ಸಾರ್ವಜನಿಕ ಪರೀಕ್ಷೆಗೆ ಚಾಟ್‌ಜಿಪಿಟಿ ಪ್ರತಿಸ್ಪರ್ಧಿ ಬಾರ್ಡ್ ಲಭ್ಯ; ಉದ್ಯೋಗಿಗಳಿಗೆ ಗೂಗಲ್ ಸಿಇಒ ಎಚ್ಚರಿಕೆ ಮೇಲ್

By Suvarna NewsFirst Published Mar 23, 2023, 1:32 PM IST
Highlights

ಮೈಕ್ರೋಸಾಫ್ಟ್ ನ ಕೃತಕ ಬುದ್ಧಿಮತ್ತೆ ಸಂವಹನ ಸೇವೆ ಚಾಟ್‌ ಜಿಪಿಟಿಗೆ ಪ್ರತಿಯಾಗಿ ಗೂಗಲ್ ಬಾರ್ಡ್ ಸೇವೆ ಪ್ರಾರಂಭಿಸಿದೆ. ಪ್ರಾರಂಭಿಕ ಹಂತದ ಈ ಸೇವೆ ಅಮೆರಿಕ ಹಾಗೂ ಇಂಗ್ಲೆಂಡ್ ನ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಎಐ ವಲಯಕ್ಕೆ ಹೊಸ ಪರಿಚಯವಾಗಿರುವ ಬಾರ್ಡ್, ಇನ್ನೂ ಆರಂಭಿಕ ಪರೀಕ್ಷಾ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಕಳುಹಿಸಿರುವ ಇ-ಮೇಲ್ ನಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಬಾರ್ಡ್ ನಲ್ಲಿ ಕಾಣಿಸಿಕೊಳ್ಳುವ ಸಂಭವನೀಯ ತಪ್ಪುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. 
 

ನವದೆಹಲಿ (ಮಾ. 23): ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ‘ಚಾಟ್‌ ಜಿಪಿಟಿ’ಗೆ ಪ್ರತಿಯಾಗಿ ಗೂಗಲ್ 'ಬಾರ್ಡ್' ಎಂಬ ಸೇವೆಯನ್ನುಸಾರ್ವಜನಿಕ ಪರೀಕ್ಷೆಗೆ ಬಿಡುಗಡೆಗೊಳಿಸಿದೆ.ಬಾರ್ಡ್ ಹೆಸರಿನ ಈ ಕೃತಕ ಬುದ್ಧಿಮತ್ತೆ ಸಂವಹನ ಸೇವೆ ಬಳಕೆದಾರರ ಪ್ರಶ್ನೆಗಳಿಗೆ ಸರಳವಾದ ವಿಧಾನದಲ್ಲಿ ಪ್ರತಿಕ್ರಿಯೆ ನೀಡಲು ಸಶಕ್ತವಾಗಿದೆ. ಅಲ್ಲದೆ, ಪತ್ರಿಕ್ರಿಯೆಗಳಿಗೆ ಇಂಟರ್ನೆಟ್ ಡೇಟಾ ಬಳಸಿಕೊಳ್ಳಲಿದೆ. ಗೂಗಲ್ ಸಂಸ್ಥೆಯ ಬಾರ್ಡ್ ಎಐ ವಲಯಕ್ಕೆ ಹೊಸ ಪರಿಚಯವಾಗಿದ್ದು, ಇನ್ನೂ ಆರಂಭಿಕ ಪರೀಕ್ಷಾ ಹಂತದಲ್ಲಿದೆ. ಹೀಗಾಗಿಯೇ ಇದನ್ನು ಬಳಸುವಾಗ ಆಗೊಂದು ಈಗೊಂದು ಕೆಲವು ತಪ್ಪುಗಳಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಕಳುಹಿಸಿರುವ ಇ-ಮೇಲ್ ನಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಬಾರ್ಡ್ ನಲ್ಲಿ ಕಾಣಿಸಿಕೊಳ್ಳುವ ಸಂಭವನೀಯ ತಪ್ಪುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ಸಿಎನ್ ಬಿಸಿ ವರದಿ ಹೇಳಿದೆ. ಆರಂಭಿಕ ಹಂತದಲ್ಲಿ ಅಮೆರಿಕ ಹಾಗೂ ಇಂಗ್ಲೆಂಡ್ ನ ಆಯ್ದ ಬಳಕೆದಾರರಿಗೆ ಮಾತ್ರ ಬಾರ್ಡ್ ಸೇವೆ ಪ್ರಾರಂಭಿಸಲಾಗಿದೆ. ಈ ಹೊಸ ಎಐ ಸಂವಹನ ಸೇವೆ ಬಳಸಿಕೊಳ್ಳಲು ಬಯಸುವ ವ್ಯಕ್ತಿಗಳು ವೇಟ್ ಲಿಸ್ಟ್ ಗೆ ಸೈನ್ ಅಪ್ ಮಾಡಬೇಕು ಹಾಗೂ ಬಳಸಿಕೊಳ್ಳಲು ಕಾಯಬೇಕು. ಸದ್ಯ ಭಾರತದಲ್ಲಿಗೂಗಲ್ ಬಾರ್ಡ್ ಬಳಕೆಗೆ ಲಭ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಇತರ ದೇಶಗಳಲ್ಲಿ ಕೂಡ ಈ ಸೇವೆ ಪ್ರಾರಂಭಿಸಲು ಗೂಗಲ್ ಯೋಜನೆ ರೂಪಿಸುತ್ತಿದೆ.

'ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾರ್ಡ್ ಬಳಸಲು ಹಾಗೂ ಇದರ ಸಾಮರ್ಥ್ಯ ಪರೀಕ್ಷಿಸಲು ಪ್ರಾರಂಭಿಸಿದ್ದಾರೆ. ಅವರು ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಲಿದ್ದಾರೆ. ತಪ್ಪುಗಳು ಆಗುವ ಸಾಧ್ಯತೆಯಿದೆ. ಆದರೆ, ಉತ್ಪನ್ನದ ಪ್ರಗತಿ ಹಾಗೂ ತಂತ್ರಜ್ಞಾನದ ಅಭಿವೃದ್ಧಿಗೆ ಬಳಕೆದಾರರ ಪ್ರತಿಕ್ರಿಯೆ ಅಗತ್ಯ' ಎಂದು ಇ-ಮೇಲ್ ನಲ್ಲಿ ತಿಳಿಸಲಾಗಿದೆ. 

18000 ಸಿಬ್ಬಂದಿ ತೆಗೆದ ಅಮೆಜಾನ್‌ನಿಂದ ಮತ್ತೆ 9000 ಹುದ್ದೆ ಕಡಿತ

ಬಾರ್ಡ್ ಸೇವೆಯನ್ನು ಸಾರ್ವಜನಿಕರ ಬಳಕೆಗೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಗೂಗಲ್ ತನ್ನ ಬ್ಲಾಗ್ ನಲ್ಲಿ ಹೀಗೆ ಬರೆದಿದೆ: 'ನಿಮ್ಮ ಉತ್ಪಾದಕತೆಯನ್ನು ಉತ್ತೇಜಿಸಲು ನೀವು ಬಾರ್ಡ್ ಬಳಸಬಹುದು. ನಿಮ್ಮ ಯೋಚನೆಗಳನ್ನು ಉತ್ತೇಜಿಸಿ ಹಾಗೂ ಕುತೂಹಲಕ್ಕೆ ಇಂಧನ ಒದಗಿಸಿ. ಈ ವರ್ಷ ಹೆಚ್ಚು ಪುಸ್ತಕಗಳನ್ನು ಓದುವ ನಿಮ್ಮ ಗುರಿ ತಲುಪಲು, ಕ್ವಾಂಟಮ್ ಭೌತಶಾಸ್ತ್ರವನ್ನು ಸರಳ ಟರ್ಮ್ ಗಳಲ್ಲಿ ವಿವರಿಸಲು ಅಥವಾ ನಿಮ್ಮ ಬ್ಲಾಗ್ ಪೋಸ್ಟ್ ನಲ್ಲಿ ಸೃಜನಾತ್ಮಕ ಯೋಚನೆಗೆ ಉತ್ತೇಜನ ನೀಡಲು ಟಿಪ್ಸ್ ನೀಡುವಂತೆ ನೀವು ಬಾರ್ಡ್ ಅನ್ನು ಕೋರಬಹುದು. ಬಾರ್ಡ್ ಪರೀಕ್ಷಿಸುವ ಸಂದರ್ಭಗಳಲ್ಲಿ ನಾವು ಸಾಕಷ್ಟು ಕಲಿತಿದ್ದೇವೆ. ಹೆಚ್ಚು ಜನರಿಂದ ಪ್ರತಿಕ್ರಿಯೆ ಪಡೆಯೋದು ಇದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿರುವ ಮುಂದಿನ ಪ್ರಮುಖ ಹೆಜ್ಜೆಯಾಗಿದೆ.' 

ಬಾರ್ಡ್ ಪರೀಕ್ಷೆಗೆ 80,000ಕ್ಕೂ ಅಧಿಕ ಉದ್ಯೋಗಿಗಳ ನೆರವು
ಸುಂದರ್ ಪಿಚೈ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಿದ ಇ-ಮೇಲ್ ನಲ್ಲೇ ಆಂತರಿಕವಾಗಿ ಬಾರ್ಡ್ ಪರೀಕ್ಷೆಗೆ ನೆರವು ನೀಡಿದ ಗೂಗಲ್ ನ  80,000ಕ್ಕೂ ಅಧಿಕ ಉದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವರ ಇ-ಮೇಲ್ ಹೀಗಿದೆ: 'ಕಳೆದ ಕೆಲವು ವಾರಗಳಿಂದ ಬಾರ್ಡ್ ನಲ್ಲಿ ಎಲ್ಲಕ್ಕಿಂತ ಹಾಗೂ ಎಲ್ಲರಿಗಿಂತ ಹೆಚ್ಚು ಸಮಯ  ಕಳೆದ ಬಾರ್ಡ್ ತಂಡಕ್ಕೆ ನನ್ನ ಧನ್ಯವಾದಗಳು. ಹಾಗೆಯೇ ಇದನ್ನು ಪರೀಕ್ಷಿಸಲು ನೆರವು ನೀಡಿದ ಗೂಗಲ್ ನ 80,000 ಉದ್ಯೋಗಿಗಳನ್ನು ಅಭಿನಂದಿಸುತ್ತೇನೆ. ನಮ್ಮ ಈ ಕಾರ್ಯದ ಬಗ್ಗೆ ನಾವು ಹೆಮ್ಮೆಪಡಬೇಕು.'

ಸ್ವಿಜರ್ಲೆಂಡ್‌ನ ಕ್ರೆಡಿಟ್‌ ಸೂಸಿ ಬ್ಯಾಂಕ್‌ ಯುಬಿಎಸ್‌ ವಶಕ್ಕೆ: ಜಾಗತಿಕ ಬ್ಯಾಂಕಿಂಗ್‌ ತಲ್ಲಣ ತಪ್ಪಿಸಲು ಬೃಹತ್‌ ಕಸರತ್ತು

ಬಾರ್ಡ್ ಪರಿಚಯಿಸುವ ಮೂಲಕ ಗೂಗಲ್  ಚಾಟ್ ಜಿಪಿಟಿ (ChatGPT) ಅನ್ನು ಮಣಿಸಲು ಪ್ರಯತ್ನಿಸುತ್ತಿದೆ. ಆದರೆ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಸಮರ್ಪಕ ಪ್ರತಿಕ್ರಿಯೆಗಳು, ಫ್ಯಾಕ್ಚುವಲ್ ಎರರ್ಸ್ ಕಾರಣದಿಂದ ಬಾರ್ಡ್ ಅನ್ನು ಟೀಕಿಸಲಾಗಿದೆ. ಇನ್ನು ಬಾರ್ಡ್ ಜಾಹೀರಾತಿನಲ್ಲೇ ತಪ್ಪು ಪ್ರತಿಕ್ರಿಯೆ ಇರೋದನ್ನು ಸುದ್ದಿಸಂಸ್ಥೆ ರಾಯ್ಟರ್ಸ್ ಬೊಟ್ಟು ಮಾಡಿ ತೋರಿಸಿದ್ದು, ಇದರಿಂದ ಒಂದಿಷ್ಟು ವಿವಾದ ಕೂಡ ಸೃಷ್ಟಿಯಾಗಿತ್ತು. 
 

click me!