
ಬೆಂಗಳೂರು(ಸೆ.11): ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ದರ ಏರಿಕೆ-ಇಳಿಕೆ ಹಾದಿಯಲ್ಲಿ ಸಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ಭಾರತೀಯ ಮಾರುಕಟ್ಟೆ ಎರಡರಲ್ಲೂ ಚಿನ್ನ ಇಳಿಕೆ ದಾಖಲಿಸಿದೆ.
ಎಂಸಿಕ್ಸ್ ಗೋಲ್ಡ್ ಪ್ಯೂಚರ್ಸ್ ಶೇ. 0.9 ಇಳಿಕೆ ಕಂಡಿದ್ದು ಹತ್ತು ಗ್ರಾಂಗೆ 51,306 ರೂ. ನಲ್ಲಿ ವಹಿವಾಟು ನಡೆಸಿದೆ. ಆದರೆ ಬೆಳ್ಳಿ ದರ ದಿಢೀರ್ ಎಂದು ಶೇ. 1.5% ಏರಿಕೆ ಕಂಡು ಕೆಜಿಗೆ 67970ರೂ. ನಲ್ಲಿ ವಹಿವಾಟು ನಡೆಸಿದೆ.
ಡ್ರಗ್ಸ್ ಲೋಕಕ್ಕೆ ಚಿನ್ನ ಸ್ಮಗ್ಲಿಂಗ್ ನಂಟು
ಬೆಂಗಳೂರು ದರ; ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 250 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಬೆಲೆ 48,400 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 270 ರೂಪಾಯಿ ಇಳಿಕೆ ಕಂಡಿದ್ದು, 52,800 ರೂಪಾಯಿ ಆಗಿದೆ.
ಬೆಳ್ಳಿ ದರವೂ ಬೆಂಗಳೂರಿನಲ್ಲಿ ಇಳಿಕೆಯಾಗಿದೆ. ಬೆಳ್ಳಿ ದರ 580 ರೂಪಾಯಿ ಇಳಿಕೆಯಾಗಿದ್ದು ಒಂದು ಕೆಜಿ ಬೆಳ್ಳಿ ಬೆಲೆ 67,980 ರೂ ಆಗಿದೆ. ಅನ್ ಲಾಕ್ ನಂತರ ಹೂಡಿಕೆದಾರರು ಬೇರೆ ಬೇರೆ ಕ್ಷೇತ್ರದ ಕಡೆ ಗಮನ ಹರಿಸುತ್ತಿದ್ದು ಗಣನೀಯ ಏರಿಕೆ ಅಥವಾ ಇಳಿಕೆ ಕಂಡುಬರುತ್ತಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.