ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ!

By Suvarna News  |  First Published Sep 22, 2020, 8:13 AM IST

ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ| ಅಮೆರಿಕದ ತನಿಖಾ ಸಂಸ್ಥೆಯ ರಹಸ್ಯ ವರದಿಯಲ್ಲಿ ಪತ್ತೆ| ಈ ಹಣ ಉಗ್ರವಾದ, ಡ್ರಗ್ಸ್‌ ವ್ಯವಹಾರಕ್ಕೆ ಬಳಕೆ ಸಾಧ್ಯತೆ


ಮುಂಬೈ(ಸೆ.22): ಭಾರತದ ಬಹುತೇಕ ಎಲ್ಲ ಬ್ಯಾಂಕುಗಳು 2010 ಹಾಗೂ 2017ರ ನಡುವಿನ ಅವಧಿಯಲ್ಲಿ ಸುಮಾರು 66,000 ಕೋಟಿ ರು. ಮೊತ್ತದ ಅನುಮಾನಾಸ್ಪದ ಹಣಕಾಸು ವ್ಯವಹಾರ ನಡೆಸಿರುವುದನ್ನು ಅಮೆರಿಕದ ತನಿಖಾ ಸಂಸ್ಥೆಯೊಂದು ಪತ್ತೆಹಚ್ಚಿದೆ. ಈ ಹಣ ಭಯೋತ್ಪಾದನೆ, ಡ್ರಗ್ಸ್‌ ವ್ಯವಹಾರ ಹಾಗೂ ಆರ್ಥಿಕ ವಂಚನೆಗಳಿಗೆ ಬಳಕೆಯಾಗಿರುವ ಸಾಧ್ಯತೆಯಿದೆ.

ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಭಾರಿ ಇಳಿಕೆ, ಇಲ್ಲಿದೆ ಸೆ. 21ರ ಬೆಲೆ!

Tap to resize

Latest Videos

ಅಮೆರಿಕದ ಹಣಕಾಸು ಇಲಾಖೆಯ ಆರ್ಥಿಕ ಅಪರಾಧಗಳ ಜಾರಿ ಜಾಲ (ಫಿನ್‌ಸೆನ್‌) ಎಂಬ ವಿಭಾಗ ಜಗತ್ತಿನಾದ್ಯಂತ ಬ್ಯಾಂಕುಗಳ ನಡುವೆ ನಡೆದ 2 ಲಕ್ಷ ಕೋಟಿ ಡಾಲರ್‌ ಮೊತ್ತದ 18,153 ಅನುಮಾನಾಸ್ಪದ ವ್ಯವಹಾರಗಳನ್ನು ಪಟ್ಟಿಮಾಡಿದೆ. ಅವುಗಳ ಪೈಕಿ ಭಾರತದ ಸರ್ಕಾರಿ, ಖಾಸಗಿ ಹಾಗೂ ವಿದೇಶಿ ಬ್ಯಾಂಕುಗಳ 406 ವ್ಯವಹಾರಗಳಿವೆ. ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್‌ ಎಸ್‌ಬಿಐನಿಂದ ಹಿಡಿದು ಅತಿದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿವರೆಗೆ ಬಹುತೇಕ ಎಲ್ಲ ಬ್ಯಾಂಕುಗಳೂ ಇಂತಹ ವ್ಯವಹಾರ ನಡೆಸಿವೆ ಎಂದು ಫಿನ್‌ಸೆನ್‌ನ ರಹಸ್ಯ ಕಡತಗಳಲ್ಲಿ ದಾಖಲಾಗಿದ್ದು, ಅದನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಿಕೋದ್ಯಮ ಒಕ್ಕೂಟ (ಐಸಿಐಜೆ) ಬಹಿರಂಗಗೊಳಿಸಿದೆ.

ಭಾರತೀಯ ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ಈ ಅವಧಿಯಲ್ಲಿ ವಿದೇಶಿ ಬ್ಯಾಂಕುಗಳಿಂದ ಒಟ್ಟಾರೆ ಸುಮಾರು 36 ಸಾವಿರ ಕೋಟಿ ರು.ಗಳಷ್ಟುಹಣ ಅನುಮಾನಾಸ್ಪದವಾಗಿ ರವಾನೆಯಾಗಿದ್ದರೆ, ವಿದೇಶಿ ಬ್ಯಾಂಕುಗಳಲ್ಲಿರುವ ಖಾತೆಗಳಿಗೆ ಭಾರತೀಯ ಬ್ಯಾಂಕುಗಳಿಂದ ಸುಮಾರು 30 ಸಾವಿರ ಕೋಟಿ ರು. ಹಣ ಅನುಮಾನಾಸ್ಪದವಾಗಿ ರವಾನೆಯಾಗಿದೆ. ಈ ಹಣವೆಲ್ಲ ಅಕ್ರಮ ಹಣ ಎಂದು ಹೇಳುವುದಕ್ಕೆ ಸಾಕ್ಷ್ಯವಿಲ್ಲ, ಆದರೆ ವ್ಯವಹಾರ ಅನುಮಾನಾಸ್ಪದವಾಗಿದೆ ಎಂದು ದಾಖಲೆಗಳು ಹೇಳುತ್ತವೆ.

30 ವರ್ಷ ಶ್ರಮಿಸಿ 3 ಕಿ.ಮೀ. ಕಾಲುವೆ ತೋಡಿದ ರೈತನಿಗೆ ಮಹಿಂದ್ರಾ ಟ್ರಾಕ್ಟರ್‌ ಗಿಫ್ಟ್‌!

ಎಸ್‌ಬಿಐ, ಪಿಎನ್‌ಬಿ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ, ಇಂಡಸ್‌ಇಂಡ್‌, ಆ್ಯಕ್ಸಿಸ್‌, ಐಸಿಐಸಿಐ, ಕೊಟಕ್‌ ಮಹಿಂದ್ರಾ, ಯಸ್‌, ಇಂಡಿಯನ್‌ ಓವರ್‌ಸೀಸ್‌, ಕೆನರಾ, ಕರೂರ್‌ ವೈಶ್ಯ, ಸ್ಟಾಂಡರ್ಡ್‌ ಚಾರ್ಟರ್ಡ್‌, ಬ್ಯಾಂಕ್‌ ಆಫ್‌ ಬರೋಡಾ, ಅಲಹಾಬಾದ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಕರ್ನಾಟಕ ಬ್ಯಾಂಕ್‌, ವಿಜಯಾ ಬ್ಯಾಂಕ್‌ ಸೇರಿದಂತೆ ಅನೇಕ ಬ್ಯಾಂಕುಗಳ ಹೆಸರು ಈ ಪಟ್ಟಿಯಲ್ಲಿದೆ.

click me!