
ನವದೆಹಲಿ(ಜು.24): ಕೊರೋನಾ ವೈರಸ್ ಹೊಡೆತದಿಂದ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಹೀಗಿರುವ ಕಂಪನಿಗಳ ಪಾಡು ಇದಕ್ಕಿಂತ ಭಿನ್ನವಲ್ಲ. ಕಂಪನಿ ನಷ್ಟ ಸರಿದೂಗಿಸಲು ನಿರ್ವಹಣೆ ವೆಚ್ಚ ಕಡಿತ, ಉದ್ಯೋಗಿಗಳ ವೇತನ ಕಡಿತ, ಉದ್ಯೋಗ ಕಡಿತ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿರುವುದು ಸದ್ಯ ಉದ್ಭವಿಸಿರುವ ಸಮಸ್ಯೆಗೆ ಪರಿಹಾರವಲ್ಲ ಎಂದು ಟಾಟಾ ಗ್ರೂಪ್ ಚೇರ್ಮೆನ್ ರತನ್ ಟಾಟಾ ಹೇಳಿದ್ದಾರೆ.
ಕೊರೋನಾ ಹೊಡೆತಕ್ಕೆ ನಲುಗಿದ ಉದ್ಯಮಿಗಳಿಗೆ ಸ್ಫೂರ್ತಿ ನೀಡಿತು ರತನ್ ಟಾಟಾ ಪತ್ರ!
ಕಳೆದ 4-5 ತಿಂಗಳಿನಿಂದ ಭಾರತದ ಕಂಪನಿಗಳು ಕೊರೋನಾ ವೈರಸ್ ಸಮಸ್ಯೆ ಎದುರಿಸುತ್ತಿದೆ. ಕಂಪನಿಗಳು ನಷ್ಟ ಅನುಭವಿಸುತ್ತಿದೆ. ಆದರೆ ಉದ್ಯೋಗ ಕಡಿತಕ್ಕೆ ಮುಂದಾಗುವುದು ಉತ್ತಮ ನಿರ್ಧಾರವಲ್ಲ. ಕೊರೋನೋತ್ತರ ಜಗತ್ತಿನಲ್ಲಿ ಬದುಕುವ ದಾರಿ ಕಂಡು ಹಿಡಿಯಬೇಕು ಎಂದು ರತನ್ ಟಾಟಾ ಕರೆ ನೀಡಿದ್ದಾರೆ.
ಟಾಟಾ ಸಮೂಹದಿಂದ 1500 ಕೋಟಿ ನೆರವು!.
ಕೊರೋನಾ ವೈರಸ್ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಕಂಪನಿಗಳು ಭವಿಷ್ಯದ ಕುರಿತು ಚಿಂತಿಸಬೇಕಿದೆ. ಕಾರಣ ಕೊರೋನಾ ವೈರಸ್ ಶಾಶ್ವತವಾಗಿ ನಲೆಯೂರುವುದಿಲ್ಲ. ಹೀಗಾಗಿ ಉದ್ಯೋಗ ಕಡಿತ ಇದಕ್ಕೆ ಪರಿಹಾರವಾಗುವುದಿಲ್ಲ ಎಂದು ರತನ್ ಟಾಟಾ ಹೇಳಿದ್ದಾರೆ.
ಟಾಟಾ ಮೋಟಾರ್ಸ್, ಏರ್‌ಲೈನ್ಸ್, ಹೋಟೆಲ್, ಫಿನಾನ್ಸ್ ಸರ್ವೀಸ್ ಸೇರಿದಂತೆ ಟಾಟಾ ಗ್ರೂಪ್ ಇದುವರೆಗೆ ಯಾವುದೇ ಉದ್ಯೋಗ ಕಡಿತ, ವೇತನ ಕಡಿತ ಮಾಡಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.