
ಬೆಂಗಳೂರು(ಸೆ.21): ಬಹುತೇಕ ಗಗನ ತಲುಪಿದ್ದ ಚಿನ್ನದ ಬೆಲೆಯಲ್ಲಿ ಮಂದಗತಿಯ ಇಳಿಕೆ ಕಂಡು ಬರುತ್ತಿದ್ದು, ಆಭರಣ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.
40 ಸಾವಿರ ರೂ. ಗಡಿ ದಾಟಿದ್ದ ಚಿನ್ನದ ದರ ಇದೀಗ 37 ಸಾವಿರ ರೂ. ಆಸುಪಾಸಿನಲ್ಲಿ ವಹಿವಾಟು ನಡೆಸಿದ್ದು, ಈ ತಿಂಗಳಲ್ಲಿ ಒಟ್ಟಾರೆ 2,400 ರೂ. ವರೆಗೆ ಇಳಿಕೆ ಕಂಡಿದೆ.
ಮಲ್ಟಿ ಕಮೋಡಿಟಿ ಎಕ್ಸಚೇಂಜ್ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಶೇ.0.50ರಷ್ಟು ಇಳಿಕೆ ಕಂಡು ಬಂದಿದ್ದು, 10 ಗ್ರಾಂ ಚಿನ್ನದ ಬೆಲೆ 37,503 ರೂ. ಆಗಿದೆ.
ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್ ಮಾರುಕಟ್ಟೆಯಲ್ಲಿ ಶೇ.0.50ರಷ್ಟು ಇಳಿಕೆ ಕಾಣುವ ಮೂಲಕ 46,370 ರೂ. ಆಗಿದೆ.
ಬೆಳ್ಳಿಯ ಬೆಲೆಯಲ್ಲಿ ಈ ತಿಂಗಳಲ್ಲಿ ಒಟ್ಟು 5,100 ರೂ. ಇಳಿಕೆ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಮೂನ್ಸುಚನೆ ನೀಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.