ಅಯೋಧ್ಯೆ ಹೋಗೋ ಆಸೆ ಇರೋರಿಗೆ ಗುಡ್ ನ್ಯೂಸ್, 10 ದಿನ ತೆಡೆದುಕೊಳ್ಳಿ!

By Suvarna News  |  First Published Jan 22, 2024, 5:46 PM IST

ಅಯೋಧ್ಯೆಗೆ ಹೋಗ್ಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ನೀವು ಇದೇ ಪ್ಲಾನ್ ನಲ್ಲಿದ್ದರೆ ಇನ್ನು ಕೆಲ ದಿನ ವೇಟ್ ಮಾಡಿ. ದುಬಾರಿ ಬೆಲೆಗೆ ವಿಮಾನ ಹಾರಾಟ ನಡೆಸುವ ಬದಲು ಕಡಿಮೆ ಬೆಲೆಗೆ ರಾಮಲಾಲಾನ ದರ್ಶನಕ್ಕೆ ಹೋಗ್ಬಹುದು. 
 


ಭಾರತೀಯರ ಐದುನೂರು ವರ್ಷಗಳ ಕನಸು ಈಡೇರಿದೆ. ಸಾವಿರಾರು ಜನರ ಹೋರಾಟ, ಬಲಿದಾನಕ್ಕೆ ಈಗೊಂದು ಅರ್ಥ ಸಿಕ್ಕಿದೆ. ಅಯೋಧ್ಯೆಯಲ್ಲಿ ರಾಮನನ್ನು ನೋಡುವ ಜನರ ಆಸೆ ಕೊನೆಗೂ ಪೂರ್ಣಗೊಂಡಿದೆ. ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದೆ. ಭಾರತದಲ್ಲಿ ರಾಮನ ಭಕ್ತರ ಸಂಖ್ಯೆ ಸಾಕಷ್ಟಿದೆ. ಇಂದು ರಾಮಲಾಲಾನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಹಬ್ಬದಂತೆ ಆಚರಣೆ ಮಾಡಿದ ಜನರು ಜೀವನದಲ್ಲಿ ಒಮ್ಮೆಯಾದ್ರೂ ಅಯೋಧ್ಯೆಗೆ ಹೋಗ್ಬೇಕು ಎನ್ನುವ ಆಸೆ ಹೊಂದಿದ್ದಾರೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಅಯೋಧ್ಯೆ ಸದ್ಯ ತುಂಬಿ ತುಳುಕುತ್ತಿದೆ. ಅಯೋಧ್ಯೆಗೆ ಲಕ್ಷಾಂತರ ಮಂದಿ ಭೇಟಿ ನೀಡಿದ್ದಾರೆ. ಕೆಲ ದಿನಗಳ ಹಿಂದೆಯೇ ಇಂದು, ನಿನ್ನೆಯ ವಿಮಾನ ಟಿಕೆಟ್ ದರ ಗಗನಕ್ಕೇರಿತ್ತು. ಟಿಕೆಟ್ ಬೆಲೆ ನೋಡಿಯೇ ಅನೇಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಇನ್ನೊಮ್ಮೆ ಅಯೋಧ್ಯೆಗೆ ಭೇಟಿ ನೀಡಿದ್ರೆ ಆಯ್ತು, ಈಗ ಇಲ್ಲಿಯೇ ಹಬ್ಬ ಆಚರಿಸೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಅಂಥವರಿಗೆ ಖುಷಿ ಸುದ್ದಿ ಒಂದಿದೆ. ಅಯೋಧ್ಯೆಗೆ ಹೋಗಲು ನೀವು ಹೆಚ್ಚಿನ ಹಣ ಖರ್ಚು ಮಾಡ್ಬೇಕಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ವಿಮಾನ ದರಗಳು ಇಳಿಯಲಿವೆ. 

ಕೇವಲ ಹತ್ತೇ ಹತ್ತು ದಿನ ನೀವು ನಿಮ್ಮ ಆಸೆಯನ್ನು ಪಕ್ಕಕ್ಕಿಟ್ಟರೆ ಸಾಕು. ನಂತ್ರ ನೀವು ಆರಾಮವಾಗಿ ಅಯೋಧ್ಯೆ (Ayodhya)ಗೆ ಹೋಗಿ ಬರಬಹುದು. ಜನವರಿ ಇಪ್ಪತ್ತೊಂದು, ಇಪ್ಪತ್ತೆರಡು ಸೇರಿದಂತೆ ಇನ್ನು ಹತ್ತು ದಿನಗಳ ಕಾಲ ಅಯೋಧ್ಯೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ವಿಮಾನ (Flight) ಟಿಕೆಟ್ ಗಳ ಬೆಲೆ ಗಗನ ಮುಟ್ಟಿದೆ. ವರದಿ ಪ್ರಕಾರ, ಜನವರಿ ಇಪ್ಪನ್ಮೂರರಂದು ಅಯೋಧ್ಯೆ ಟಿಕೆಟ್ (ticket) ಬೆಲೆ ಹತ್ತರಿಂದ 15 ಸಾವಿರ ರೂಪಾಯಿಗಳ ನಡುವೆ ಇದೆ. ಇನ್ನು ಹತ್ತು ದಿನಗಳಲ್ಲಿ ಈ ಟಿಕೆಟ್ ಬೆಲೆಗಳು ಶೇಕಡಾ 70ರಷ್ಟು ಇಳಿಕೆ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Latest Videos

undefined

13 ಸಾವಿರ ಕೋಟಿ ಹೂಡಿಕೆ ಹಿಂತೆಗೆದುಕೊಂಡ ವಿದೇಶಿ ಹೂಡಿಕೆದಾರರು: ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆ ಹೆಜ್ಜೆ; ಕಾರಣ ಹೀಗಿದೆ..

ಈಗ ಹತ್ತು ಹದಿನೈದು ಸಾವಿರವಾದ ವಿಮಾನ್ ಟಿಕೆಟ್ ದರಗಳು ಹತ್ತು ದಿನಗಳ ನಂತ್ರ ಮೂರರಿಂದ ನಾಲ್ಕು ಸಾವಿರ ರೂಪಾಯಿಗೆ ಇಳಿಯಲಿದೆ. ದೆಹಲಿಯಿಂದ ಅಯೋಧ್ಯೆಗೆ ನೀವು ಫೆಬ್ರವರಿ ಮೂರರಂದು ಪ್ರಯಾಣ ಬೆಳೆಸುವ ಪ್ಲಾನ್ ನಲ್ಲಿದ್ದರೆ ಆಗ ನೀವು 3522 ರಿಂದ 4408 ರೂಪಾಯಿಗೆ ಟಿಕೆಟ್ ದರ ಪಾವತಿಸಿದ್ರೆ ಸಾಕು. ಇನ್ನು ನೀವು ಫೆಬ್ರವರಿ 4 ರಂದು ಅಯೋಧ್ಯೆಯಿಂದ ದೆಹಲಿಗೆ ಹಿಂತಿರುಗುವುದಾದ್ರೆ ಸ್ಪೈಸ್ ಜೆಟ್ ಏರ್ಲೈನ್ಸ್ ಕೇವಲ 3022 ರೂಪಾಯಿಗೆ ನಿಮಗೆ ಟಿಕೆಟ್ ನೀಡ್ತಿದೆ. ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಟಿಕೆಟ್‌ ದರ ಸ್ವಲ್ಪ ದುಬಾರಿಯಾಗಿದೆ. ಬಸ್ ನಂತೆಯೇ ವಿಮಾನಗಳು ಕೂಡ ಸಮಯಕ್ಕೆ ತಕ್ಕಂತೆ ಟಿಕೆಟ್ ದರಗಳಲ್ಲಿ ಬದಲಾವಣೆ ಮಾಡ್ತಿರುತ್ತವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ ಮತ್ತು ಸ್ಪೈಸ್ ಜೆಟ್ ಏರ್‌ಲೈನ್ಸ್ ದೆಹಲಿಯಿಂದ ಅಯೋಧ್ಯೆಗೆ ವಿಮಾನ ಸೌಲಭ್ಯ ನೀಡ್ತಿವೆ. 

ಅಯೋಧ್ಯೆ ಭಕ್ತಿಗೆ ಮಾತ್ರವಲ್ಲ,ಹೂಡಿಕೆಗೂ ನೆಚ್ಚಿನ ತಾಣ;ಇಂದು 250 ನಿವೇಶನ ಬಿಡುಗಡೆಗೊಳಿಸಿದ ರಿಯಲ್ ಎಸ್ಟೇಟ್ ಸಂಸ್ಥೆ

ನೀವು ಬೆಂಗಳೂರಿನಿಂದ ವಿಮಾನ ಪ್ರಯಾಣ ಬೆಳೆಸುವ ಪ್ಲಾನ್ ನಲ್ಲಿದ್ದರೆ ಬೆಲೆ ಸ್ವಲ್ಪ ಹೆಚ್ಚಾಗಲಿದೆ. ನೀವು ಆರು ಸಾವಿರದಿಂದ ಎಂಟು ಸಾವಿರ ರೂಪಾಯಿವರೆಗೆ ಹಣ ಪಾವತಿ ಮಾಡಬೇಕಾಗುತ್ತದೆ. ಬೇರೆ ಬೇರೆ ವಿಮಾನ ಹಾಗೂ ಸೌಲಭ್ಯಕ್ಕೆ ತಕ್ಕಂತೆ ಅದ್ರ ಬೆಲೆಗಳು ಕೂಡ ಏರಿಳಿತವಾಗಲಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ರೈಲಿನಲ್ಲೂ ನೀವು ಪ್ರಯಾಣ ಬೆಳೆಸಬಹುದು. ಇಲ್ಲಿ ಪ್ರಯಾಣದ ಬೆಲೆ ಕಡಿಮೆ ಇದ್ರೂ ಹೆಚ್ಚಿನ ಸಮಯವನ್ನು ನೀವು ಪ್ರಯಾಣಕ್ಕೆ ಮೀಸಲಿಡಬೇಕಾಗುತ್ತದೆ. 840 ರೂಪಾಯಿಯಿಂದ ಶುರು ಆಗುವ ರೈಲಿನ ದರಗಳು  2,183 ರೂಪಾಯಿವರೆಗೆ ಲಭ್ಯವಿದೆ. 
 

click me!