Indian Railways: ರೈಲ್ವೆ ಉದ್ಯೋಗಿಗಳಿಗೆ ಬಂಪರ್‌, ದೀಪಾವಳಿಗೆ 28200 ರೂಪಾಯಿ ಹೆಚ್ಚುವರಿ ಬೋನಸ್‌?

By Santosh NaikFirst Published Sep 22, 2024, 7:40 PM IST
Highlights

ಏಳನೇ ವೇತನ ಆಯೋಗದ ಆಧಾರದ ಮೇಲೆ ಬೋನಸ್ (ಪಿಎಲ್‌ಬಿ) ಲೆಕ್ಕ ಹಾಕುವಂತೆ ರೈಲ್ವೆ ನೌಕರರ ಗುಂಪು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದೆ. ಪ್ರಸ್ತುತ ಬೋನಸ್ ಲೆಕ್ಕಾಚಾರವು ಆರನೇ ವೇತನ ಆಯೋಗದ ಕನಿಷ್ಠ ವೇತನವನ್ನು ಆಧರಿಸಿದೆ, ಇದು ನೌಕರರಿಗೆ ಅನ್ಯಾಯವಾಗಿದೆ ಎಂದು ಅವರು ವಾದಿಸುತ್ತಾರೆ.

7th Pay Commission: ನೀವೇ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ನಿಮ್ಮ ಕುಟುಂಬದ ಯಾರಾದರೂ ರೈಲ್ವೆಯಲ್ಲಿದ್ದರೆ, ಇದು ನಿಮಗೆ ಖುಷಿ ಸುದ್ದಿ. ಹೌದು, ಆರನೇ ವೇತನ ಆಯೋಗದ ಬದಲು ಏಳನೇ ವೇತನ ಆಯೋಗದ ಆಧಾರದ ಮೇಲೆ ಬೋನಸ್ (ಪಿಎಲ್‌ಬಿ) ಲೆಕ್ಕ ಹಾಕುವಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರೈಲ್ವೆ ನೌಕರರ ಗುಂಪು ಮನವಿ ಮಾಡಿದೆ. ಆರನೇ ವೇತನ ಆಯೋಗದ ಪ್ರಕಾರ, ಪ್ರಸ್ತುತ ಬೋನಸ್ ತಿಂಗಳಿಗೆ ಕನಿಷ್ಠ 7,000 ರೂ.ಗಳ ವೇತನವನ್ನು ಆಧರಿಸಿದೆ ಎಂದು ಭಾರತೀಯ ರೈಲ್ವೆ ನೌಕರರ ಒಕ್ಕೂಟದ (ಐಆರ್‌ಇಎಫ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸರ್ವಜೀತ್ ಸಿಂಗ್ ಹೇಳಿದ್ದಾರೆ. ಆದರೆ ಏಳನೇ ವೇತನ ಆಯೋಗದ ಅಡಿಯಲ್ಲಿ ಕನಿಷ್ಠ ವೇತನ 18,000 ರೂಪಾಯಿ ಆಗಿದೆ. ರೈಲ್ವೆ ನೌಕರರು ಇದನ್ನು 2016ರ ಜನವರಿ 1 ರಿಂದ ಪಡೆಯುತ್ತಿದ್ದಾರೆ.

ನೌಕರರ ಪರಿಶ್ರಮದಿಂದ ರೈಲ್ವೆ ಆದಾಯ ಹೆಚ್ಚಿದೆ: ಕನಿಷ್ಠ ವೇತನ 7 ಸಾವಿರ ರೂಪಾಯಿಗಳ ಆಧಾರದ ಮೇಲೆ ಪಿಎಲ್ ಬಿ ಲೆಕ್ಕ ಹಾಕುತ್ತಿರುವುದು ನೌಕರರಿಗೆ ಅನ್ಯಾಯವಾಗಿದೆ ಎಂದು ಅವರ ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ, ಜನರು ತಮ್ಮ ಮನೆಗಳಿಂದ ಹೊರಗೆ ಬರದಿದ್ದಾಗ, ರೈಲ್ವೆ ನೌಕರರು ರೈಲುಗಳ ನಿರಂತರ ಓಡಾಟಕ್ಕೆ ನೆರವಾಗಿದ್ದು ಎಂದು ಅನೇಕ ಐಆರ್‌ಇಎಫ್ ಸದಸ್ಯರು ಹೇಳಿದ್ದಾರೆ. ಇದಾದ ಬಳಿಕ ರೈಲ್ವೇ ಆದಾಯದಲ್ಲಿ ಭಾರೀ ಏರಿಕೆಯಾಗಿರುವುದು ತ್ರೈಮಾಸಿಕ ವರದಿಯಿಂದ ಸ್ಪಷ್ಟವಾಗಿದೆ. ಕೋವಿಡ್ ಸಮಯದಲ್ಲಿ ರೈಲ್ವೇ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿಗಳನ್ನು ರದ್ದುಗೊಳಿಸಿರುವುದು ರೈಲ್ವೆಯ ಲಾಭದ ಮೇಲೆ ಪರಿಣಾಮ ಬೀರಿದೆ.

ರೈಲ್ವೆ ನೌಕರರು 78 ದಿನಗಳ ಬೋನಸ್ ಪಡೆಯುತ್ತಾರೆ: ಸರ್ಕಾರದ ಸೂಚನೆಗಳ ಪ್ರಕಾರ, ರೈಲ್ವೆ ನೌಕರರು 78 ದಿನಗಳ ಮೂಲ ವೇತನಕ್ಕೆ ಸಮಾನವಾದ PLB ಬೋನಸ್ ಪಡೆಯಬೇಕು ಎಂದು IREF ಒತ್ತಿಹೇಳಿದೆ. ಆದರೆ ಪ್ರಸ್ತುತ ಪಾವತಿ 7,000 ರೂಪಾಯಿಗಳ ಆಧಾರದ ಮೇಲೆ ಕೇವಲ 17,951 ರೂಪಾಯಿ ಪಡೆಯುತ್ತಿದ್ದಾರೆ. ಏಳನೇ ವೇತನ ಆಯೋಗದ ಅಡಿಯಲ್ಲಿ ರೈಲ್ವೆಯಲ್ಲಿ ಕನಿಷ್ಠ ಮೂಲ ವೇತನ 18,000 ರೂಪಾಯಿ. ಇದರಿಂದ 78 ದಿನಗಳವರೆಗೆ 17,951 ರೂಪಾಯಿ ಬೋನಸ್ ತುಂಬಾ ಕಡಿಮೆಯಾಗಿದೆ. ಹಣದುಬ್ಬರ ಏರಿಕೆಯ ನಡುವೆ ಇದು ಸಾಕಷ್ಟು ಆತಂಕಕಾರಿಯಾಗಿದೆ. 18,000 ಮೂಲ ವೇತನದ ಪ್ರಕಾರ 78 ದಿನಗಳ ಬೋನಸ್ 46,159 ರೂಪಾಯಿ ಆಗಿರಲಿದೆ ಎಂದಿದ್ದಾರೆ.

Latest Videos

ರಾಜ್ಯದ ಕರಾವಳಿಗೆ ಶುಭ ಸುದ್ದಿ, ಶೀಘ್ರದಲ್ಲೇ ಭಾರತೀಯ ರೈಲ್ವೆಯಲ್ಲಿ ಕೊಂಕಣ್‌ ರೈಲ್ವೆ ವಿಲೀನ!

28,200 ರೂ.ಗಳ ಲಾಭವನ್ನು ನೀವು ಹೇಗೆ ಪಡೆಯುತ್ತೀರಿ?: 7 ನೇ ವೇತನ ಆಯೋಗದ ಪ್ರಕಾರ 78 ದಿನಗಳ ಬೋನಸ್ ನೀಡಲು ಸರ್ಕಾರ ನಿರ್ಧರಿಸಿದರೆ, ಪ್ರತಿ ಉದ್ಯೋಗಿಗೆ ಕನಿಷ್ಠ (46,159-17,951) = 28,208 ರೂಪಾಯಿ ಹೆಚ್ಚುವರಿ ಸಿಗಲಿದೆ. ರೈಲ್ವೆ ನೌಕರರ ಒಕ್ಕೂಟವು ಪತ್ರದ ಮೂಲಕ ಮಾಡಿದ ಮನವಿಯಲ್ಲಿ, 7 ನೇ ವೇತನ ಆಯೋಗದ ವೇತನದ ಪ್ರಕಾರ ಎಲ್ಲಾ ರೈಲ್ವೆ ಉದ್ಯೋಗಿಗಳಿಗೆ ಉತ್ಪಾದಕತೆ ಲಿಂಕ್ಡ್ ಬೋನಸ್ ಅನ್ನು ಲೆಕ್ಕಹಾಕಲು ಭಾರತೀಯ ರೈಲ್ವೆ ನೌಕರರ ಒಕ್ಕೂಟವು ವಿನಂತಿಸಿದೆ ಎಂದು ಹೇಳಲಾಗಿದೆ. 

Indian Railways: ನಿಮ್ಮ ಟಿಕೆಟ್‌ನಲ್ಲಿರುವ H1, H2 ಮತ್ತು A1 ಕೋಚ್‌ ಮಾರ್ಕಿಂಗ್‌ನ ಅರ್ಥವೇನು?

click me!