ಸಾಲು ಸಾಲು ಹಬ್ಬ, ಮದುವೆ ಸೀಸನ್ ಶುರುವಾಗುತ್ತಿದೆ. ಇದರ ಬೆನ್ನಲ್ಲೇ ಭಾರತೀಯರಿಗೆ ಶಾಕ್ ಎದುರಾಗಿದೆ. ಕಾರಣ ಬಂಗಾಲ ಬೆಲೆ ಹಿಂದಿನ ಎಲ್ಲಾ ದಾಖಲೆ ಮುರಿದಿದೆ. ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಹಲವರ ನಿದ್ದಿಗೆಡಿಸಿದೆ.
ದಸರಾ, ದೀಪಾವಳಿ ಸೇರಿದಂತೆ ಹಬ್ಬಗಳ ಸಂಭ್ರಮ ಒಂದೆಡೆ. ಇದರ ನಡುವೆ ಮದುವೆಗಳ ಸೀಸನ್ ಶುರುವಾಗಿದೆ. ಆದರೆ ಈ ಸಂಭ್ರಮಕ್ಕೆ ಕತ್ತರಿ ಹಾಕುವಂತೆ ಇದೀಗ ಬಂಗಾರದ ಬೆಲೆ ಏರಿಕೆಯಾಗಿದೆ. ಈ ಹಿಂದಿನ ಎಲ್ಲಾ ದಾಖಲೆ ಪುಡಿ ಮಾಡಿರುವ ಚಿನ್ನ ಬಲು ದುಬಾರಿಯಾಗಿದೆ. ಚಿನ್ನದ ಮೇಲೆ 250 ರೂಪಾಯಿ ಏರಿಕೆಯಾಗಿದೆ. ಇದೀಗ 10 ಗ್ರಾಂ ಚಿನ್ನದ 78,700 ರೂಪಾಯಿ ತಲುಪಿದೆ. ಶುಕ್ರವಾರ 78,450 ರೂಪಾಯಿ ಇದ್ದ ಚಿನ್ನ ಇದೀಗ ಬೆಲೆ ಏರಿಕೆಯಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಕೆಜಿಗೆ 94,200 ರೂಪಾಯಿ ಇದ್ದ ಬೆಳ್ಳಿ ಇದೀಗ 94,000 ರೂಪಾಯಿಗೆ ಇಳಿಕೆಯಾಗಿದೆ.
ಶೇಕಡಾ 99.5ರಷ್ಟು ಪರಿಶುದ್ಧ ಚಿನ್ನದ ಬೆಲೆಯಲ್ಲಿನ ಏರಿಕೆ ಇದೀಗ ಹಲವರನ್ನು ಕಂಗಾಲಾಗಿಸಿದೆ. 99.5 ಶೇಕಡಾ ಪ್ಯೂರಿಟಿ ಗೋಲ್ಡ್ ಬೆಲೆ 200 ಪೂಪಾಯಿ ಏರಿಕೆಯಾಗಿ ಇದೀಗ 10 ಗ್ರಾಂಗ 78,300 ರೂಪಾಯಿ ಆಗಿದೆ. 78,100 ರೂಪಾಯಿಗೆ ಅಂತ್ಯಗೊಂಡಿದ್ದ ಚಿನ್ನದ ವಹಿವಾಟಿನಲ್ಲಿ ಆಗಿರುವ 200 ರೂಪಾಯಿ ಏರಿಕೆ ಆಲ್ ಟೈಮ್ ಹೈಗೆ ಮುನ್ನುಡಿ ಬರೆದಿದೆ.
undefined
ಚಿನ್ನದ ಶುದ್ಧತೆ ಪರೀಕ್ಷಿಸೋದು ಹೇಗೆ: ಇಲ್ಲಿದೆ ಮೂರು ಸುಲಭ ವಿಧಾನಗಳು
ಬಂಗಾರದ ಬೇಡಿಕೆ ದೇಶಿಯ ಮಟ್ಟದಲ್ಲಿ ಹೆಚ್ಚಾಗಿದೆ. ಜೊತೆಗೆ ಹೂಡಿಕೆದಾರರು ಸುರಕ್ಷಿತ ಆಯ್ಕೆಗಳತ್ತ ಚಿತ್ತ ಹರಿಸಿದ್ದಾರೆ. ಇದರ ಪರಿಣಾಮ ಈಕ್ವಿಟಿ ಮಾರುಕಟ್ಟೆಯಲ್ಲಿನ ಕುಸಿತ ಬಂಗಾರದ ಹಕ್ಕಿಯ ಬೆಲೆಯ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಇತ್ತ ಏಷ್ಯನ್ ವಹಿವಾಟು ಅಂತ್ಯದಲ್ಲಿ ಕಾಮೆಕ್ಸ್ ಚಿನ್ನ ಪ್ರತಿ ಔನ್ಸ್‌ಗೆ 2,671.50 ಅಮೆರಿಕನ್ ಡಾಲರ್ ಆಗಿದೆ. ಈ ಮೂಲಕೇ ಶೇಕಡಾ 0.14ರಷ್ಟು ಏರಿಕೆ ಕಂಡಿದೆ.
ಒಂದೆಡೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧಗಳಿಂದ ಹಲವು ವ್ಯಾಪಾರ ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ. ಪ್ರಮುಖವಾಗಿ ತೈಲ ಬೆಲೆಯಲ್ಲಿನ ಏರಿಳಿತಗಳನ್ನು ಕಾಣುತ್ತಿದೆ. ಇದೇ ವೇಳೆ ಚಿನ್ನದ ವಹಿವಾಟಿನ ಮೇಲೂ ಪರಿಣಾಮ ಬೀರುತ್ತಿದೆ. ಆದರೆ ಮಧ್ಯಪ್ರಾಚ್ಯದ ಯುದ್ಧ ಸಂದರ್ಭದಲ್ಲೂ ಅಮೆರಿಕ ಫೆಡರಲ್ ರಿಸರ್ವ್ ಕೌಂಟರ್ ಚಿನ್ನದ ಮೇಲಿನ ವಹಿವಾಟು ಹಾಗೂ ಬಡ್ಡಿದರ ಸ್ಥಿರವಾಗಿರುವಂತೆ ನೋಡಿಕೊಂಡಿದೆ.
ಹಲವು ಮಾರುಕಟ್ಟೆ ತಜ್ಞರು ಅಮೆರಿಕದಲ್ಲಿನ ಹಣದುಬ್ಬರ ಎಚ್ಚರಿಕೆ ನಡುವೆ ಚಿನ್ನದ ಬೆಲೆಯಲ್ಲಿ ಏರಿಳಿತ ನಿರೀಕ್ಷಿತ ಎಂದಿದ್ದಾರೆ.
ನವರಾತ್ರಿ ಸಂಭ್ರಮದಲ್ಲಿ ಚಿನ್ನ-ಬೆಳ್ಳಿ ಬೆಲೆ ದರ ಏರಿಕೆನಾ? ಇಳಿಕೆನಾ?