ಮೊಬೈಲ್ ನೆಟ್‌ವರ್ಕ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಯೋ ಪ್ಲಾಟ್‌ಫಾಮ್‌ರ್ ಲಿ| ಜಿಯೋ ಜತೆ ಜನರಲ್ ಅಟ್ಲಾಂಟಿಕ್ 6,600 ಕೋಟಿ ರು. ಹೂಡಿಕೆ| ಹೂಡಿಕೆ ಕುರಿತು ಮಾತನಾಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಮುಖೇಶ್ ಅಂಬಾನಿa
ಮುಂಬೈ(ಮೇ.18): ಮೊಬೈಲ್ ನೆಟ್‌ವರ್ಕ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಯೋ ಪ್ಲಾಟ್‌ಫಾಮ್‌ರ್ ಲಿ. ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಸಹಯೋಗದಲ್ಲಿ ಜನರಲ್ ಅಟ್ಲಾಂಟಿಕ್ ಸಂಸ್ಥೆಯು 6,598 ಕೋಟಿ ರು.ಗಳ ಹೂಡಿಕೆ ಮಾಡುವುದಾಗಿ ಘೋಷಿಸಿವೆ.
ಈ ಹೂಡಿಕೆಯಿಂದ ಕಳೆದ ನಾಲ್ಕು ವಾರಗಳಿಗೂ ಕಡಿಮೆ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾಟ್ರ್ನರ್ಸ್ ಹಾಗೂ ಜನರಲ್ ಅಟ್ಲಾಂಟಿಕ್ ಸೇರಿದಂತೆ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾಮ್‌ರ್ 67,194 ಕೋಟಿ ರು.ಗಳ ಹೂಡಿಕೆ ಪಡೆದುಕೊಂಡಿದೆ.
ಹೂಡಿಕೆ ಕುರಿತು ಮಾತನಾಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಮುಖೇಶ್ ಅಂಬಾನಿ, ವಿಶ್ವದ ಮುಂಚೂಣಿ ಹೂಡಿಕೆದಾರ ಸಂಸ್ಥೆಯಾಗಿರುವ ಜನರಲ್ ಅಟ್ಲಾಂಟಿಕ್ ಅನ್ನು ಪಾಲುದಾರರಾಗಿ ಸ್ವಾಗತಿಸಲು ಸಂತೋಷವಾಗುತ್ತಿದೆ. ಭಾರತಕ್ಕಾಗಿ ಡಿಜಿಟಲ್ ಸಮಾಜದ ನಮ್ಮ ದೂರದೃಷ್ಟಿಯನ್ನು ಜನರಲ್ ಅಟ್ಲಾಂಟಿಕ್ ಹಂಚಿಕೊಳ್ಳುತ್ತದೆ ಮತ್ತು 1.3 ಶತಕೋಟಿ ಭಾರತೀಯರ ಜೀವನವನ್ನು ಸಮೃದ್ಧಗೊಳಿಸುವಲ್ಲಿ ಡಿಜಿಟಲೀಕರಣದ ಪರಿವರ್ತಕ ಶಕ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನರಲ್ ಅಟ್ಲಾಂಟಿಕ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿಲ್ ಫೋರ್ಡ್ ಮಾತನಾಡಿ, ಭಾರತೀಯ ಆರ್ಥಿಕತೆ ವೇಗವನ್ನು ಗಮನಾರ್ಹವಾಗಿ ಅಭಿವೃದ್ಧಿಪಡಿಸುವ ಮತ್ತು ದೇಶಾದ್ಯಂತ ಡಿಜಿಟಲ್ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಲಿದೆ. ಜಿಯೋದ ಡಿಜಿಟಲ್ ಕ್ರಾಂತಿಯಿಂದ ಭಾರತದಲ್ಲಿ ಸಾಕಷ್ಟುಮಹತ್ವದ ಬದಲಾವಣೆಗಳಾಗಿವೆ. ಈ ವ್ಯವಹಾರವನ್ನು ಮತ್ತಷ್ಟುಹೆಚ್ಚಿಸಲು ಕೈಜೋಡಿಸುವುದಾಗಿ ಹೇಳಿದ್ದಾರೆ.