ಗುಡ್‌ ನ್ಯೂಸ್: ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಇಳಿಕೆ!

By Suvarna NewsFirst Published Jun 7, 2020, 1:08 PM IST
Highlights

ಕೊರೋನಾ ಮಹಾಮಾರಿ, ಲಾಕ್‌ಡೌನ್ ನಡುವೆ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ| ಇಂದು ಭಾನುವಾರ ಚಿನ್ನ, ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ| ಚಿನ್ನದ ದರವೆಷ್ಟು? ಇಲ್ಲಿದೆ ವಿವರ

ಬೆಂಗಳೂರು(ಜೂ.07): ಒಂದೆಡೆ ಕೊರೋನಾ ಆತಂಕ ದೇಶವನ್ನು ಸತಾಯಿಸುತ್ತಿದ್ದು, ಅಪಾರ ಸಾವು ನೋವು ಉಂಟು ಮಾಡಿದೆ. ಹೀಗಿದ್ದರೂ ಚಿನ್ನದ ಬೇಡಿಕೆ ಮಾತ್ರ ಕುಸಿದಿರಲಿಲ್ಲ. ಚಿನ್ನ ಪ್ರಿಯರು ಯಾವಾಗೊಮ್ಮೆ ಅನ್‌ಲಾಕ್‌ ಆಗಿ ಚಿನ್ನ ಖರೀದಿಸುತ್ತೇವೋ ಎಂದು ಕಾದು ಕುಳಿತ್ತಿದ್ದರು. ಹೀಗಿರುವಾಗಲೇ ಚಿನ್ನದ ದರ ಏರಿಕೆ ಕಂಡಿದ್ದು ನಲ್ವತ್ತು ಸಾವಿರ ಗಡಿ ದಾಟಿತ್ತು. ಇದು ಚಿನ್ನ ಪ್ರಿಯರನ್ನು ಬೇಸರಗೊಳಿಸಿತ್ತು. ಆದರೀಗ ಬಹುದಿನಗಳ ಬಳಿಕ ಚಿನ್ನದ ದರ ಇಳಿಕೆಯಾಗಿದೆ.

ಲಾಕ್‌ಡೌನ್‌ ಆಗಿದ್ದ ದೇಶ ಸದ್ಯ ನಿಧಾನವಾಗಿ ಅನ್‌ಲಾಕ್‌ ಆಗುತ್ತಿದೆ. ಹೀಗಿರುವಾಗ ಚಿನ್ನದ ಮಳಿಗೆಗಳೂ ತೆರೆದಿದ್ದು, ಗ್ರಾಹಕರು ಚಿನ್ನ ಖರೀದಿಸಲು ಮಳಿಗೆಗಳತ್ತ ಹೆಜ್ಜೆ ಇಟ್ಟಿದ್ದಾರೆ. ಇತ್ತ ಚಿನ್ನದ ದರವೂ ಇಳಿಕೆಯಾಗಿದೆ. ಶನಿವಾರ ಚಿನ್ನದ ದರದಲ್ಲಿ ದಾಖಲೆಯ ಕುಸಿತ ಕಂಡಿದ್ದು,  ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 550 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 43,250 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಕೂಡ 540 ರೂಪಾಯಿ ಇಳಿಕೆ ಕಂಡಿದ್ದು, 47,220 ರೂಪಾಯಿ ಆಗಿದೆ. 

ಏರುತ್ತಲೇ ಇದ್ದ ಚಿನ್ನಕ್ಕೆ ಬ್ರೇಕ್, ಇಳಿಕೆ ಹಾದಿಗೆ ಮರಳಿದ ಬಂಗಾರ, ಏನ್ ರೇಟು?

ಜೂನ್​  1ರಂದು ಚಿನ್ನ 90 ರೂಪಾಯಿ ಏರಿಕೆ ಕಂಡಿತ್ತು. ಅದಾದ ನಂತರ ಸತತ ಮೂರು ದಿನವೂ ಚಿನ್ನದ ದರದಲ್ಲಿ ಇಳಿಕೆ ಕಂಡಿತ್ತು. ಶುಕ್ರವಾರ ಚಿನ್ನದ ದರದಲ್ಲಿ 250 ರೂಪಾಯಿ ಏರಿತ್ತು.  ಇನ್ನು, ಬೆಳ್ಳಿ ಬೆಲೆಯಲ್ಲೂ ಭಾರೀ ಕುಸಿತ ಕಂಡಿದೆ. ಕೆಜಿ ಬೆಳ್ಳಿಗೆ 1080 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 47,400 ರೂಪಾಯಿ ಆಗಿದೆ.

 

click me!