
ಬೆಂಗಳೂರು(ಡಿ.27): 2018 ಇನ್ನೇನು ಮುಗಿಯುತ್ತಾ ಬಂದಿದೆ. ಭೂಮಿಯ ಆಯಸ್ಸಿಗೆ, ಮಾನವ ಜನಾಂಗದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗಲಿದೆ. 2019ರ ರೂಪದಲ್ಲಿ ಮತ್ತೊಂದು ಹೊಸ ವರ್ಷ ನಮ್ಮ ಜೀವನದಲ್ಲಿ ಪ್ರವೇಶ ಪಡೆಯಲಿದೆ.
ವರ್ಷಾಂತ್ಯದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನವನ್ನೊಮ್ಮೆ ರಿವೈಂಡ್ ಮಾಡಿ ನೋಡುವುದುಂಟು. ಏನಾಯ್ತು?, ಏನಾಗಬೇಕಿತ್ತು?, ಸರಿ ಏನು?, ತಪ್ಪು ಮಾಡಿದ್ದೆಲ್ಲಿ?, ಹೀಗೆ ವರ್ಷದ ರಿಪೋರ್ಟ್ ಕಾರ್ಡ್ ಮನಸ್ಸಲ್ಲೇ ರೆಡಿ ಮಾಡಲಾಗುತ್ತದೆ.
ಹಾಗೆ ದೇಶ ಕೂಡ ಒಂದು ವರ್ಷದ ಅವಧಿಯಲ್ಲಿ ತಾನು ಮುನ್ನಡೆದ ಹಾದಿಯ ಕುರಿತು ಒಮ್ಮೆ ಗ್ಲ್ಯಾನ್ಸ್ ಮಾಡುತ್ತದೆ. ಹೀಗೆ ದೇಶದ ವಾರ್ಷಿಕ ಆಗುಹೋಗುಗಳ ಬಗ್ಗೆ ಹಿಂತಿರುಗಿ ನೋಡಿದರೆ ಪ್ರಮುಖವಾಗಿ ಕಾಣ ಸಿಗುವುದು, ಭಾರತದ ಆರ್ಥಿಕ ಬೆಳವಣಿಗೆ ಅದರಲ್ಲೂ ಜಿಡಿಪಿ ವೃದ್ಧಿ ಇಡೀ ವಿಶ್ವದ ಗಮನ ಸೆಳೆದಿರುವುದು.
ಹೌದು, ಭಾರತದ ಜಿಡಿಪಿ ಬೆಳವಣಿಗೆ ವಿಶ್ವದ ಕಣ್ಣು ಕುಕ್ಕಿಸುವಂತಿದೆ. ಸದೃಢ ಆರ್ಥಿಕ ನೀತಿಗಳ ಪರಿಒಣಾಮವಾಗಿ ಜಿಡಿಪಿ ಬೆಳವಣಿಗೆ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.
ಆರ್ಥಿಕ ಬೆಳವಣಿಗೆಯಲ್ಲಿ ಭಾರತ ನಂ.1, ಜಿಡಿಪಿ ಕುಸಿದಾಗ ಗೋಳಾಡಿದವರಲ್ಲಿ?
ಇತ್ತೀಚಿಗಷ್ಟೇ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಭಾರತ ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಹೊರ ಹೊಮ್ಮಿದೆ. ಈ ಹಿಂದೆ ಚೀನಾ ಈ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಜಿಡಿಪಿ ಬೆಳವಣಿಗೆಯಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ, ಆ ಸ್ಥಾನವನ್ನು ಚೀನಾದಿಂದ ಕಸಿದುಕೊಂಡಿದೆ.
ಮೋದಿ ಬಗ್ಗದ ಆಸಾಮಿ: ಆಕಾಶಕ್ಕೆ ಮುತ್ತಿಕ್ಕಿದೆ ನಮ್ಮ ಎಕಾನಮಿ!
ಹಾಗೆ ನೋಡಿದರೆ ಜಿಡಿಪಿ ಬೆಳವಣಿಗೆ ಎನ್ನುವುದು ಹೂವಿನ ಹಾಸಿಗೆ ಏನಲ್ಲ. ಹಲವು ಕಠಿಣ ಹಾಗೂ ಮುಳ್ಳಿನ ಹಾದಿಯನ್ನು ಸವೆಸಿ ಭಾರತದ ಈ ಬೆಳವಣಿಗೆ ದಾಖಲಿಸಿದೆ. ಪ್ರಮುಖವಾಗಿ ನೋಟು ಅಮಾನ್ಯೀಕರಣದ ಬಳಿಕ ಮತ್ತು ಜಿಎಸ್ ಟಿ ಜಾರಿಯಾದ ಆರಂಭದಲ್ಲಿ ಜಿಡಿಪಿ ಬೆಳವಣಿಗೆ ಕುಂಠಿತಗೊಂಡಿದ್ದು, ದೇಶವನ್ನು ಆತಂಕಕ್ಕೆ ತಳ್ಳಿದ್ದು ಸುಳ್ಳಲ್ಲ.
ಈ ವರ್ಷ ಜಿಡಿಪಿ ಪ್ರಗತಿ ದರ 6.5% ಕ್ಕೆ ಕುಸಿತ? 4 ವರ್ಷದಲ್ಲೇ ಅತೀ ಕಡಿಮೆ!
ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಜಿಡಿಪಿ ಮತ್ತೆ ಏರಿಕೆಯ ಹಳಿ ಮೇಲೆ ಬಂದು ನಿಂತಿದೆ.
ಜಿಡಿಪಿಯಲ್ಲಿ ಚೀನಾಕ್ಕಿಂತ ನಾವೇ ಮುಂದೆ!
ನೋಟು ಅಮಾನ್ಯೀಕರಣದ ನಂತರ ದೇಶದ ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ ಎಂದೆಲ್ಲಾ ಆರೋಪ ಮಾಡುವವರಿಗೆ 2019 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಕಂಡು ಆಶ್ಚರ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಕಾರಣ 2019 ರಲ್ಲಿ ಭಾರತದ ಆರ್ಥಿಕತೆ ಬ್ರಿಟನ್ ಆರ್ಥಿಕತೆಯನ್ನು ಮೀರಲಿದೆ.
ಆರ್ಥಿಕತೆಯಲ್ಲಿ ಬ್ರಿಟನ್ ಬೀಟ್ ಮಾಡಲಿದೆ ಭಾರತ: ಯಾವಾಗ?
ಸದ್ಯ ಭಾರತ ವಿಶ್ವದ ಆರನೇ ಬೃಹತ್ ಆರ್ಥಿಕತೆಯನ್ನು ಹೊಂದಿದ್ದು, ಮುಂದಿನ ವರ್ಷ ಬ್ರಿಟನ್‌ನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಲಿದೆ.
ಸದ್ಯ ಭಾರತದ ಜಿಡಿಪಿ 2.59 ಟ್ರಿಲಿಯನ್ ಯುಎಸ್ ಡಾಲರ್ ಇದ್ದು, ಬ್ರಿಟನ್ ಜಿಡಿಪಿ 2.62 ಟ್ರಿಲಿಯನ್ ಯುಎಸ್ ಡಾಲರ್ ಇದೆ. ಭಾರತ ಈ ಅಂಕಿ ಅಂಶಗಳನ್ನು 2019 ರಲ್ಲಿ ದಾಟುವುದು ಖಚಿತವಾಗಿದ್ದು, ವಿಶ್ವದ 5ನೇ ಬಲಾಢ್ಯ ಆರ್ಥಿಕತೆ ಹೊಂದಿರುವ ದೇಶವಾಗಿ ಹೊರ ಹೊಮ್ಮಲಿದೆ.
ಫ್ರಾನ್ಸ್ ಹಿಂದಿಕ್ಕಿದ ಭಾರತ ವಿಶ್ವದ 6ನೇ ದೊಡ್ಡ ಅರ್ಥವ್ಯವಸ್ಥೆ
ಇಷ್ಟೇ ಅಲ್ಲದೇ ಮುಂದಿನ 10-20 ವರ್ಷಗಳ ಅವಧಿಯಲ್ಲಿ ಭಾರತ ಬಲಾಡ್ಯ ಆರ್ಥಿಕತೆ ಹೊಂದಿರುವ ಟಾಪ್ ಮೂರು ರಾಷ್ಟ್ರಗಳ ಪಟ್ಟಿಯಲ್ಲಿ ಸೇರಲಿದೆ ಎಂಬ ವಿಶ್ವಾಸವೂ ಇದೆ. ಭಾರತ ಈಗಾಗಲೇ ಫ್ರಾನ್ಸ್ ನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೆ ಏರಿದ್ದು, ಮುಂದಿನ ವರ್ಷ ಬ್ರಿಟನ್ ಹಿಂದಿಕ್ಕಿ 5ನೇ ಸ್ಥಾನಕ್ಕೇರಲಿದೆ.
2018-19ರ ವಿತ್ತೀಯ ವರ್ಷದಲ್ಲಿ ಮತ್ತು ಕಳೆದ 2 ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಗರಿಷ್ಠ ಬೆಳವಣಿಗೆ ಕಂಡಿದೆ ಎಂದು ಐಎಂಎಫ್ ಅಂಕಿ ಅಂಶಗಳು ತಿಳಿಸಿವೆ.
ಇತ್ತೀಚೆಗೆ 2ನೇ ತ್ರೈಮಾಸಿಕ (ಜುಲೈ-ಸೆಪ್ಟಂಬರ್) ಅವಧಿಯಲ್ಲಿ ಭಾರತದ ಜಿಡಿಪಿ ಶೇ. 7.1 ರಷ್ಟು ದಾಖಲಾಗಿದ್ದು, ವಿಶ್ವದ ಜಿಡಿಪಿ ಮತ್ತು ಭಾರತದ ಜಿಡಿಪಿಗೆ ಹೋಲಿಕೆ ಮಾಡಿದರೆ 2017ರಲ್ಲಿ ಶೇ.3.2 ಹೆಚ್ಚಾಗಿದೆ.
ಮುಂದಿನ ವರ್ಷ ಜಿಡಿಪಿ ಗತಿ?: ಮೋದಿ ಮೂಡ್ ಚೆನ್ನಾಗಿದೆ ಎಂದ ಮೂಡೀಸ್!
2014ರಲ್ಲಿ ವಿಶ್ವದ ಜಿಡಿಪಿ ಮತ್ತು ಭಾರತದ ಜಿಡಿಪಿಗೆ ಹೋಲಿಕೆ ಶೇ.2.6 ಇತ್ತು. ಇದೀಗ ಶೇ.3.2 ಹೆಚ್ಚಾಗಿದ್ದು, ಭಾರತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸುತ್ತಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ.
ಇದೇ ವೇಳೆ 2014-15 ರಿಂದ 2017-18ರ ನಡುವೆ ಜಿಡಿಪಿ 7.3% ದಾಖಲಾಗಿದ್ದು, ಇದು ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ಇದಾಗಿದೆ.
ಅದರಂತೆ ಇಂಟರ್ ನ್ಯಾಷನಲ್ ಮೊನಿಟರಿ ಫಂಡ್ ಅಕ್ಟೋಬರ್ 2018ರ ವರದಿ ಪ್ರಕಾರ, ಪ್ರಸ್ತಕ್ತ ವಿತ್ತೀಯ ವರ್ಷದಿಂದ ಮುಂಬರುವ ಹಣಕಾಸು ವರ್ಷ 2020ರ ನಡುವೆ ಭಾರತದ ಆರ್ಥಿಕತೆ ವಿಶ್ವದ ದೊಡ್ಡ ಆರ್ಥಿಕ ರಾಷ್ಟ್ರಗಳ ಪೈಕಿ ಗುರುತಿಸಲ್ಪಡಲಿದೆ.
ಅಯ್ಯಯ್ಯೋ ಚೀನಾ: ನಿನ್ನ ಎಕಾನಮಿ ಗತಿ ಇಷ್ಟೇನಾ?
ಜಿಡಿಪಿ ಬೆಳವಣಿಗೆ ದಾಖಲಿಸರುವ ಹಲವಾರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ಕುರಿತು ಸಕಾರಾತ್ಮಕ ಅಭಿಪ್ರಾಯ ಹೊಂದಿವೆ. ಪ್ರಮುಖವಾಗಿ ಮೂಡಿ, ಐಎಂಎಫ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ತಮ್ಮ ವರದಿಯಲ್ಲಿ ಭಾರತದ ಜಿಡಿಪಿ ವೃದ್ಧಿಯನ್ನು ಮೆಚ್ಚಿಕೊಂಡಿವೆ.
ಇದನ್ನೂ ಓದಿ-ಗುಡ್ ಬೈ 2018: ದಿನವೂ ಏಕೆ ಪೆಟ್ರೋಲ್ ಸುದ್ದಿ?, ಮಾರುಕಟ್ಟೆಯಷ್ಟೇ ನಾವೂ ಜಿದ್ದಿ!
ಗುಡ್ ಬೈ 2018: ಆರ್ಥಿಕ ನಾಗಾಲೋಟದಲ್ಲಿ ಮೋದಿ ಕೈ ಬಿಟ್ಟ ಪ್ರಮುಖರು!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.