ವಿಶ್ವಾದ್ಯಂತ ಕೊರೋನಾ ಅಟ್ಟಹಾಸ| ಕೊರೋನಾ ಆರ್ಥಿಕ ಹೊರೆ| ಅರ್ಜೆಂಟೀನಾದಲ್ಲಿ ಶ್ರೀಮಂತರ ಮೇಲೆ ತೆರಿಗೆ
ಬ್ಯೂನಸ್ ಐರಿಸ್(ಡಿ.06): ಕೊರೋನಾ ವೈರಸ್ ಸೃಷ್ಟಿಸಿದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅರ್ಜೆಂಟೀನಾ ಸರ್ಕಾರ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ತೀರ್ಮಾನ ಕೈಗೊಂಡಿದೆ.
ಬಡವರು ಮತ್ತು ಸಣ್ಣ ವ್ಯಾಪಾರಿಗಳಿಗೆ ಪರಿಹಾರ ಮತ್ತು ವೈದ್ಯಕೀಯ ಸಲಕರಣೆಗಳ ಪೂರೈಕೆಗಾಗಿ 12,000 ಶ್ರೀಮಂತರಿಂದ ತೆರಿಗೆ ಸಂಗ್ರಹಿಸುವ ಪ್ರಸ್ತಾವನೆಯನ್ನು ಅರ್ಜೆಂಟೀನಾದ ಸೆನೆಟ್ ಬಹುಮತದಿಂದ ಅಂಗೀಕರಿಸಿದೆ. ಈ ತೆರಿಗೆಯಿಂದ 27,750 ಕೋಟಿ ರು. ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಅಧ್ಯಕ್ಷ ಅಲ್ಬೆರ್ಟೊ ಫರ್ನಾಂಡಿಸ್ ಹೇಳಿದ್ದಾರೆ.
undefined
ಶ್ರೀಮಂತರ ತೆರಿಗೆಯ ಅಡಿಯಲ್ಲಿ 75 ಕೋಟಿಗಿಂತಲೂ ಅಧಿಕ ಆಸ್ತಿ ಇರುವವರು ದೇಶದಲ್ಲಿ ಹೊಂದಿರುವ ಸಂಪತ್ತಿನ ಶೇ.3.5ರಷ್ಟುಹಾಗೂ ವಿದೇಶಗಳಲ್ಲಿ ಗಳಿಸಿರುವ ಸಂಪತ್ತಿನ ಶೇ. 5.25ರಷ್ಟನ್ನು ಸರ್ಕಾರಕ್ಕೆ ನೀಡಬೇಕಿದೆ.
4.4 ಕೋಟಿ ಜನಸಂಖ್ಯೆ ಇರುವ ಅರ್ಜೆಂಟೀನಾದಲ್ಲಿ 14 ಲಕ್ಷ ಕೊರೋನಾ ಕೇಸ್‌ಗಳು ಪತ್ತೆ ಆಗಿದ್ದು, 39,500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.