ವಿಶ್ವದ ನಂ.1 ಶ್ರೀಮಂತ ಮಸ್ಕ್‌ ಆಸ್ತಿ ಮೌಲ್ಯ 10 ಲಕ್ಷ ಕೋಟಿ ಕುಸಿತ!

Published : Mar 11, 2025, 08:51 AM ISTUpdated : Mar 11, 2025, 09:06 AM IST
ವಿಶ್ವದ ನಂ.1 ಶ್ರೀಮಂತ ಮಸ್ಕ್‌ ಆಸ್ತಿ ಮೌಲ್ಯ 10 ಲಕ್ಷ ಕೋಟಿ ಕುಸಿತ!

ಸಾರಾಂಶ

ಎಲಾನ್ ಮಸ್ಕ್ ಅವರ ಆಸ್ತಿಯಲ್ಲಿ ಗಣನೀಯ ಕುಸಿತವಾಗಿದೆ, ಸುಮಾರು 10.47 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ. ಟೆಸ್ಲಾ ಕಾರುಗಳ ಮಾರಾಟದಲ್ಲಿನ ಇಳಿಕೆ ಮತ್ತು ರಾಜಕೀಯ ಪ್ರವೇಶವು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ವಾಷಿಂಗ್ಟನ್‌ (ಮಾ.11): ಬಾಹ್ಯಾಕಾಶ, ಸಾಮಾಜಿಕ ಜಾಲತಾಣ, ಇಲೆಕ್ಟ್ರಿಕ್‌ ಕಾರು ಸೇರಿ ಅನೇಕ ಉದ್ಯಮಗಳನ್ನು ನಡೆಸುತ್ತಿರುವ ಅವುಗಳ ಒಡೆಯ, ಅಮೆರಿಕದ ಅಧಕ್ಷ ಡೊನಾಲ್ಡ್‌ ಟ್ರಂಪ್‌ರ ಆಪ್ತ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರ ಆಸ್ತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತವಾಗುತ್ತಿದೆ. ಕಳೆದ ಕೆಲ ವಾರಗಳಲ್ಲಿ ಮಸ್ಕ್‌ ಬರೋಬ್ಬರಿ 10.47 ಲಕ್ಷ ಕೋಟಿ ರು. ಕಳೆದುಕೊಂಡಿದ್ದಾರೆ. ವರದಿಯೊಂದರ ಪ್ರಕಾರ, 2025ರ ಆರಂಭದಿಂದ ಮಸ್ಕ್‌ರ ಆಸ್ತಿಯಲ್ಲಿ ಶೇ.25ರಷ್ಟು ಇಳಿಕೆಯಾಗಿದೆ. ಆದರೂ, 28.81 ಲಕ್ಷ ಕೋಟಿ ರು. ಹೊಂದುವ ಮೂಲಕ ‘ಅತಿ ಶ್ರೀಮಂತ’ ಪಟ್ಟವನ್ನು ಕಾಯ್ದಿರಿಸಿಕೊಂಡಿದ್ದಾರೆ. ಟೆಸ್ಲಾ ಕಾರು ಮಾರಾಟ ಇಳಿಕೆ, ರಾಜಕೀಯ ಪ್ರವೇಶವು ಇಳಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಇದಕ್ಕೆ ಕಾರಣವೇನು?: ಮಸ್ಕ್‌ ಅವರ ಒಡೆತನದ ಇ-ಕಾರು ಉತ್ಪಾದಕ ಟೆಸ್ಲಾದ ಷೇರು ಮೌಲ್ಯ ಕುಸಿತವು ಆಸ್ತಿ ಇಳಿಕೆಗೆ ಪ್ರಮುಖ ಕಾರಣ. ಕಳೆದೆರಡು ತಿಂಗಳಲ್ಲಿ ಟೆಸ್ಲಾದ ಷೇರು ಮೌಲ್ಯ ಶೇ.35ರಷ್ಟು (34.92 ಲಕ್ಷ ಕೋಟಿ ರು.) ಇಳಿಕೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳ ಇ-ಕಾರುಗಳು ಲಭ್ಯವಿರುವ ಕಾರಣ ಟೆಸ್ಲಾದ ಮಾರಾಟ 2024ರ ಡಿಸೆಂಬರ್‌ಗೆ ಹೋಲಿಸಿದರೆ 2025ರ ಜನವರಿಯ ಹೊತ್ತಿಗೆ ಶೇ.16ರಷ್ಟು ಕುಸಿದಿದೆ.

ಎಲಾನ್ ಮಸ್ಕ್ Vs ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಜಗಳ, ಟ್ರಂಪ್ ಪಂಚಾಯಿತಿ!

ಇದರೊಂದಿಗೆ, ಮಸ್ಕ್‌ ಇತ್ತೀಚೆಗೆ ಅಮೆರಿಕ ರಾಜಕೀಯಕ್ಕೆ ಧುಮುಕಿದ್ದಾರೆ. ಟ್ರಂಪ್‌ ಸರ್ಕಾರದಿಂದ ಸೃಷ್ಟಿಸಲಾಗಿರುವ ದಕ್ಷತೆಯ ಇಲಾಖೆಯ (ಡಾಜ್‌) ಮುಖ್ಯಸ್ಥರ ಹುದ್ದೆಗೇರಿರುವುದರಿಂದ ಮಸ್ಕ್‌ ತಮ್ಮ ಉದ್ಯಮಗಳ ಕಡೆ ಎಷ್ಟು ಗಮನ ಹರಿಸಿಯಾರು ಎಂಬ ಪ್ರಶ್ನೆ ಪೇಟೆಗಳಲ್ಲಿ ಉದ್ಭವಿಸಿದೆ. ಹೀಗಾಗಿ ಆಸ್ತಿ ಕರಗಲು ಇದೂ ಒಂದು ಕಾರಣ.

ಟೆಕ್‌ ದೈತ್ಯ ಎಲಾನ್ ಮಸ್ಕ್‌ಗೆ 14ನೇ ಮಗು ಜನಿಸಿದ ಸಂಭ್ರಮ, ಮಗುವಿನ ತಾಯಿ ಯಾರು?

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ