39 ಲಕ್ಷ ಕೋಟಿ ರುಪಾಯಿ ಸಾಲಕ್ಕೆ 6 ತಿಂಗಳ EMI ವಿನಾಯಿತಿ

By Kannadaprabha NewsFirst Published Jun 5, 2020, 8:37 AM IST
Highlights

6 ತಿಂಗಳ ಐಎಂಐ ಪಾವತಿ ಮುಂದೂಡಿಕೆ ಅವಧಿಗೆ ಬಡ್ಡಿ ಮನ್ನಾ ಮಾಡಿದಲ್ಲಿ ಬ್ಯಾಂಕ್‌ಗಳಿಗೆ 2 ಲಕ್ಷ ಕೋಟಿ ರುಪಾಯಿ ನಷ್ಟವಾಗುತ್ತದೆ. ಇದು ದೇಶದ ಜಿಡಿಪಿಯ ಶೇ.1ರಷ್ಟಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜೂ.05): ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗೃಹ, ವಾಹನ, ಚಿಲ್ಲರೆ, ಕಾರ್ಪೋರೆಟ್‌ ಸಾಲ ಪಡೆದವರಿಗೆ ಮಾಸಿಕ ಕಂತು ಪಾವತಿಯಿಂದ 6 ತಿಂಗಳ ವಿನಾಯ್ತಿ ನೀಡಿದೆ. ಬ್ಯಾಂಕ್‌ಗಳು ಒಟ್ಟಾರೆ ನೀಡಿರುವ ಸುಮಾರು 100 ಲಕ್ಷ ಕೋಟಿ ರುಪಾಯಿ ಸಾಲದ ಪೈಕಿ ಈ ಯೋಜನೆಯ ವ್ಯಾಪ್ತಿಗೆ 38.68 ಲಕ್ಷ ಕೋಟಿ ರುಪಾಯಿ ಸಾಲ ಒಳಪಟ್ಟಿದೆ ಎಂದು ಸುಪ್ರೀಂಕೋರ್ಟ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮಾಹಿತಿ ನೀಡಿದೆ.

ಕಾರ್ಪೋರೆಟ್‌ ಮತ್ತು ಚಿಲ್ಲರೆ ಸಾಲಗಾರರ ಪೈಕಿ ಶೇ.65ರಷ್ಟು ಜನರಿಂದ ಯೋಜನೆ ವ್ಯಾಪ್ತಿಗೆ ಒಳಪಡುವ ಕುರಿತು ಬಂದಿರುವ ಬೇಡಿಕೆ ಆಧರಿಸಿ ಆರ್‌ಬಿಐ ಈ ಲೆಕ್ಕಾಚಾರ ಹಾಕಿದೆ. ಇದೇ ವೇಳೆ 6 ತಿಂಗಳ ಸಾಲದ ಬಡ್ಡಿ ಹಣವನ್ನು, ಬಾಕಿ ಸಾಲದ ಮೊತ್ತಕ್ಕೆ ವಿಲೀನ ಮಾಡುತ್ತಿರುವ ಪರಿಣಾಮ ಮಾಸಿಕ 33,500 ಕೋಟಿ ರುಪಾಯಿಯಂತೆ 6 ತಿಂಗಳ ಅವಧಿಯಲ್ಲಿ ಬ್ಯಾಂಕ್‌ಗಳಿಗೆ ಬರಬೇಕಾಗಿದ್ದ 2 ಲಕ್ಷ ಕೋಟಿ ರುಪಾಯಿ ಕೂಡ ತಕ್ಷಣಕ್ಕೆ ಕೈಸೇರದೇ ಹೋಗಲಿದೆ ಎಂದು ಆರ್‌ಬಿಐ ಹೇಳಿದೆ.

6 ತಿಂಗಳ EMIಗೆ ಬಡ್ಡಿ ಮನ್ನಾ ಮಾಡಿದರೆ 2 ಲಕ್ಷ ಕೋಟಿ ನಷ್ಟ!

6 ತಿಂಗಳ ಐಎಂಐ ಪಾವತಿ ಮುಂದೂಡಿಕೆ ಅವಧಿಗೆ ಬಡ್ಡಿ ಮನ್ನಾ ಮಾಡಿದಲ್ಲಿ ಬ್ಯಾಂಕ್‌ಗಳಿಗೆ 2 ಲಕ್ಷ ಕೋಟಿ ರುಪಾಯಿ ನಷ್ಟವಾಗುತ್ತದೆ. ಇದು ದೇಶದ ಜಿಡಿಪಿಯ ಶೇ.1ರಷ್ಟಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಆರ್‌ಐಬಿನ ಇತ್ತೀಚಿನ ಆದೇಶದಲ್ಲಿ 6 ತಿಂಗಳ ಇಐಎಂ ಪಾವತಿ ಮುಂದೂಡಲಾಗಿದೆ. ಆದರೆ ಗ್ರಾಹಕರು ಈ ಅವಧಿಯ ಬಡ್ಡಿಯನ್ನು ನಂತರ ಪಾವತಿಸಬೇಕು. ಹೀಗಾಗಿ ಅದನ್ನೂ ಮನ್ನಾ ಮಾಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಆರ್‌ಬಿಐ, 6 ತಿಂಗಳ ಬಡ್ಡಿ ಮನ್ನಾ ಮಾಡಿದರೆ ಅದು 2 ಲಕ್ಷ ಕೋಟಿ ರು. ಆಗುತ್ತದೆ. ಇದು ದೇಶದ ಜಿಡಿಪಿಯ ಶೇ.1ರಷ್ಟಾಗುತ್ತದೆ. ಇಂಥ ಯಾವುದೇ ನಿರ್ಧಾರ ಬ್ಯಾಂಕಿಂಗ್‌ ವಲಯಕ್ಕೆ ಭಾರೀ ಹೊರೆ ಉಂಟುಮಾಡುತ್ತದೆ. ಜೊತೆಗೆ ಈ ಲೆಕ್ಕಾಚಾರ ಕೇವಲ ಬ್ಯಾಂಕಿಂಗ್‌ ವಲಯದ್ದು. ಇದಕ್ಕೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೊತ್ತವನ್ನೂ ಸೇರಿಸಿದರೆ ಅದು ಇನ್ನಷ್ಟು ದೊಡ್ಡದಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ಕಾರ್ಮಿಕರ ವಾಪಸ್‌ ಸೆಳೆಯಲು ವಿಮಾನ ಪ್ರಯಾಣದ ಆಫರ್‌!

2019ರ ಡಿ.31ರ ವೇಳೆಗೆ ಕಾರ್ಪೋರೆಟ್‌ ಮತ್ತು ಚಿಲ್ಲರೆ ಸಾಲಗಾರರಿಂದ ಬ್ಯಾಂಕ್‌ಗಳಿಗೆ 60 ಲಕ್ಷ ಕೋಟಿ ರು. ಸಾಲ ಬಾಕಿ ಇತ್ತು. ಈ 60 ಲಕ್ಷ ಕೋಟಿ ರು. ಸಾಲದಲ್ಲಿ ದುಡಿಯುವ ಬಂಡವಾಳ ಮತ್ತು 2020ರ ಜನವರಿಯಿಂದ ಮಾರ್ಚ್‌ನ್ವರೆಗಿನ ಸಾಲ ಸೇರಿಲ್ಲ. ಬಹುತೇಕ ಸಾಲ ನೀಡಿರುವುದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು. ಆದರೆ ಅವಿನ್ನೂ ತಾವು ನೀಡಿರುವ ಸಾಲದ ಪೈಕಿ ಎಷ್ಟುಪ್ರಮಾಣ ಆರ್‌ಬಿಐ ಯೋಜನೆಗೆ ಒಳಪಟ್ಟಿದೆ ಎಂದು ಘೋಷಿಸಿಲ್ಲ. ಬ್ಯಾಂಕ್‌ ಆಫ್‌ ಬರೋಡಾ ಶೇ.65ರಷ್ಟು ಮತ್ತು ಐಡಿಬಿಐ ಶೇ.65-70ರಷ್ಟು ಸಾಲ ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ ಎಂದು ಮಾಹಿತಿ ನೀಡಿವೆ. ಇನ್ನು ಬಂಧನ್‌ ಬ್ಯಾಂಕ್‌ನ ಶೇ.90ರಷ್ಟು ಸಾಲ ಈ ಯೋಜನೆಗೆ ಒಳಪಟ್ಟಿದೆ. ಖಾಸಗಿ ಬ್ಯಾಂಕ್‌ಗಳಲ್ಲಿ ಈ ಪ್ರಮಾಣ ಶೇ.35ರ ಆಸುಪಾಸಿನಲ್ಲಿ ಮಾತ್ರವೇ ಇದೆ.
 

click me!