ಚಿನ್ನದ ದರ ಭಾರೀ ಇಳಿಕೆ, ಗ್ರಾಹಕರಿಗೆ ಖುಷಿಯೋ ಖುಷಿ: ಇಲ್ಲಿದೆ ಸೆ. 22ರ ಚಿನ್ನದ ಬೆಲೆ!

By Suvarna NewsFirst Published Sep 22, 2020, 4:39 PM IST
Highlights

ಕೊರೋನಾ ನಡುವೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಏರುತ್ತಿದೆ ಚಿನ್ನದ ಬೆಲೆ| ಕಳೆದೊಂದು ವಾರದಿಂದ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ| ಇಲ್ಲಿದೆ ಸೆ. 22ರ ಗೋಲ್ಡ್‌ ರೇಟ್

ಬೆಂಗಳೂರು(ಸೆ.22): ಕೊರೋನಾ ಎಂಬ ಮಹಾಮಾರಿ ಜನ ಸಾಮಾನ್ಯರ ಜೀವನ ಶೈಲಿಯನ್ನು ಬದಲಾಯಿಸಿದ್ದು, ಅನಾವಾಶ್ಯಕ ಓಡಾಟಕ್ಕೆ ಬ್ರೇಕ್ ಹಾಕಿದೆ. ಅತ್ತ ಉದ್ಯಮಗಳೂ ನೆಲ ಕಚ್ಚಿವೆ. ಈ ನಡುವೆ ಚಿನ್ನದ ಬೇಡಿಕೆ ಕುಸಿದಿದ್ದು, ದರ ಇಳಿಕಯಾಗಬಹುದೆಂದು ಭಾವಿಸಿದ್ದವರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿಸಿತ್ತು. ನೋಡ ನೋಡುತ್ತಿದ್ದಂತೆಯೇ ಹಳದಿ ಲೋಹ ದಾಖಲೆಯ ಏರಿಕೆ ಕಂಡಿತ್ತು. ಕೆಲ ದಿನಗಳಿಂದ ಚಿನ್ನದ ದರದಲ್ಲಿ ಏರಿಕೆ ಇಳಿಕೆಯಾಗಲಾರಂಭಿಸಿದೆ. ಇಂದು ಸೆ. 22ರಂದೂ ಚಿನ್ನದ ದರ ಕುಸಿದಿದೆ. ಇಲ್ಲಿದೆ ಇಂದಿನ ಗೋಲ್ಡ್ ರೇಟ್.

ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಭಾರಿ ಇಳಿಕೆ, ಇಲ್ಲಿದೆ ಸೆ. 21ರ ಬೆಲೆ!

ಇಂದು ಮಂಗಳವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 900 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಲೆ 48,050 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  980 ರೂಪಾಯಿ ಇಳಿಕೆ ಕಂಡಿದ್ದು, 52,420 ರೂಪಾಯಿ ಆಗಿದೆ. 

ಇನ್ನು ಇತ್ತ ಬೆಳ್ಳಿ ದರದಲ್ಲೂ 6,400ರೂ. ಇಳಿಕೆಯಾಗಿದ್ದು, ಒಂದು ಕೆ. ಜಿ ಬೆಳ್ಳಿಯ ಬೆಲೆ 60,600 ರೂ ಆಗಿದೆ.

ಚಿನ್ನ ಖರೀದಿಗೆ ಮುನ್ನ ಇವತ್ತಿನ ದರ ಒಮ್ಮೆ ನೋಡಿ, ಇಲ್ಲಿದೆ ಸೆ. 20ರ ಗೋಲ್ಡ್‌ ರೇಟ್!

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

click me!