51 ಸಾವಿರ ಗಟಿ ದಾಟಿದ ಚಿನ್ನದ ದರ: ಬೆಳ್ಳಿ ಕೆ.ಜಿ.ಗೆ 60,000 ರು.!

Published : Jul 25, 2020, 11:39 AM IST
51 ಸಾವಿರ ಗಟಿ ದಾಟಿದ ಚಿನ್ನದ ದರ: ಬೆಳ್ಳಿ ಕೆ.ಜಿ.ಗೆ 60,000 ರು.!

ಸಾರಾಂಶ

ದಾಖಲೆಯ 51 ಸಾವಿರ ಗಟಿ ದಾಟಿದ ಚಿನ್ನದ ದರ: ಬೆಳ್ಳಿ ಕೆ.ಜಿ.ಗೆ 60,000 ರು.| ಬುಧವಾರ 10 ಗ್ರಾಮ್‌ ಚಿನ್ನದ ದರ 50 ಸಾವಿರ ರು. ದಾಟಿ ದಾಖಲೆ ನಿರ್ಮಿಸಿತ್ತು

ಮುಂಬೈ(ಜು.25): ದಿನೇ ದಿನೆ ಗಗನಮುಖಿ ಆಗುತ್ತಿರುವ ಚಿನ್ನದ ದರ ಮತ್ತೊಮ್ಮೆ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ. ಶುಕ್ರವಾರ ಮುಂಬೈ ಚಿನಿವಾರ ಪೇಟೆಯಲ್ಲಿ 99.9 ಶುದ್ಧತೆಯ 10 ಗ್ರಾಂ ಚಿನ್ನ 419 ರು. ಏರಿಕೆ ಆಗಿದ್ದು, 51,124 ರು. ಹಾಗೂ ಆಭರಣ ಚಿನ್ನ 421 ರು. ಏರಿಕೆ ಆಗಿದ್ದು, 50,919ರು.ಗೆ ತಲುಪಿದೆ. ಇದೇ ವೇಳೆ ಬೆಳ್ಳಿಯ ದರ ಕೆ.ಜಿ.ಗೆ 900 ರು. ಇಳಿಕೆ ಆಗಿದ್ದು, 59,885 ರು. ಆಗಿದೆ.

ಈ ಮುನ್ನ ಬುಧವಾರ 10 ಗ್ರಾಮ್‌ ಚಿನ್ನದ ದರ 50 ಸಾವಿರ ರು. ದಾಟಿ ದಾಖಲೆ ನಿರ್ಮಿಸಿತ್ತು. ಇದೇ ವೇಳೆ ಬೆಂಗಳೂರಿನಲ್ಲಿ 10 ಗ್ರಾಂ ಶುದ್ಧ ಚಿನ್ನಕ್ಕೆ 51,125 ರು. ಹಾಗೂ ಅಭರಣ ಚಿನ್ನಕ್ಕೆ 4,805 ರು. ಆಗಿದ್ದು, ಬೆಳ್ಳಿ ಕೇಜಿಗೆ 60,500 ರು.ಗೆ ಏರಿಕೆ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನದ ದರ ಕಳೆದ ಮೂರು ತಿಂಗಳಿನಲ್ಲೇ ಅತಿ ಗರಿಷ್ಠ ಏರಿಕೆ ದಾಖಲಿಸಿದೆ. ಅಲ್ಲದೇ ಡಾಲರ್‌ ದುರ್ಬಲಗೊಂಡಿದ್ದರಿಂದ ಚಿನ್ನದ ಮೇಲಿನ ಹೂಡಿಕೆ ಹಾಗೂ ಹಣದುಬ್ಬರದ ನಿರೀಕ್ಷೆಗಳು ಚಿನ್ನದ ದರ ಏರಿಕೆಗೆ ಕಾರಣವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಕೇವಲ ಆಧಾರ್ ಸಂಖ್ಯೆ ಬಳಸಿ ನಿಮ್ಮ ಬ್ಯಾಂಕ್ ಹಣ ಲಪಟಾಯಿಸಲು ಸಾಧ್ಯವೇ? ಈ ಬಗ್ಗೆ UIDAI ನೀಡಿದ ಮಹತ್ವದ ಮಾಹಿತಿ ಇಲ್ಲಿದೆ!
Techie Career Change: 2 ಕೋಟಿ ಸಂಬಳದ ಕೆಲಸ ಬಿಟ್ಟು ಕೆಫೆ ತೆರೆದ 29ರ ಯುವತಿ! ಟೆಕ್ಕಿಯ ಕಥೆನೇ ರೋಚಕ