೂರಿನ ವೈಟ್‌ಫೀಲ್ಡ್‌ನ ಅಲೆಂಬಿಕ್ ಸಿಟಿಯಲ್ಲಿ ಗೂಗಲ್ 649,000 ಚದರ ಅಡಿ ಕಚೇರಿ ಸ್ಥಳವನ್ನು ಗುತ್ತಿಗೆಗೆ ಪಡೆದಿದೆ. ಪ್ರತಿ ಚದರ ಅಡಿಗೆ 62 ರೂ. ಮಾಸಿಕ ಬಾಡಿಗೆ ದರದಲ್ಲಿ ಮೂರು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಕಛೇರಿಯನ್ನು ಬಾಡಿಗೆಗೆ ನೀಡಲಾಗಿದೆ. 4,02,38,000 ಮಾಸಿಕ ಬಾಡಿಗೆಯ ಮೊತ್ತವಾಗಿದೆ. ತಿಂಗಳಿಗೆ ಬರೋಬ್ಬರಿ 4 ಕೋಟಿಗೂ ಹೆಚ್ಚು  ಮೊತ್ತವನ್ನು ಬಾಡಿಗೆಗಾಗಿ ಪಾವತಿಸಬೇಕಾಗುತ್ತದೆ. 

ಈ ತಿಂಗಳ ಆರಂಭದಲ್ಲಿ ಗೂಗಲ್ ತನ್ನ ಯುಎಸ್ ಕಚೇರಿಗಳಿಂದ ಕೆಲವು ಪ್ರಮುಖ ಉದ್ಯೋಗಿಗಳನ್ನು ಕೈಬಿಟ್ಟ ನಂತರ ಹೊಸ ಕಚೇರಿ ಸ್ಥಳವನ್ನು ಸ್ವಾಧೀನಪಡಿಸಿಕೊಂಡಿದೆ. ಕಂಪನಿಯು ಕೆಲವು ಸ್ಥಾನಗಳನ್ನು ಭಾರತಕ್ಕೆ ವರ್ಗಾಯಿಸಿದೆ ಎಂದು ವರದಿಯಾಗಿದೆ.

Latest Videos

ಗೂಗಲ್‌ ಮ್ಯಾಪಿಂದ ದಾರಿ ತಪ್ಪಿ ಕೇರಳದ ತೊರೆಗೆ ಬಿತ್ತು ಕಾರು..!

ವರದಿಯ ಪ್ರಕಾರ, 2022 ರಲ್ಲಿ, ಗೂಗಲ್ ಕನೆಕ್ಟ್ ಸರ್ವಿಸಸ್ ಇಂಡಿಯಾ ಪ್ರೈ. ಲಿಮಿಟೆಡ್ ಹೈದರಾಬಾದ್‌ನಲ್ಲಿ 600,000 ಚದರ ಅಡಿ ಕಚೇರಿ ಜಾಗಕ್ಕೆ ತನ್ನ ಗುತ್ತಿಗೆಯನ್ನು ನವೀಕರಿಸಿದೆ. ಬೆಂಗಳೂರಿನ ಬಾಗ್‌ಮನೆ ಡೆವಲಪರ್ಸ್‌ನಿಂದ 1.3 ಮಿಲಿಯನ್ ಚದರ ಅಡಿ ಕಚೇರಿ ಸ್ಥಳವನ್ನು ಗುತ್ತಿಗೆ ನೀಡಲು ಗೂಗಲ್ ಒಪ್ಪಿಕೊಂಡಿದೆ. 

2020ರಿಂದ, ಭಾರತದಲ್ಲಿ ಗೂಗಲ್‌ನ ಆಫೀಸ್ ಸ್ಪೇಸ್ ಪೋರ್ಟ್‌ಫೋಲಿಯೊ 3.5 ಮಿಲಿಯನ್ ಚದರ ಅಡಿಗಳಷ್ಟು ವಿಸ್ತರಿಸಿದೆ. ಕಂಪನಿಯು ಈಗ ಭಾರತದಾದ್ಯಂತ ಐದು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಒಟ್ಟು 9.3 ಮಿಲಿಯನ್ ಚದರ ಅಡಿಗಳ ರಿಯಲ್ ಎಸ್ಟೇಟ್ ಹೆಜ್ಜೆಗುರುತನ್ನು ಹೊಂದಿದೆ. ಗೂಗಲ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸುತ್ತಿದೆ. 

125 ಶತಕೋಟಿ ಡಾಲರ್ ನಿವೃತ್ತಿ ನಿಧಿ ಖಾತೆಗಳನ್ನೇ ಆಕಸ್ಮಿಕವಾಗಿ ಡಿಲೀಟ್ ಮಾಡಿದ ಗೂಗಲ್..!

ಕಂಪನಿಯು ತಮಿಳುನಾಡಿನ ಫಾಕ್ಸ್‌ಕಾನ್ ಸೌಲಭ್ಯದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಮತ್ತು ರಾಜ್ಯದಲ್ಲಿ ಡ್ರೋನ್ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸಿದೆ. ಭಾರತದಲ್ಲಿ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯು ಪಿಕ್ಸೆಲ್ 8 ಮಾದರಿಯೊಂದಿಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ಕಳೆದ ವರ್ಷ ನಡೆದ ಗೂಗಲ್ ಫಾರ್ ಇಂಡಿಯಾ ಕಾನ್ಫರೆನ್ಸ್‌ನಲ್ಲಿ ಕಂಪನಿಯು ಆರಂಭದಲ್ಲಿ ಪಿಕ್ಸೆಲ್ ಫೋನ್‌ಗಳ ಉತ್ಪಾದನೆಯನ್ನು ಪ್ರಾರಂಭಿಸುವ ಯೋಜನೆಗಳನ್ನು ಹಾಕಿತ್ತು.

click me!