ಹಣ ಗಳಿಸುವುದು ಎಷ್ಟು ಕಷ್ಟವೋ, ಗಳಿಸಿದ್ದನ್ನು ಉಳಿಸುವುದು ಕೂಡಾ ಕಷ್ಟವೇ. ಆದರೆ, ಉಳಿಸುವ ಕಲೆಯನ್ನು ಅಭ್ಯಾಸ ಮಾಡಿಕೊಂಡರೆ ಭವಿಷ್ಯ ಭದ್ರವಾಗಿರುತ್ತದೆ.
ಹೊಸ ವರ್ಷದ ಹೊಸ್ತಿಲಲ್ಲಿ ರೆಸೊಲ್ಯೂಶನ್‌ಗಳ ಪಟ್ಟಿ ದೊಡ್ಡದೇ ಇರುತ್ತದೆ. ಅದರಲ್ಲೂ ಹಣಕಾಸಿನ ಕುರಿತು ಬಹಳಷ್ಟು ಜನ ತಮ್ಮ ಲಿಸ್ಟ್ ರೆಡಿ ಮಾಡುತ್ತಾರೆ. ಅವುಗಳಲ್ಲಿ ಹೆಚ್ಚಿನದು "ಸೇವ್ ಮೋರ್ ಮನಿ". ಹೌದು, ಉಳಿತಾಯ ಜಾಸ್ತಿ ಮಾಡಬೇಕು. ಆದರೆ ಹೇಗೆ ಮಾಡುವುದು? 2020ರಲ್ಲಿ ಸೇವಿಂಗ್ಸ್ ಅಕೌಂಟ್ ತೂಕ ಹೆಚ್ಚಿಸಬೇಕೆಂದರೆ ಹೀಗ್ ಮಾಡಿ.
1. ಬಜೆಟ್ ಫಾಲೋ ಮಾಡಿ
undefined
ಬಜೆಟಿಂಗ್ ಬಹಳ ಸಂಕೀರ್ಣವಾದುದು ಎಂದು ನಿಮಗನಿಸಬಹುದು. ಅದರೆ ಇದು ಬಹಳ ಸರಳವಾದ ಹಣಕಾಸು ನಿರ್ವಹಣೆಯ ಟ್ಯಾಕ್ಟಿಕ್. ನೀವು ಮಾಡಬೇಕಾದುದೆಂದರೆ ಮೊದಲಿಗೆ ನಿಮ್ಮ ಎಲ್ಲ ಬರಬಹುದಾದ ಪ್ರಮುಖ ಖರ್ಚುಗಳನ್ನು ಬರೆದಿಡಿ. ಅಂದರೆ ಟ್ಯಾಕ್ಸ್, ಮೆಂಬರ್‌ಶಿಪ್ ರಿನಿವಲ್, ಬಾಡಿಗೆ, ದಿನಸಿ, ಊಟದ ಖರ್ಚು, ತೆಗೆದುಕೊಳ್ಳಬೇಕಿರುವ ವಸ್ತುಗಳು ಎಲ್ಲವನ್ನೂ ಅಂದಾಜು ಹಾಕಿ ವಾರ್ಷಿಕ ಖರ್ಚು ಇಷ್ಟಾಗಬಹುದೆಂದು ಬರೆದಿಡಿ. ಈಗ ನಿಮ್ಮ ವಾರ್ಷಿಕ ಸಂಬಳ ಎಷ್ಟೆಂದು ಬರೆದು ಖರ್ಚು ಹಾಗೂ ಗಳಿಕೆಯನ್ನು ಹೋಲಿಸಿ ನೋಡಿ. ಒಂದು ವೇಳೆ ಎರಡೂ ಸಮ ಸಮ ಬಂದರೆ ನಿಮ್ಮ ಖರ್ಚಿನಲ್ಲಿ ಯಾವುದು ಉಳಿಸಬಹುದು ನೋಡಿ.
ಉಳಿಸಲು ಏನೂ ಇಲ್ಲವೆಂದಾಗಲೂ ಸ್ವಲ್ಪ ಹಣ ಉಳಿಸಿ
2. ಹೆಚ್ಚಾದ ಹಣ
ಈ ವರ್ಷ ಕಚೇರಿಯಲ್ಲಿ ಸಿಗುವ ಹೈಕನ್ನು, ಅದರಿಂದ ಹೆಚ್ಚಾಗಿ ಬರುವ ಹಣವೆಲ್ಲ ಸೇವಿಂಗ್ಸ್‌ಗೆ ಹೋಗಲಿ. ಹಣ ಹೆಚ್ಚಾಗುತ್ತದೆ ಎಂದು ಅದನ್ನು ಏನು ಶಾಪಿಂಗ್ ಮಾಡಿ ಖರ್ಚು ಮಾಡಲಿ ಎಂದು ಯೋಚಿಸುತ್ತಾ ಕೂರಬೇಡಿ. ಇದರೊಂದಿಗೆ ಸಿಗುವ ಎಕ್ಸ್ಟ್ರಾ ಸಮಯದಲ್ಲಿ ಬೇರೆ ಯಾವುದಾದರೂ ಆದಾಯದ ಮೂಲವನ್ನು ಹುಡುಕಿಕೊಂಡು ಹಣದ ಗಳಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವತ್ತಲೂ ಗಮನ ಹರಿಸಬಹುದು. ಉದಾಹರಣೆಗೆ, ಯೋಗ ತರಗತಿ ನಡೆಸುವುದು, ಆರ್ಟ್, ಕ್ರಾಫ್ಟ್ ಮಾರಾಟದಿಂದ ಗಳಿಕೆ, ಟ್ಯೂಶನ್ಸ್ ತೆಗೆದುಕೊಳ್ಳುವುದು, ಫ್ರೀಲ್ಯಾನ್ಸಿಂಗ್ ಮಾಡುವುದು ಇತ್ಯಾದಿ.
3. ಆಟೋಪೈಲಟ್
ನಿಮಗೆ ಕೈಗೆ ಸಿಗುವ ಹಣ ಉಳಿಸುವ ವಿಲ್ ಪವರ್ ಇಲ್ಲದಿದ್ದಲ್ಲಿ ಒಂದು ಸೇವಿಂಗ್ಸ್ ಖಾತೆ ತೆರೆದು, ಪ್ರತಿ ತಿಂಗಳು ಇಂತಿಷ್ಟು ಹಣ ಅದಕ್ಕೆ ಹೋಗುವಂತೆ ಮಾಡಿಬಿಡಿ. ಮತ್ತಷ್ಟು ಇನ್ಶೂರೆನ್ಸ್‌ಗೆ, ಇನ್ನೊಂದು ಸ್ವಲ್ಪ ರಿಟೈರ್‌ಮೆಂಟ್ ಖಾತೆಗೆ ಹೋಗುವಂತೆ ಮಾಡಿಡಿ. ಇದರಿಂದ ಅವೆಲ್ಲ ಸೇವಿಂಗ್ಸ್ ತಾವಾಗಿಯೇ ಪ್ರತಿ ತಿಂಗಳು ಖಾತೆ ಸೇರಿಕೊಳ್ಳುತ್ತವೆ. ಕೈಲಿ ಉಳಿದಿದ್ದಷ್ಟರಲ್ಲೇ ನೀವು ಹಣದ ನಿರ್ವಹಣೆ ಮಾಡುವ ಅನಿವಾರ್ಯತೆ ಬರುತ್ತದೆ.
ಪಾಕೆಟ್ ಮನಿಯೇ ಮಕ್ಕಳ ಮನಿ ಮ್ಯಾನೇಜ್ಮೆಂಟ್ ಗುರು!
4. ಕ್ರೆಡಿಟ್ ಕಾರ್ಡ್
ಕ್ರೆಡಿಟ್ ಕಾರ್ಡ್ ಬಳಕೆ ಕೇವಲ ಅನಗತ್ಯ ವಸ್ತುಗಳನ್ನು ಕೊಂಡು ಸಾಲ ಹೆಚ್ಚಿಸುತ್ತದೆಯೇ ಹೊರತು ಮತ್ತೇನೂ ಪ್ರಯೋಜನವಿಲ್ಲ. ಹಾಗಾಗಿ, ಮೊದಲು ಆ ಕ್ರೆಡಿಟ್ ಕಾರ್ಡನ್ನು ಎಸೆದುಬಿಡಿ. ಅದರ ಹೊರತಾಗಿಯೂ ಬೇರೇನೇ ಸಾಲಗಳನ್ನು ಮಾಡಿಕೊಂಡಿದ್ದರೆ ಅವನ್ನೆಲ್ಲ ತೀರಿಸಿಕೊಂಡು ಬಿಡಿ. ಈಗ ಸೇವ್ ಮಾಡುವುದು ಹೆಚ್ಚು ಸುಲಭವೆನಿಸುತ್ತದೆ.
5. ಶಾಪಿಂಗ್ ಮಿಗಿಸಿ
ಒಮ್ಮೆ ಲೆಕ್ಕ ಹಾಕಿ, ವರ್ಷ ಇಡೀ ಕೊಂಡ ಆ ರಾಶಿ ರಾಶಿ ಬಟ್ಟೆಗಳನ್ನು ಎಷ್ಟು ಬಾರಿ ಹಾಕಿದ್ದೀರಿ? ರೇಶ್ಮೆ ಸೀರೆ, ಡಿಸೈನರ್ ಸೀರೆಗಳಂತೂ ಅಬ್ಬಬ್ಬಾ ಎಂದರೆ ಒಂದು ಬಾರಿ. ಅದಕ್ಕಾಗಿ ನಾಲ್ಕು ಸಾವಿರ ರೂಪಾಯಿ ಕೊಟ್ಟು ಹೊಲಿಸಿದ ಬ್ಲೌಸ್ ಈಗಾಗಲೇ ಸಣ್ಣ ಆಗಿದೆ. ಇನ್ನು ನೂರು ಟಾಪ್‌ಗಳನ್ನು ತೆಗೆದುಕೊಂಡರೂ ಪ್ರತಿದಿನ ಹೊರ ಹೋಗುವಾಗ ಬಟ್ಟೆ ಇಲ್ಲ ಎಂಬ ಗೋಳು ತಪ್ಪಿದ್ದಲ್ಲ. ಬದಲಿಗೆ, ಹೊಸತು ಬೇಕೆನಿಸಿದರೆ ಇದ್ದಿದ್ದನ್ನೇ ಆಲ್ಟ್ರೇಶನ್ ಮಾಡಿಸಿ, ಮಕ್ಕಳಿಗೆ ನಿಮ್ಮದೇ ಹಳೆ ಬಟ್ಟೆಗಳಿಂದ ಬಟ್ಟೆ ಹೊಲಿಸಿ. ಈ ಬಾರಿ ಬಟ್ಟೆಗಾಗಿ ಹಾಕುವ ಹಣವನ್ನು ಅರ್ಧಕ್ಕರ್ಧದಷ್ಟು ಕಡಿಮೆ ಮಾಡಿ. ಇನ್ನು 10-15 ಚಪ್ಪಲಿ, ಶೂಗಳಿದ್ದರೂ ವರ್ಷ ಕಳೆವಷ್ಟರಲ್ಲಿ ಅವು ಹಳತೆನಿಸುತ್ತವೆ.
ಹಾಗಾಗಿ, ಅವಕ್ಕಾಗಿ ಹೆಚ್ಚು ಹಣ ಹಾಕಬೇಡಿ. ಇವೆಲ್ಲದರ ಮೇಲೆ ಸ್ಮೋಕಿಂಗ್, ಡ್ರಿಂಕಿಂಗ್ ಚಟ ಬಿಟ್ಟರೆ ಅದೆಷ್ಟೋ ಲಕ್ಷದ ಹತ್ತಿರವೇ ಉಳಿತಾಯವಾದೀತು. ಹಳೆಯ ಫೋನ್ ಕೆಲಸ ಮಾಡುವುದಿಲ್ಲವೆನ್ನುವವರೆಗೂ ಬಳಸುವುದು, ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳನ್ನು ಫೋನ್‌ನಿಂದ ಅನ್‌ಇನ್ಸ್ಟಾಲ್ ಮಾಡುವುದರಿಂದ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಮನೆಯಲ್ಲೇ ಮಾಡಿದ ಅಡಿಗೆ ಸೇವಿಸುವುದು, ಕಚೇರಿಗೆ ಬಾಕ್ಸ್ ತೆಗೆದುಕೊಂಡು ಹೋಗುವುದರಿಂದಲೂ ಸುಮಾರಷ್ಟು ಸಾವಿರಗಳು ಉಳಿಯುತ್ತವೆ.
ಶೇರೆಂಟಿಂಗ್: ಮಕ್ಕಳ ವಿಷಯದಲ್ಲಿ ಈ ತಪ್ಪು ಮಾಡಲೇಬೇಡಿ!
6. ಹಳೆಯದರ ಮಾರಾಟ
ಮನೆಯಲ್ಲಿ ಬೇಡದ ವಸ್ತುಗಳು ಎಷ್ಟಿವೆ ಎಂಬುದರತ್ತ ಒಮ್ಮೆ ಕಣ್ಣಾಡಿಸಿ. ಹಳೆಯ ಸೋಫಾ, ಟೇಬಲ್, ಫ್ಯಾನ್, ಸ್ಕೂಟರ್ ಇತ್ಯಾದಿಯಿದ್ದರೆ ಅದನ್ನು ಅದಕ್ಕಾಗಿಯೇ ಇರುವ ಕೆಲವಾರು ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಿ. ಇದರಿಂದ ಒಂದಿಷ್ಟು ಎಕ್ಸ್ಟ್ರಾ ಹಣ ಸಿಗುತ್ತದೆ. ತಕ್ಷಣ ಅದನ್ನು ಸೇವಿಂಗ್ಸ್ ಖಾತೆಗೆ ಹಾಕಿ.
7. ಎಕ್ಸ್ಟ್ರಾ ಉಳಿತಾಯ
ನೀರು, ವಿದ್ಯುತ್ ಬಳಕೆ ಮಿತಿಗೊಳಿಸಿ. ಇದರಿಂದ ವಿದ್ಯುತ್ ಬಿಲ್, ವಾಟರ್ ಬಿಲ್‌ನಲ್ಲಿ ಒಂದಿಷ್ಟು ಉಳಿಸಬಹುದು. ಇದರೊಂದಿಗೆ ಆನ್‌ಲೈನ್ ನ್ಯೂಸ್ ರೀಡಿಂಗ್ ಅಭ್ಯಾಸ ಮಾಡಿಕೊಂಡರೆ ಪೇಪರ್ ಕೊಳ್ಳುವುದು ನಿಲ್ಲಿಸಬಹುದು. ಎಲ್ಲವೂ ಇಂಟರ್ನೆಟ್‌ನಲ್ಲಿ ಸಿಗುವಾಗ ಟಿವಿ ಬಳಸದೆಯೂ ಎಂಟರ್ಟೇನ್‌ಮೆಂಟ್ ಪಡೆಯಬಹುದು. ಹಾಗಾಗಿ, ಕೇಬಲ್ ತೆಗೆಸಬಹುದು. ಇವೆಲ್ಲವೂ ನೀವು ಲೆಕ್ಕ ಹಾಕಿರದ ಹಣ. ಹಾಗಾಗಿ, ಇವೆಲ್ಲವನ್ನೂ ಸೇವಿಂಗ್ಸ್ ಲೆಕ್ಕಕ್ಕೆ ಸೇರಿಸಬಹುದು.