ಚಿನ್ನದ ದರ ಮತ್ತೆ ಏರಿಕೆ: ಇಲ್ಲಿದೆ ಭಾನುವಾರದ ಗೋಲ್ಡ್ ರೇಟ್!

Published : Dec 06, 2020, 05:06 PM IST
ಚಿನ್ನದ ದರ ಮತ್ತೆ ಏರಿಕೆ: ಇಲ್ಲಿದೆ ಭಾನುವಾರದ ಗೋಲ್ಡ್ ರೇಟ್!

ಸಾರಾಂಶ

ಇಳಿಕೆಯ ಹಾದಿಯಲ್ಲಿದ್ದ ಚಿನ್ನ ಮತ್ತೆ ಏರಿಕೆ| ಬೆಳ್ಳಿ ದರವೂ ಏರಿಕೆ| ಇಲ್ಲಿದೆ ಡಿಸೆಂಬರ್ 06 ರ ಚಿನ್ನ, ಬೆಳ್ಳಿ ದರ

ಬೆಂಗಳೂರು(ಡಿ.06): ದೀಪಾವಳಿ ಹಬ್ಬದ ಬಳಿಕ ಭಾರೀ ಇಳಿಕೆ ಕಂಡಿದ್ದ ಚಿನ್ನದ ದರ, ಸದ್ಯ ಕೊಂಚ ಏರಲಾರಂಭಿಸಿದೆ. ಈ ಮೂಲಕ ಬಂಗಾರ ಬೆಲೆ ಇಳಿಯಬಹುದೆಂದು ಕಾದವರಿಗೆ ಕೊಂಚ ನಿರಾಸೆಯಾಗಿದೆ. ಇಲ್ಲಿದೆ ನೋಡಿ ಡಿ. 06ರ ರೇಟ್

ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 10ರೂ. ಏರಿಕೆಯಾಗಿ 45,910 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 10 ರೂ. ಏರಿಕೆಯಾಗಿ, 50,080 ರೂಪಾಯಿ ಆಗಿದೆ. 

ಇನ್ನು ಇತ್ತ ಬೆಳ್ಳಿ ದರದಲ್ಲಿ ಯಾಔಉದೇ ಬದಲಾವಣೆಯಾಗಿಲ್ಲ, ಒಂದು ಕೆ. ಜಿ ಬೆಳ್ಳಿ ಬೆಲೆ 63,900 ರೂ. ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!