ಡಿಸೆಂಬರ್ ಆರಂಭದಲ್ಲಿ ಇಳಿಕೆಯತ್ತ ಮುಖ ಮಾಡಿದ ಚಿನ್ನದ ದರ| ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದ ಚಿನ್ನದ ದರ ಇಳಿಕೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಶೇ. 0.01ರಷ್ಟು ಇಳಿಕೆ ಕಂಡ ಚಿನ್ನದ ದರ| ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೀಗ 38,323 ರೂ.| ಬೆಳ್ಳಿ ಬೆಲೆಯಲ್ಲಿ ಒಟ್ಟು ಶೇ.0.17ರಷ್ಟು ಏರಿಕೆ| ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಇದೀಗ 45,372 ರೂ.| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 1,476.55 ಡಾಲರ್| ಮಾರುಕಟ್ಟೆ ತಲ್ಲಣಗೊಳಿಸಿದ ಅಮೆರಿಕ ಆಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿಕೆ|
ನವದೆಹಲಿ(ಡಿ.04): ನವೆಂಬರ್ ತಿಂಗಳಲ್ಲಿ ಹೆಚ್ಚು ಕಡಿಮೆ ಹಾವು-ಏಣಿ ಆಟವಾಡಿದ್ದ ಆಭರಣ ದರ, ಡಿಸೆಂಬರ್ ಆರಂಭದಲ್ಲಿ ಗಮನಾರ್ಹ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.
ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.01ರಷ್ಟು ಇಳಿಕೆ ಕಂಡಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ ಇದೀಗ 38,323 ರೂ. ಆಗಿದೆ.
undefined
ಡಿಸೆಂಬರ್ ಶುಭಾರಂಭ: ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ!
ಕಳೆದ 10 ದಿನಗಳಲ್ಲಿ ಒಟ್ಟು 8 ದಿನಗಳಲ್ಲಿ ಚಿನ್ನದ ದರ ಇಳಿಕೆಯಾಗಿದ್ದು, ವರ್ಷದ ಆರಂಭದಲ್ಲಿ ಅಂದರೆ ಫಬ್ರವರಿ 2019ಕ್ಕೆ ಹೋಲಿಸಿದರೆ ಒಟ್ಟು 2,100 ರೂ. ಇಳಿಕೆ ಕಂಡಿದೆ.
ಇದೇ ವೇಳೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಏರಿಕೆ ಕಂಡು ಬಂದಿದ್ದು, ಒಟ್ಟು ಶೇ.0.17ರಷ್ಟು ಏರಿಕೆ ದಾಖಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 45,372 ರೂ. ಆಗಿದೆ.
ಚೆಲುವೆಯ ಅಂದದ ಮೊಗಕೆ: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ!
We're doing well with China—and we can do even better. pic.twitter.com/VP1Ntipb39
— The White House (@WhiteHouse)ಆದರೆ ಚೀನಾದೊಂದಿಗಿನ ವಾಣಿಜ್ಯ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯ ಪರಿಣಾಮವಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿದೆ. ಒಟ್ಟು ಶೇ.1ರಷ್ಟು ಏರಿರುವ ಚಿನ್ನದ ದರ ಒಂದು ಔನ್ಸ್'ಗೆ 1,476.55 ಡಾಲರ್ ಆಗಿದೆ.