ದೇಶದ ಅರ್ಥ ವ್ಯವಸ್ಥೆಗೆ ಬದಲಿ ರೂಪ ನೀಡುವ ಮೋದಿ ಕನಸು| ಪ್ರಧಾನಿ ಮೋದಿ ಕನಸಿಗೆ ಸಾಥ್ ನೀಡಿದ್ದ ಪ್ರಮುಖ ಆರ್ಥಿಕ ತಜ್ಞರು| ಅಪನಗದೀಕರಣ, ಜಿಎಸ್‌ಟಿ ಜಾರಿ ವೇಳೆ ಮೋದಿ ಜೊತೆಗಿದ್ದ ಪ್ರಮುಖರು| ಕಾಲ ಬದಲಾದಂತೆ ಮೋದಿಯಿಂದ ದೂರ ಸರಿದ ಆರ್ಥಿಕ ತಜ್ಞರು| ಅರವಿಂದ್ ಸುಬ್ರಮಣಿಯನ್, ಊರ್ಜಿತ್ ಪಟೇಲ್, ಸುರ್ಜಿತ್ ಭಲ್ಲಾ| ವಿವಿಧ ಕಾರಣಗಳಿಂದಾಗಿ ಮೋದಿ ಅವರಿಂದ ದೂರ ಸರಿದ ತಜ್ಞರು
ಬೆಂಗಳೂರು(ಡಿ.26): 2018 ಇನ್ನೇನು ಮುಗಿಯುತ್ತಾ ಬಂದಿದೆ. ಭೂಮಿಯ ಆಯಸ್ಸಿಗೆ, ಮಾನವ ಜನಾಂಗದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗಲಿದೆ. 2019ರ ರೂಪದಲ್ಲಿ ಮತ್ತೊಂದು ಹೊಸ ವರ್ಷ ನಮ್ಮ ಜೀವನದಲ್ಲಿ ಪ್ರವೇಶ ಪಡೆಯಲಿದೆ.
ವರ್ಷಾಂತ್ಯದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನವನ್ನೊಮ್ಮೆ ರಿವೈಂಡ್ ಮಾಡಿ ನೋಡುವುದುಂಟು. ಏನಾಯ್ತು?, ಏನಾಗಬೇಕಿತ್ತು?, ಸರಿ ಏನು?, ತಪ್ಪು ಮಾಡಿದ್ದೆಲ್ಲಿ?, ಹೀಗೆ ವರ್ಷದ ರಿಪೋರ್ಟ್ ಕಾರ್ಡ್ ಮನಸ್ಸಲ್ಲೇ ರೆಡಿ ಮಾಡಲಾಗುತ್ತದೆ.ಹಾಗೆ ದೇಶ ಕೂಡ ಒಂದು ವರ್ಷದ ಅವಧಿಯಲ್ಲಿ
ತಾನು ಮುನ್ನಡೆದ ಹಾದಿಯ ಕುರಿತು ಒಮ್ಮೆ ಗ್ಲ್ಯಾನ್ಸ್ ಮಾಡುತ್ತದೆ. ಹೀಗೆ ದೇಶದ ವಾರ್ಷಿಕ ಆಗುಹೋಗುಗಳ ಬಗ್ಗೆ ಹಿಂತಿರುಗಿ ನೋಡಿದರೆ ಪ್ರಮುಖವಾಗಿ ಕಾಣ ಸಿಗುವುದು, ದೇಶದ ಅರ್ಥ ವ್ಯವಸ್ಥೆಗೆ ಬದಲಿ ರೂಪ ನೀಡುವ ಪ್ರಧಾನಿ ಮೋದಿ ಯೋಜನೆಗೆ ಕೈಜೋಡಿಸಿದ್ದ ಪ್ರಮುಖರು ಒಬ್ಬೊಬ್ಬರಾಗಿ ಅವರಿಂದ ದೂರ ಸರಿದಿದ್ದು.
ಹೌದು, 2018ರಲ್ಲಿ ಪ್ರಮುಖ ಆರ್ಥಿಕ ತಜ್ಞರು ಪ್ರಧಾನಿ ಮೋದಿ ಅವರಿಂದ ದೂರ ಸರಿದರು. ಅಪನಗದೀಕರಣ, ಜಿಎಸ್‌ಟಿ ವೇಳೆ ಈ ಎಲ್ಲಾ ಪ್ರಮುಖರು ಮೋದಿ ಜೊತೆಗಿದ್ದರು ಎಂಬುದು ವಿಶೇಷ.
ಹಾಗಾದರೆ 2018ರಲ್ಲಿ ಪ್ರಧಾನಿ ಮೋದಿಯಿಂದ ದೂರ ಸರಿದ ಪ್ರಮುಖ ಆರ್ಥಿಕ ತಜ್ಞರ ಪಟ್ಟಿ ಇಲ್ಲಿದೆ.
1. ರಘುರಾಮ್ ರಾಜನ್:
ಯುಪಿಎ ಅವಧಿಯಲ್ಲಿ ಆರ್‌ಬಿಐ ಗರ್ವನರ್ ಆಗಿದ್ದ ರಘುರಾಮ್ ರಾಜನ್, ನರೇಂದ್ರ ಮೋದಿ ಪ್ರಧಾನಿಯಾದ ಮೇಲೂ ಮುಂದುವರೆದವರು. ಆದರೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದ ಅಂತರ ಕಾಯ್ದುಕೊಳ್ಳತೊಡಗಿದ್ದ ರಘುರಾಮ್ ರಾಜನ್, 2016ರಲ್ಲಿ ತಮ್ಮ ಅವಧಿ ಮುಗಿದ ಮೇಲೆ ಮತ್ತೊಂದು ಅವಧಿಗೆ ಗರ್ವನರ್ ಆಗಿ ಮುಂದುವರೆಯಲು ಇಚ್ಛಿಸಲಿಲ್ಲ.
ನಾ ಹೇಳ್ದಂಗ್ ಕೇಳಿ, ಮೋದಿಗೂ ಇದನ್ನೇ ಹೇಳಿ: ರಾಜನ್!
ಅಲ್ಲದೇ ರಘುರಾಮ್ ರಾಜನ್ ಅವರನ್ನೇ ಗರ್ವನರ್ ಹುದ್ದೆಯಲ್ಲಿ ಮುಂದುವರೆಸಲು ಸರ್ಕಾರದಲ್ಲೇ ಪಸ್ವರ ಇತ್ತು. ಪ್ರಮುಖವಾಗಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ರಘುರಾಮ್ ರಾಜನ್ ಅವರನ್ನು ಗರ್ವನರ್ ಹುದ್ದೆಯಲ್ಲಿ ಮುಂದುವರೆಸಲು ವಿರೋಧಿಸಿದರು. ಕೊನೆಗೆ ಸೆಪ್ಟೆಂಬರ್ 4, 2016ರಂದು ರಘುರಾಮ್ ರಾಜನ್ ಗರ್ವನರ್ ಹುದ್ದೆಯಿಂದ ನಿವೃತ್ತಿ ಹೊಂದಿದ ಬಳಿಕ ಅವರ ಸ್ಥಾನಕ್ಕೆ ಊರ್ಜಿತ್ ಪಟೇಲ್ ಅವರನ್ನು ನೇಮಿಸಲಾಯಿತು.
2. ಅರವಿಂದ್ ಸುಬ್ರಮಣಿಯನ್:
ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಅಕ್ಟೋಬರ್ 16, 2014 ರಂದು ಸ್ಥಾನ ಅಲಂಕರಿಸಿದರು. ಹೆಚ್ಚು ಕಡಿಮೆ 4 ವರ್ಷಗಳ ಕಾಲ ಇದೇ ಹುದ್ದೆಯಲ್ಲಿ ಮುಂದುವರೆದ ಸುಬ್ರಮಣಿಯನ್, ಪ್ರಧಾನಿ ಮೋದಿ ಅವರ ಅಪನಗದೀಕರಣ, ಜಿಎಸ್‌ಟಿ ಜಾರಿಯ ನಿರ್ಧಾರಕ್ಕೆ ಬೆಂಬಲ ಸೂಚಿಸಿದವರು.
ಅಮೆರಿಕಕ್ಕೆ ಸಿಇಎ ವಾಪಸ್: ಜೇಟ್ಲಿ ಮಾಹಿತಿ..!
ಆನಂತರ ನಡೆದ ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೂನ್ 20, 2018ರಲ್ಲಿ ಅರವಿಂದ್ ಸುಬ್ರಮಣಿಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಅರವಿಂದ್ ರಾಜೀನಾಮೆಯನ್ನು ಧೃಢೀಕರಿಸಿದರು. ಅಲ್ಲದೇ ಕೌಟುಂಬಿಕ ಕಾರಣಗಳಿಂದ ಅರವಿಂದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಯಿತು.
ಒಬ್ಬೊಬ್ರೆ ಮೋದಿಗೆ ಕೈ ಕೊಡ್ತಿದ್ದಾರೆ: ನೋಟ್ ಬ್ಯಾನ್ ತಪ್ಪು ಅಂತಿದ್ದಾರೆ!
3. ಊರ್ಜಿತ್ ಪಟೇಲ್:
ರಘುರಾಮ್ ರಾಜನ್ ನಿವೃತ್ತಿಯ ಬಳಿಕ ಆರ್‌ಬಿಐ ಗರ್ವನರ್ ಆಗಿ ಊರ್ಜಿತ್ ಪಟೇಲ್ ಅವರನ್ನು ಸೆಪ್ಟೆಂಬರ್ 4, 2016ರಂದು ಕೇಂದ್ರ ಸರ್ಕಾರ ನೇಮಿಸಿತು. ಬಹುಶಃ ಆರ್‌ಬಿಐ ಇತಿಹಾಸದಲ್ಲಿ ಊರ್ಜಿತ್ ಪಟೇಲ್ ನಿರ್ವಹಿಸಿದಷ್ಟು ಕ್ಲಿಷ್ಟಕರ ಪಾತ್ರವನ್ನು ಬೇರೆ ಯಾವ ಗರ್ವನರ್ ನಿರ್ವಹಿಸಿಲ್ಲ ಎಂದರೆ ತಪ್ಪಾಗಲಾರದು.
ಊರ್ಜಿತ್ ಪಟೇಲ್ ಅವಧಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅಪನಗದೀಕರಣವನ್ನು ಘೋಷಿಸಿದರು. ನವೆಂಬರ್ 8, 2016 ರಂದು ಮೋದಿ 1000 ರೂ. ಮತ್ತು 500 ರೂ. ಮುಖಬೆಲೆಯ ನೊಟುಗಳನ್ನು ರದ್ದುಗೊಳಿಸಿ ಹೊಸ 2000 ರೂ. ಮತ್ತು 500 ರೂ. ನೋಟುಗಳನ್ನು ಪರಿಚಯಿಸಿದರು.
500, 1,000 ನೋಟು ರದ್ದು: ಈ ಬಗ್ಗೆ ಆರ್'ಬಿಐ ಗವರ್ನರ್ ಸ್ಪಷ್ಟನೆ
ಏಕಾಏಕಿ ನಡೆದ ಅಪನಗದೀಕರಣದಿಂದಾಗಿ ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಯಿತು. ಹೊಸ ನೋಟುಗಳ ವ್ಯತ್ಯಯದಿಂದಾಗಿ ಎಟಿಎಂ ಮತ್ತು ಬ್ಯಾಂಕ್‌ಗಳ ಮುಂದೆ ಜನತೆ ಸರದಿ ಸಾಲಿನಲ್ಲಿ ನಿಲ್ಲುವಂತಾಯಿತು. ಅದರಲ್ಲೂ ಹಣ ವಿತ್ ಡ್ರಾ ಮೇಲೆ ನಿಯಂತ್ರಣ ಹೇರಿದ್ದರಿಂದಾಗಿ ನಿತ್ಯವೂ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಜನಜಂಗುಳಿ ಸೇರುತ್ತಿತ್ತು.
ಇಷ್ಟೇ ಅಲ್ಲದೇ ಅಪನಗದೀಕರಣದಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಮೇಲೆ ಆರಂಭಿಕ ಆಘಾತ ಕೂಡ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತ್ತು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಬೆನ್ನಿಗೆ ನಿಂತ ಆರ್‌ಬಿಐ ಗರ್ವನರ್ ಊರ್ಜಿತ್ ಪಟೇಲ್, ಹೊಸ ನೋಟುಗಳ ಶೀಘ್ರ ಮುದ್ರಣ ಮತ್ತು ಅರ್ಥ ವ್ಯವಸ್ಥೆಯ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ನೋಟು ಅಮಾನ್ಯ ಪ್ರಶ್ನೆಗಳಿಗೆ ಆರ್'ಬಿಐ ಗವರ್ನರ್ ಬಳಿ ಉತ್ತರವಿಲ್ಲ: ಸಂಸದೀಯ ಸಮಿತಿ ಟೀಕೆ
ಆದರೆ 2018ರ ಮಧ್ಯ ಭಾಗದಲ್ಲಿ ಕೇಂದ್ರ ಹಣಕಾಸು ಇಲಾಖೆ ಮತ್ತು ಆರ್‌ಬಿಐ ನಡುವೆ ಹಲವು ವಿಷಯಗಳ ಕುರಿತು ಭಿನ್ನಾಭಿಪ್ರಾಯ ತಲೆದೋರಿತು. ಪ್ರಮುಖವಾಗಿ ಎನ್‌ಪಿಎ ಮತ್ತು ಕೇಂದ್ರಕ್ಕೆ ಆರ್‌ಬಿಐ ಮೀಸಲು ಹಣ ವರ್ಗಾವಣೆ ಕುರಿತು ಹಣಕಾಸು ಇಲಾಖೆ ಮತ್ತು ಊರ್ಜಿತ್ ಪಟೇಲ್ ಮಧ್ಯೆ ತಿಕ್ಕಾಟ ಆರಂಭವಾಯಿತು.
ಮೋದಿ ಮಾತು ಕೇಳ್ತಿಲ್ಲಾ ಆರ್‌ಬಿಐ ಗವರ್ನರ್: ದಾರಿ ಬದಲಿಸಿದ ಪಟೇಲ್?
ಆರ್‌ಬಿಐ ಗವರ್ನರ್ ರಾಜೀನಾಮೆ ಡೇಟ್ ಫಿಕ್ಸ್ ?
ನೋಟ್ ಬ್ಯಾನ್ ಒಂದು ಅವಾಂತರ: ಊರ್ಜಿತ್ ಪಟೇಲ್ ದಿಢೀರ್ ಪಕ್ಷಾಂತರ?
ಉಂಡು ಮಲಗಿದ ಮೇಲೂ ಕಿತ್ತಾಡ್ತವ್ರಲ್ಲಪ್ಪ: ಏನಾಯ್ತು ಅಂತಾ ಹೇಳ್ರಪ್ಪ!
ಈ ತಿಕ್ಕಾಟ ತಾರಕಕ್ಕೇರಿದ ಪರಿಣಾಮ ಡಿಸೆಂಬರ್ 10, 2018ರಂದು ಊರ್ಜಿತ್ ಪಟೇಲ್ ಏಕಾಏಕಿ ಆರ್‌ಬಿಐ ಗರ್ವನರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಊರ್ಜಿತ್ ರಾಜೀನಾಮೆಗೆ ಕೌಟುಂಬಿಕ ಕಾರಣ ನೀಡಲಾಯಿತು. ಕೇಂದ್ರ ಸರ್ಕಾರ ಕೂಡಲೇ ಶಕ್ತಿಕಾಂತಾ ದಾಸ್ ಅವರನ್ನು ಆರ್‌ಬಿಐ ಗರ್ವನರ್ ಆಗಿ ನೇಮಿಸಿತು.
ಮೋದಿಯನ್ನು ನಡುನೀರಲ್ಲಿ ಬಿಟ್ಟ ಊರ್ಜಿತ್: ಆರ್‌ಬಿಐ ಸ್ಥಾನಕ್ಕೆ ರಾಜೀನಾಮೆ!
ಹೋಗ್ಬನ್ನಿ ಒಳ್ಳೆದಾಗ್ಲಿ: ಮೋದಿ ಬಿಚ್ಚಿಟ್ಟ ಊರ್ಜಿತ್ ರಹಸ್ಯ!
24 ಗಂಟೆಗಳಲ್ಲೇ ನೂತನ ಆರ್‌ಬಿಐ ಗವರ್ನರ್ ನೇಮಿಸಿದ ಕೇಂದ್ರ ಸರ್ಕಾರ..!
4. ಸುರ್ಜಿತ್ ಭಲ್ಲಾ:
ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿ ಸದಸ್ಯರಾಗಿದ್ದ ಸುರ್ಜಿತ್ ಭಲ್ಲಾ ಡಿಸೆಂಬರ್ 11, 2018ರಂದು ಏಕಾಏಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಊರ್ಜಿತ್ ಪಟೇಲ್ ಆರ್‌ಬಿಐ ಗರ್ವನರ್ ಹುದ್ದೆಗೆ ರಾಜೀನಾಮೆ ನೀಡಿದ ಕೇವಲ ಒಂದು ದಿನದ ಬಳಿಕ ಸುರ್ಜಿತ್ ಭಲ್ಲಾ ರಾಜೀನಾಮೆ ನೀಡಿದರು.
ಮೋದಿ ಅಕ್ಷರಶ: ಏಕಾಂಗಿ: ಕೈ ಕೊಟ್ಟ ಮತ್ತೋರ್ವ ಸಹವರ್ತಿ!
ಅಪನಗದೀಕರಣ ಮತ್ತು ಜಿಎಸ್‌ಟಿ ಜಾರಿ ವೇಳೆ ಮೋದಿ ಅವರನ್ನು ಹಾಡಿ ಹೊಗಳಿ ಅಟ್ಟಕ್ಕೆ ಏರಿಸಿದ್ದ ಸುರ್ಜಿತ್ ಭಲ್ಲಾ, ಪ್ರಧಾನಿ ಅವರ ಆರ್ಥಿಕ ಸಲಹಾ ಮಂಡಳಿಯಿಂದ ಹೊರ ಬಂದಿದ್ದು ಹಲವು ಚರ್ಚೆಗಳನ್ನು ಹುಟ್ಟುಹಾಕಿತು.
ಒಟ್ಟಾರೆ, ಪ್ರಧಾನಿ ಹುದ್ದೆ ಅಲಂಕರಿಸಿದ ಬಳಿಕ ದೇಶದ ಅರ್ಥ ವ್ಯವಸ್ಥೆಯ ರೂಪ ಬದಲಿಸುವ ಪಣ ತೊಟ್ಟಿರುವ ನರೇಂದ್ರ ಮೋದಿ, ತಮ್ಮ ಈ ಕಾರ್ಯ ಸಾಧನೆಗೆ ಹಲವರ ಮೇಲೆ ಅವಲಂಬಿತರಾಗಿದ್ದರು. ಆರಂಭದಲ್ಲಿ ಮೋದಿ ಅವರಿಗೆ ಸಾಥ್ ನೀಡಿದ ಈ ಎಲ್ಲಾ ಆರ್ಥಿಕ ತಜ್ಞರು, ಆ ನಂತರ ನಡೆದ ಹಲವು ಬೆಳವಣಿಗೆಗಳ ಪರಿಣಾಮವಾಗಿ ಮೋದಿಯಿಂದ ದೂರ ಸರಿದರು.
ಇದನ್ನೂ ಓದಿ-ಗುಡ್ ಬೈ 2018: ದಿನವೂ ಏಕೆ ಪೆಟ್ರೋಲ್ ಸುದ್ದಿ?, ಮಾರುಕಟ್ಟೆಯಷ್ಟೇ ನಾವೂ ಜಿದ್ದಿ!