ಗ್ರಹಣದ ಕತೆ ಬಿಡಿ.. ಇಳಿದ ಚಿನ್ನದ ದರ ನೋಡಿ

By Web DeskFirst Published Jul 27, 2018, 4:55 PM IST
Highlights

ಗ್ರಹಣವಿರಲಿ, ಆಷಾಢ ಮಾಸವಿರಲಿ ಚಿನ್ನಾಭರಣದ ದರ ಇಳಿಕೆ ಅಂದರೆ ಭಾರತೀಯರ ಕಿವಿ ನೆಟ್ಟಗಾಗುತ್ತದೆ.  ಜಾಗತಿಕವಾಗಿ ಸದಾ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತದೆ. ಆದರೆ ಕಳೆದ ಕೆಲವು ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯ ಹಾದಿ ಹಿಡಿದಿದೆ.

ಚಿನ್ನದ ದರ ಶುಕ್ರವಾರದ ಮಾರುಕಟ್ಟೆಯಲ್ಲಿ 10 ಗ್ರಾಂ ಗೆ 190 ರೂ. ಇಳಿಕೆ ಕಂಡಿದೆ. ಇಳಿಕೆಯ ನಂತರ 30,740 ರು. ನಲ್ಲಿ ವಹಿವಾಟು ನಡೆಸುತ್ತಿದೆ.  ಸ್ಥಳೀಯ ಆಭರಣ ವ್ಯಾಪರಿಗಳಿಂದ ಬೇಡಿಕೆ ಕಡಿಮೆ ಆಗಿದ್ದು ದರ ಇಳಿಕೆಗೆ ಪ್ರಮುಖ ಕಾರಣ.

ಚಿನ್ನದೊಂದಿಗೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. 230 ರು. ಕಡಿಮೆಯಾಗಿರುವ ಬೆಳ್ಳಿ ಕೆಜಿಗೆ 39,200 ರೂಪಾಯಿ ಆಗಿದೆ. ಪರೋಕ್ಷವಾಗಿ ಆಭರಣದ ದರದ ಮೇಲೂ  ಇದು ಪರಿಣಾಮ ಬೀರಲಿದೆ. 

ಚಿನ್ನದ ದರ ನಿರಂತರ ಇಳಿಕೆ

ಯುರೋಪಿಯನ್ ಯುನಿಯನ್ ಕಾರುಗಳ ಮೇಲಿನ ಸುಂಕವನ್ನು ಯುಎಸ್‌ಎ  ಹಿಂದಕ್ಕೆ ಪಡೆದಿರುವುದು ಪರಿಣಾಮ ಬೀರಿದೆ.ಕಳೆದ 6 ತಿಂಗಳಿನಲ್ಲಿಯೆ ಚಿನ್ನದ ದರ ಅತ್ಯಂತ ಕಡಿಮೆಯಾಗಿದೆ. ಇನ್ನೊಂದು ಕಡೆ ಷೇರು ಮಾರುಕಟ್ಟೆ ಉತ್ತಮ ವಹಿವಾಟು ನಡೆಸುತ್ತಿರುವುದರಿಂದ ಹೂಡಿಕೆದಾರರು ಚಿನ್ನದ ಆಯ್ಕೆಯಿಂದ ಹಿಂದೆ ಸರಿಯುತ್ತಿದ್ದಾರೆ.

click me!