
ಈಗಿನ ಮಕ್ಕಳು ಬುದ್ಧಿವಂತರು. ಕಸದಿಂದ ರಸ ತೆಗೆಯೋದು ಅವ್ರಿಗೆ ಗೊತ್ತಿದೆ. ಕಲ್ಲಿಗೆ ಆಕಾರ ನೀಡಿ ಹಣ ಮಾಡಿ ವೈರಲ್ ಆಗಿದ್ದ ಯುವಕ ಈಗ ಮತ್ತೊಂದು ಬ್ಯುಸಿನೆಸ್ ಐಡಿಯಾ ನೀಡಿದ್ದಾರೆ. ಈಗ ಗೋಣಿ ಚೀಲದಿಂದ ಬ್ಯಾಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ ಒಂದಲ್ಲ ಒಂದು ವಸ್ತು ತರೋಕೆ ಗೋಣಿ ಚೀಲ ಬಳಸ್ತಾರೆ. ಕೆಲ್ಸ ಮುಗಿದ್ಮೇಲೆ ಅದು ಮೂಲೆ ಸೇರುತ್ತೆ. ಹಳ್ಳಿಗಳಲ್ಲಿ ಈ ಗೋಣಿ ಚೀಲದ ಸಂಖ್ಯೆ ಹೆಚ್ಚಿರುತ್ತೆ. ಅದನ್ನೇ ಇವರು ತಮ್ಮ ಬ್ಯುಸಿನೆಸ್ ಆಗಿ ಬದಲಿಸಿಕೊಂಡಿದ್ದಾರೆ. ಗೋಣಿ ಚೀಲಕ್ಕೆ ಸುಂದರ ಬ್ಯಾಗ್ ಆಕಾರ ನೀಡಿ ಮಾರಾಟ ಮಾಡಿದ್ದಾರೆ. 850 ರೂಪಾಯಿ ಖರ್ಚು ಮಾಡಿ ಬ್ಯಾಗ್ ತಯಾರಿಸಿ ಅದ್ರಿಂದ 11 ಸಾವಿರ ಗಳಿಸಿದ್ದಾರೆ.
ದಿನ ದಿನಕ್ಕೂ ಫ್ಯಾಷನ್ (Fashion) ಬದಲಾಗ್ತಿರುತ್ತೆ. ಜನರು ಹೊಸ ಫ್ಯಾಷನ್ ಗೆ ಆಕರ್ಷಿತರಾಗ್ತಿದ್ದಾರೆ. ಕೌಶಲ್ಯ ಹಾಗೂ ತಾಳ್ಮೆ ಇದ್ರೆ ಮನೆ ಮೂಲೆಯಲ್ಲಿ ಬಿದ್ದಿರುವ ವಸ್ತುವಿನಿಂದ ನೀವೂ ಹಣ ಮಾಡ್ಬಹುದು. ಅದಕ್ಕೆ ಈ ಹುಡುಗ ಉತ್ತಮ ನಿದರ್ಶನ. @deluxebhaiyaji ಮತ್ತು dhandhaonground ಹೆಸರಿನ ಇನ್ಸ್ಟಾಖಾತೆಯಲ್ಲಿ ಬ್ಯುಸಿನೆಸ್ ಬಗ್ಗೆ ಐಡಿಯಾ ನೀಡುವ ಈ ಯುವಕ ಈಗ ಗೋಣಿ ಚೀಲದ ಬ್ಯಾಗ್ ಐಡಿಯಾ ನೀಡಿದ್ದಾರೆ. ಮೊದಲು ಬ್ಯಾಗ್ ಡಿಸೈನ್ ಮಾಡಲಾಗಿದೆ. ನಂತ್ರ ಅದನ್ನು ತ್ರಿಡಿಗೆ ಕನ್ವರ್ಟ್ ಮಾಡಲಾಗಿದೆ. ಬ್ಯಾಗ್ ಡಿಸೈನ್ ಹಿಡಿದು ಹುಡುಗ ಮಾರ್ಕೆಟ್ ಸುತ್ತಿದ್ದಾರೆ. ದೊಡ್ಡ ಡಿಸೈನರ್ಸ್ ಈ ಬ್ಯಾಗ್ ತಯಾರಿಸೋದು ಸಾಧ್ಯವಿಲ್ಲ ಎಂದಿದ್ದಾರೆ. 35 ವರ್ಷಗಳಿಂದ ಹೊಲಿಗೆಯಲ್ಲಿ ಪರಿಣಿತಿ ಹೊಂದಿದ್ದ ವ್ಯಕ್ತಿಯೊಬ್ಬರು ಬ್ಯಾಗ್ ತಯಾರಿಸೋಕೆ ಒಪ್ಪಿಕೊಂಡಿದ್ದಾರೆ. ಹುಡುಗ ಬ್ಯಾಗ್ ಡಿಸೈನ್ ತೋರಿಸಿದ್ದು, ಕೆಲ್ಸ ಶುರುವಾಗಿದೆ. ಕೆಲವೇ ದಿನಗಳಲ್ಲಿ 3ಡಿ ಡಿಸೈನ್ ನಲ್ಲಿ ತೋರಿಸಿದಂತೆ ಬ್ಯಾಗ್ ರೆಡಿಯಾಗಿದೆ. ಗೋಣಿ ಚೀಲದ ಜೊತೆ ಇದಕ್ಕೆ ಲೆದರ್ ಬಳಸಲಾಗಿದೆ. ಇದ್ರಿಂದ ಬ್ಯಾಗ್ ಗಟ್ಟಿಯಾಗಿದ್ದಲ್ದೆ ಪ್ರೀಮಿಯಂ ಲುಕ್ ಪಡೆದಿದೆ.
ಯಶಸ್ವಿ ವ್ಯಕ್ತಿಗಳು ಫ್ರೀ ಇರುವಾಗ ಏನು ಮಾಡ್ತಾರೆ? ಸಕ್ಸಸ್ ಬೇಕು ಅಂದ್ರೆ ನೀವು ಇದನ್ನೆ ಮಾಡಿ
ಆರಂಭದಲ್ಲಿ ಮೂರು ಬ್ಯಾಗ್ ಮಾತ್ರ ತಯಾರಿಸಿ ಪ್ರಯೋಗ ಮಾಡಲಾಗಿದೆ. ಪ್ರತಿ ಬ್ಯಾಗ್ ತಯಾರಿಸಲು 890 ರೂಪಾಯಿ ಖರ್ಚಾಗಿದೆ. ಹುಡುಗ ಇದನ್ನು ಮಾರ್ಕೆಟ್ ನಲ್ಲಿ ಮಾರಾಟಕ್ಕೆ ಇಟ್ಟಿದ್ದರು. ಬ್ಯಾಗ್ ನೋಡ್ತಿದ್ದಂತೆ ಅನೇಕರು ಖರೀದಿಗೆ ಆಸಕ್ತಿ ತೋರಿಸಿದ್ದರು. ಬ್ಯಾಗ್ ಕ್ವಾಲಿಟಿ ಚೆನ್ನಾಗಿರೋದ್ರಿಂದ ಹುಡುಗ ಬ್ಯಾಗ್ ಗೆ 4 ಸಾವಿರ ಅಂದ್ರೂ ಅನೇಕರು ಖರೀದಿಗೆ ಮುಂದಾಗಿದ್ರು. ಕೆಲವೇ ಗಂಟೆಯಲ್ಲಿ ಹುಡುಗನ ಕೈನಲ್ಲಿದ್ದ ಮೂರೂ ಬ್ಯಾಗ್ ಮಾರಾಟವಾಗಿತ್ತು. ಒಬ್ಬರಿಗೆ 3500 ರೂಪಾಯಿಗೆ ಬ್ಯಾಗ್ ಮಾರಾಟ ಮಾಡಿದ್ದ ವ್ಯಕ್ತಿ ಒಟ್ಟೂ 11500 ರೂಪಾಯಿ ಸಂಪಾದನೆ ಮಾಡಿದ್ದಾರೆ.
ಓಮನ್ ಮಾರುಕಟ್ಟೆಗೆ ಲಗ್ಗೆ ಇಟ್ಟ ವಿಜಯಪುರದ ಲಿಂಬೆ ಹಣ್ಣು!
ಸೋಶಿಯಲ್ ಮೀಡಿಯಾದಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ. ಯುವಕನ ಟ್ಯಾಲೆಂಟ್ ಗೆ ಜನ ಮೆಚ್ಚಿಕೊಂಡಿದ್ದಾರೆ. ಕಡಿಮೆ ಬಂಡವಾಳದಲ್ಲಿ ಇಷ್ಟೊಂದು ಲಾಭ ನಂಬಲು ಅಸಾಧ್ಯ ಅಂತ ಕೆಲವರು ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು ಇದನ್ನೇ ಬ್ಯುಸಿನೆಸ್ ಮಾಡ್ಕೊಳ್ಳಿ ಅಂತ ಸಲಹೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಗೋಣಿ ಚೀಲದ ಶರ್ಟ್ ಮಾಡಿ ಮಾರಾಟ ಮಾಡಿದ್ದರು. ಗೋಣಿ ಚೀಲಕ್ಕೆ ಡಿಸೈನ್ ನೀಡಿ, ಮಾರ್ಕೆಟ್ ನಲ್ಲಿ ಮಾರಾಟ ಮಾಡಿ 3700 ರೂಪಾಯಿ ಗಳಿಸಿದ್ದರು. ಕಂಟೆಂಟ್ ಕ್ರಿಯೇಟರ್ ಆಗಿರುವ ಇವರು, ಹೊಸ ಬ್ಯುಸಿನೆಸ್ ಐಡಿಯಾವನ್ನು ಜನರಿಗೆ ನೀಡ್ತಾ ಹಣ ಸಂಪಾದನೆ ಮಾಡ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.