₹1.50 ಲಕ್ಷದತ್ತ ಚಿನ್ನದರ ನಾಗಾಲೋಟ!

Kannadaprabha News   | Kannada Prabha
Published : Dec 23, 2025, 04:17 AM IST
Gold price

ಸಾರಾಂಶ

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಸೋಮವಾರ, ಪ್ರತಿ 10 ಗ್ರಾಂ ಚಿನ್ನದ ಬೆಲೆ 1.50 ಲಕ್ಷ ರು.ನತ್ತ ದಾಪುಗಾಲು ಹಾಕಿದ್ದು, 1.38 ಲಕ್ಷ ರು.ಗೆ ತಲುಪಿದ್ದರೆ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ 2.21 ಲಕ್ಷ ರು.ತಲುಪಿದೆ.

ನವದೆಹಲಿ: ಜಾಗತಿಕ ಬಿಕ್ಕಟ್ಟಿನ ನಡುವೆಯೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಸೋಮವಾರ, ಪ್ರತಿ 10 ಗ್ರಾಂ ಚಿನ್ನದ ಬೆಲೆ 1.50 ಲಕ್ಷ ರು.ನತ್ತ ದಾಪುಗಾಲು ಹಾಕಿದ್ದು, 1.38 ಲಕ್ಷ ರು.ಗೆ ತಲುಪಿದ್ದರೆ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ 2.21 ಲಕ್ಷ ರು.ತಲುಪಿದೆ.

ದೆಹಲಿ ಮಾರುಕಟ್ಟೆಯಲ್ಲಿ ಸೋಮವಾರ 10 ಗ್ರಾಂ. ಚಿನ್ನದ ದರ 1,685 ರು. ಏರಿಕೆಯಾಗಿ 1,38,200 ರು. ತಲುಪಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 10,400 ರು ಏರಿಕೆಯಾಗಿ 2,14,500 ರು. ಆಗಿದೆ. ಇತ್ತ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 1,27,720 ರು.ಗೆ ಏರಿದ್ದರೆ, ಬೆಳ್ಳಿ ಪ್ರತಿ ಕೇ.ಜಿ.ಗೆ 2,21,800 ರು ಆಗಿದೆ.

ಕಾರಣ ಏನು?:

ಅಮೆರಿಕದಲ್ಲಿ ಬ್ಯಾಂಕ್‌ ಬಡ್ಡಿ ದರ ಇಳಿಕೆ, ವಿತ್ತೀಯ ಕೊರತೆ ನಿರ್ವಹಣೆಯಲ್ಲಿ ಅಮೆರಿಕದ ಟ್ರಂಪ್ ಸರ್ಕಾರ ವಿಫಲವಾಗಿರುವುದು, ಆರ್ಥಿಕ ಅನಿಶ್ಚಿತೆ ಕಾರಣ ಹೂಡಿಕೆಗೆ ಹೆಚ್ಚು ಸುರಕ್ಷಿತ ಎನ್ನಲಾದ ಚಿನ್ನದತ್ತ ಜನರು ಮತ್ತು ಹೂಡಿಕೆದಾರರು ಮುಖ ಮಾಡಿರುವುದು ಚಿನ್ನದ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ. ಮತ್ತೊಂದೆಡೆ ಹೂಡಿಕೆ ಹೆಚ್ಚಳ ಮತ್ತು ಕೈಗಾರಿಕೆಗಳಿಂದ ಭಾರೀ ಬೇಡಿಕೆಯ ಕಾರಣ ಬೆಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ.

ಭರ್ಜರಿ ಏರಿಕೆ:

ಕಳೆದ ಜನವರಿ 1ರ ಬಳಿಕ ಪ್ರತಿ 10 ಗ್ರಾಂ ಚಿನ್ನ ಬೆಲೆಯಲ್ಲಿ ಅಂದಾಜು 54000 ರು. ಅಂದರೆ ಶೇ.65ರಷ್ಟು ಮತ್ತು ಬೆಳ್ಳಿ ಬೆಲೆಯಲ್ಲಿ 1.26 ಲಕ್ಷ ರು. ಅಂದರೆ ಶೇ.126ರಷ್ಟು ಹೆಚ್ಚಳವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಗೋಡೌನ್ ನಲ್ಲಿದ್ದ ಗೋಣಿ ಚೀಲ ಬ್ಯಾಗ್ ಆಯ್ತು, 11 ಸಾವಿರ ಗಳಿಸಿ ಬ್ಯುಸಿನೆಸ್ ಐಡಿಯಾ ಹೇಳಿದ ಹುಡುಗ
ಯಶಸ್ವಿ ವ್ಯಕ್ತಿಗಳು ಫ್ರೀ ಇರುವಾಗ ಏನು ಮಾಡ್ತಾರೆ? ಸಕ್ಸಸ್ ಬೇಕು ಅಂದ್ರೆ ನೀವು ಇದನ್ನೆ ಮಾಡಿ