ಕಳೆದ 8 ವರ್ಷಗಳಲ್ಲಿ ದಾಖಲೆ ಬೆಲೆ ಏರಿಕೆ ಕಂಡ ಚಿನ್ನ!

By Suvarna NewsFirst Published Jul 7, 2020, 5:20 PM IST
Highlights

ಕೊರೋನಾ ವೈರಸ್ ಹೊಡೆತದ ನಡುವೆ ಇದೀಗ ಬಂಗಾರದ ಬೆಲೆ ಕಳೆದ 8 ವರ್ಷಗಳಲ್ಲಿ ದಾಖಲೆಯ ಏರಿಕೆ ಕಂಡಿದೆ. ಚಿನ್ನ ದುಬಾರಿಯಾದರೆ, ಬೆಳ್ಳಿ ಬೆಲೆ ಇಳಿಕೆಯಾಗಿದೆ. ಬಂಗಾರದ ವಿವರ ಇಲ್ಲಿದೆ.

ನವದೆಹಲಿ(ಜು.07): ಕೊರೋನಾ ವೈರಸ್ ನಡುವೆ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಇಂದು ಬಂಗಾರ ಕಳೆದ 8 ವರ್ಷಗಳಲ್ಲಿ ಕಾಣದ ಬೆಲೆ ಏರಿಕೆ ಕಂಡಿದೆ. ಇದೀಗ ಬಂಗಾರ ಬೆಲೆ 10 ಗ್ರಾಂಗೆ 48,290 ರೂಪಾಯಿ ಆಗಿದೆ. ಇನ್ನು ಬೆಳ್ಳಿ ಬೆಲೆ ಕೊಂಚ ಇಳಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿಗೆ 49,756 ರೂಪಾಯಿ ಆಗಿದೆ.

ಆಭರಣಕ್ಕೆ ಬೇಡಿಕೆ ಇಲ್ಲ, ಚಿನ್ನದ ದರ ಮಾತ್ರ ಕೆಳಗಿಳಿಯುತ್ತಿಲ್ಲ; 3  ವಿಚಿತ್ರ ಕಾರಣ!.

ಸೋಮವಾರದಿಂದಲೇ ಚಿನ್ನ ಮಾರುಕಟ್ಟೆ ದುಬಾರಿಯಾಗತೊಡಗಿದೆ. ಡಾಲರ್ ಮೌಲ್ಯ ಏರಿಕೆ, ಕೊರೋನಾ ವೈರಸ್ ಪ್ರಕರಣ ಹಾಗೂ ಭಾರತ ಚೀನಾ ಗಡಿ ಸಂಘರ್ಷ ಸೇರಿದಂತೆ ಗಲವು ಘಟನೆಗಳಿಂದ ಚಿನ್ನದ ಬೆಲೆ ಇಳಿಕೆಯಾಗುವ ಸೂಚನೆ ನೀಡಿತ್ತು. ಆದರೆ ದಿನದ ವಹಿವಾಟು ಆರಂಭವಾದಾಗ  10 ಗ್ರಾಂ ಚಿನ್ನ  48,290 ರೂಪಾಯಿ ಆಗಿದ್ದು, ದಿನದ ಅಂತ್ಯಕ್ಕೆ  48,200  ರೂಪಾಯಿ/10 ಗ್ರಾಂ ಹಾಗೂ ಬೆಳ್ಳಿ ಬೆಲೆ 49,750 ರೂಪಾಯಿ/Kgಗೆ ಬಂದು ನಿಂತಿತು.

ಅಂತಾರಾಷ್ಟ್ರೀಯ ಚಿನ್ನ ಮಾರುಕಟ್ಟೆಯನ್ನು ಅವಲಂಬಿಸಿರುವ ಭಾರತದ ಚಿನ್ನದ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗಿದೆ. ಹೀಗಾಗಿ ಭಾರತದಲ್ಲೂ ಬಂಗಾರ ದುಬಾರಿಯಾಗಿದೆ.

ಬೆಂಗಳೂರಿನಲ್ಲಿ 45,360 ರೂಪಾಯಿ (22 Carat) ಹಾಗೂ ರೂಪಾಯಿ 49,460 ರೂಪಾಯಿ(24 Carat)ಆಗಿದೆ.  ಚೆನ್ನೈ ನಗರದಲ್ಲಿ 46,110 ರೂಪಾಯಿ (22 Carat), 50,720 ರೂಪಾಯಿ (24 Carat) ಆಗಿದೆ. ಮುಂಬೈನಲ್ಲಿ  46,960 ರೂಪಾಯಿ (22 Carat) 47,960 ರೂಪಾಯಿ (24 Carat) ಆಗಿದೆ.  ರಾಜಧಾನಿ ದೆಹಲಿಯಲ್ಲಿ 46,910  ರೂಪಾಯಿ (22 Carat) ಹಾಗೂ 48,110 ರೂಪಾಯಿ (24 Carat) ಬೆಲೆ ಏರಿಕೆ ಕಂಡಿದೆ. 

click me!