ಚಿನ್ನ, ಬೆಳ್ಳಿ ಕತೆ ಏನು? ಅನ್ನೋರಿಗೆ ಇಲ್ಲಿದೆ ಅ.04ರ ಗೋಲ್ಡ್ ರೇಟ್

Published : Oct 04, 2020, 04:47 PM IST
ಚಿನ್ನ, ಬೆಳ್ಳಿ ಕತೆ ಏನು? ಅನ್ನೋರಿಗೆ ಇಲ್ಲಿದೆ ಅ.04ರ ಗೋಲ್ಡ್ ರೇಟ್

ಸಾರಾಂಶ

ಚಿನ್ನದ ದರದಲ್ಲಿ ಮತ್ತೆ ಏರಿಕೆಯಾಗಿದೆ| ಹಾವು ಏಣಿ ಆಟವಾಡುತ್ತಿದ್ದ ಬಂಗಾರ ದರ ಮತ್ತೆ ಏರಿಕೆ| ಇಲ್ಲಿದೆ ನೋಡಿ ಅಕ್ಟೋಬರ್ 04ರ ದರ

ಬೆಂಗಳೂರು(ಅ.04): ಕೊರೋನಾತಂಕ ನಡುವೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹಳದಿ ಲೋಹದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮವೆಂಬಂತೆ ಬಂಗಾರ ದರ ಮಹಾಮಾರಿ ನಡುವೆಯೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಸದ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗತೊಡಗಿದ್ದು, ಗ್ರಾಹಕರೂ ಖರೀದಿಸಬೇಕಾ? ಬೇಡವಾ? ಎಂಬ ಗೊಂದಲದಲ್ಲಿದ್ದಾರೆ.

ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ: ಚಿನ್ನ, ಬೆಳ್ಳಿ ದರವೇನು ಅನ್ನೋರಿಗೆ ಇಲ್ಲಿದೆ ಉತ್ತರ!

ಇಂದು ಭಾನುವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 10 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 47,760 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 10 ರೂಪಾಯಿ ಏರಿಕೆ ಕಂಡಿದ್ದು, 52,100 ರೂಪಾಯಿ ಆಗಿದೆ. 

ಇನ್ನು ಇತ್ತ ಬೆಳ್ಳಿ ದರದಲ್ಲೂ ಕೊಂಚ ಏರಿಕೆಯಾಗಿದೆ.ಒಂದು ಕೆ. ಜಿ ಬೆಳ್ಳಿ ಬೆಲೆ 10 ರೂ. ಏರಿಕೆಯಾಗಿ 61,210 ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?
ಒಂದೇ ತಿಂಗಳಲ್ಲಿ ಲಕ್ಷ ಸಂಬಳದ ಕೆಲಸದಿಂದ ವಜಾಗೊಂಡ ಆಘಾತ, ತಿಂಗಳಲ್ಲಿ 6 ಆ್ಯಪ್ ಮಾಡಿ ಪುಟಿದೆದ್ದ 21ರ ಐಐಟಿ ಯುವಕ!