ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್ಬರ್ಗ್ ಶಾಕ್
ಕೇವಲ 2 ಗಂಟೆಯಲ್ಲಿ ಲಕ್ಷಾಂತರ ಕೋಟಿ ನಷ್ಟ
ಷೇರು ಮಾರುಕಟ್ಟೆಯಲ್ಲಿ ಫೇಸ್ಬುಕ್ ಮೌಲ್ಯ ಕುಸಿತ
ಫೇಸ್ಬುಕ್ ಷೇರುಗಳ ಬೆಲೆಯಲ್ಲಿ ಶೇ.20 ರಷ್ಟು ಕುಸಿತ
1 ಲಕ್ಷದ 16 ಸಾವಿರದ 64 ಕೋಟಿ ರೂ. ನಷ್ಟ
ನ್ಯೂಯಾರ್ಕ್(ಜು.27): ಫೇಸ್ಬುಕ್ ಎಂಬ ಸೋಷಿಯಲ್ ಮಿಡಿಯಾದ ಡಾನ್ ಮಾರ್ಕ್ ಜೂಕರ್ಬರ್ಗ್ , ಕೇವಲ 2 ಗಂಟೆಗಳಲ್ಲಿ ಬರೋಬ್ಬರಿ 1 ಲಕ್ಷದ 16 ಸಾವಿರದ 64 ಕೋಟಿ ರೂ. ಕಳೆದುಕೊಂಡಿದ್ದಾರೆ.
ಹೌದು, ಇದು ಅಚ್ಚರಿಯಾದರೂ ಸತ್ಯ. ಫೇಸ್ಬುಕ್ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಕೇವಲ 2 ಗಂಟೆಗಳಲ್ಲಿ ಭಾರೀ ಕುಸಿತ ಕಾಣುವ ಮೂಲಕ , ಜೂಕರ್ಬರ್ಗ್ ಬರೋಬ್ಬರಿ 1 ಲಕ್ಷದ 16 ಸಾವಿರದ 64 ಕೋಟಿ ರೂ. ಕಳೆದುಕೊಂಡಿದ್ದಾರೆ.
ಜೂಕರ್ಬರ್ಗ್ ಕಂಪನಿಯ ಎರಡನೇ ತ್ರೈಮಾಸಿಕದ ವರದಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು. ಈ ವರದಿಯಲ್ಲಿ ಕಂಪನಿ ಲಾಭಾಂಶದಲ್ಲಿ ಕಡಿಮೆಯಾಗಿರುವುದನ್ನು ಜೂಕರ್ಬರ್ಗ್ ಪ್ರಸ್ತಪಾಸಿದ್ದರು. ಹೀಗಾಗಿ ನ್ಯೂಯಾರ್ಕ್ ಷೇರುಮಾರುಕಟ್ಟೆಯಲ್ಲಿ ಫೇಸ್ಬುಕ್ ಷೇರುಗಳ ಬೆಲೆಯಲ್ಲಿ ಶೇ.20 ರಷ್ಟು ಕುಸಿತ ಕಂಡುಬಂದಿತು.
ಫೇಸ್ಬುಕ್ ಕಂಟೆಂಟ್ ಪಾಲಿಸಿ, ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನ ಕಾಪಾಡುವಲ್ಲಿ ವಿಫಲತೆ, ಜಾಹೀರಾತು ನೀತಿಯಲ್ಲಿ ಬದಲಾವಣೆ ಮಾಡಿದ್ದರಿಂದ ಕಂಪನಿ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. ಶ್ರೀಮಂತರ ಲಿಸ್ಟ್ನಲ್ಲಿ ಕುಸಿತ ಕಂಡ ಜೂಕರ್ಬರ್ಗ್, ಬ್ಲೂಮ್ ಬರ್ಗ್ ಬಿಲೇನಿಯರ್ ಇಂಡೆಕ್ಸ್ನಲ್ಲಿ ಮೂರನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
70 ಬಿಲಿಯನ್ ಡಾಲರ್ನಿಂದ ಕೆಳಗಿಳಿದು ಪಟ್ಟಿಯಲ್ಲಿ ಜೂಕರ್ಬರ್ಗ್ ಕುಸಿತ ಕಂಡಿದ್ದಾರೆ. ಕಂಪನಿಯ ಮುಖ್ಯ ಹಣಕಾಸು ಕಾರ್ಯನಿರ್ವಹಣಾಧಿಕಾರಿ ಡೆವಿಡ್ ವಾರ್ನರ್ ಎರಡನೇ ತ್ರೈವಾರ್ಷಿಕ ವರದಿಯನ್ನು ಮಂಡಿಸಿದ್ದರು. ಅಲ್ಲಿವರೆಗೂ ಏರುಮುಖವಾಗಿದ್ದ ಷೇರುಗಳ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಶೇ 24 ರಷ್ಟು ಕುಸಿತ ಕಂಡು ಭಾರಿ ನಷ್ಟ ಅನುಭವಿಸಿದೆ.