ಒಟ್ಟು 2 ಸಾವಿರ ರೂ. ಇಳಿದ ಚಿನ್ನ: ಇಂದಿನ ಮಾರಾಟ ದರ..!

By Suvarna News  |  First Published Dec 24, 2019, 1:52 PM IST

ಒಟ್ಟು 2 ಸಾವಿರ ರೂ. ಇಳಿಕೆ ಕಂಡ ಚಿನ್ನದ ಬೆಲೆ| ಹೊಸ ವರ್ಷದ ಆರಂಭದಲ್ಲಿ ಮತ್ತಷ್ಟು ಇಳಿಕೆ ಕಾಣಲಿದೆಯೇ ಚಿನ್ನದ ಬೆಲೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತದ ಪರಿಣಾಮ| ದೇಶೀಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ ಚಿನ್ನ, ಬೆಳ್ಳಿ ದರ| ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ  38,088 ರೂ.| ದೇಶೀಯ ಮಾರುಕಟ್ಟೆಯಲ್ಲಿ 1 ಕೆಜಿ ಬೆಳ್ಳಿ ಬೆಲೆ  45,094 ರೂ.| ಅಮೆರಿಕ-ಚೀನಾ ನಡುವಿನ ವಾಣಿಜ್ಯ ಸಮರ ಮುಕ್ತಾಯ| ಚಿನ್ನದ ವಹಿವಾಟಿನ ಮೇಲೆ ಸಕಾರಾತ್ಮಕ ಪರಿಣಾಮ ಬೀಳುವ ಸಾಧ್ಯತೆ| 


ನವದೆಹಲಿ(ಡಿ.24): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತದ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದೆ.

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆಯಲ್ಲಿ  ಶೇ. 0.26ರಷ್ಟು ಏರಿದ್ದು, 10 ಗ್ರಾಂ ಚಿನ್ನದ ಬೆಲೆ ಇದೀಗ 38,088 ರೂ. ಆಗಿದೆ.

Tap to resize

Latest Videos

undefined

ಶುರುವಾಯಿತು ಇಳಿಕೆಯ ಪರ್ವ: ಬಂಗಾರದ ಬೆಲೆ ತುಂಬ ಅಪೂರ್ವ!

ಆದರೆ ಈ ವರ್ಷದ ಆರಂಭದ ದರಗಳಿಗೆ ಹೋಲಿಸಿದರೆ ಚಿನ್ನದ ದರದಲ್ಲಿ ಒಟ್ಟು 2 ಸಾವಿರ ರೂ. ಇಳಿಕೆ ಕಂಡುಬಂದಿದ್ದು, 40 ಸಾವಿರ ರೂ. ಗಡಿ ದಾಟಿದ್ದ ಚಿನ್ನದ ಬೆಲೆ ಇದೀಗ 38 ಸಾವಿರ ರೂ. ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡುಬಂದಿರುವ ಪರಿಣಾಮ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಶೇ.20ರಷ್ಟು ಏರಿಕೆ ಕಾಯ್ದುಕೊಂಡಿರುವುದು ವಿಪರ್ಯಾಸ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು ಶೇ.0.49ರಷ್ಟು ಏರಿಕೆಯಾಗಿದೆ. ಈ ಮೂಲಕ ಒಂದು ಕೆಜಿ ಬೆಳ್ಳಿ ಬೆಲೆ ಇದೀಗ 45,094 ರೂ. ಆಗಿದೆ.

ಆದರೂ, ಅಮೆರಿಕ-ಚೀನಾ ನಡುವಿನ ವಾಣಿಜ್ಯ ಸಮರ ಮುಕ್ತಾಯ ಕಂಡಿದ್ದು, ಇದರ ಸಕಾರಾತ್ಮಕ ಪರಿಣಾಮ ಚಿನ್ನದ ವಹಿವಾಟಿನ ಮೇಲೆ ಬೀಳಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

click me!