ವಾಟ್ಸಾಪಿಗೆ BSNL ಠಕ್ಕರ್,   ಅನ್‌ಲಿಮಿಟೆಡ್ ಕೊಡುಗೆಯ ಫೀಚರ್!

By Suvarna NewsFirst Published May 17, 2020, 5:47 PM IST
Highlights

ಬಿಎಸ್ ಎನ್ ಎಲ್ ಹೊಸ ಸಾಹಸ/ ಗ್ರೂಪ್ ಗೆ ವೈಸ್ ಮೆಸೇಜ್ ಕಳಿಸುವ ಅವಕಾಶ/ ಇನ್ನೆರಡು ತಿಂಗಳಲ್ಲಿ ಹೊಸ ಸೌಲಭ್ಯ/ ಟೆಲಿಕಾಂ ಕ್ಷೇತ್ರದಲ್ಲೇ ಮೊದಲು

ನವದೆಹಲಿ(ಮೇ 17)  ಕೊರೋನಾ ಲಾಕ್ ಡೌನ್ ನಡುವೆ ಬಿಎಸ್ ಎಲ್ ಎಲ್ ಸುದ್ದಿಯೊಂದನ್ನು ಕೊಟ್ಟಿದೆ.   ಒಂದು ಗ್ರೂಪ್ ಗೆ ಆಡಿಯೋ ಕ್ಲಿಪ್ ಸೆಂಡ್ ಮಾಡುವ ಅವಕಾಶ ನೀಡುತ್ತಿದೆ. 

ನಿಮ್ಮ ಫೋನ್ ನಲ್ಲಿ ರೆಕಾರ್ಡ್ ಮಾಡಿ ಸುಲಭವಾಗಿ ಸೆಂಡ್ ಮಾಡಬಹುದು. ಇದೇ ಮೊದಲ ಸಾರಿ ಇಂಥ ಸೇವೆ ನೀಡುತ್ತಿದ್ದು ಬಿಎಸ್ ಎನ್ ಎಲ್ ಹೊಸ ಹೆಜ್ಜೆ ಇಡುತ್ತಿದೆ.

ಇನ್ನೆರಡು ತಿಂಗಳಲ್ಲಿ ಗ್ರೂಪ್  ಗೆ ಆಡಿಯೋ ಕ್ಲಿಪ್ ಸೆಂಡ್ ಮಾಡುವ ಅವಕಾಶ ಲಭ್ಯವಾಗಲಿದೆ. ಎರ್ನಾಕುಲಂ ನಲ್ಲಿರುವ  ಬಿಎಸ್ ಎನ್ ಎಲ್ ಟೀಮ್ ಹೊಸದೊಂದು ಆಪ್ ಸಿದ್ಧಮಾಡಿದ್ದು ಇದರ ಮುಖೇನ ಆಡಿಯೋ ಸಂದೇಶ ರವಾನೆ ಮಾಡಬಹುದಾಗುತ್ತದೆ/

ಕಲ್ಲಂಗಡಿ ಹಣ್ಣಿನೊಂದಿಗೆ ಟಾಫ್ ಲೆಸ್, ಬಿಎಸ್‌ಎನ್‌ಎಲ್ ಸಿಬ್ಬಂದಿ ಮನೆಗೆ!

ಸಂದೇಶ ರವಾನೆ ಹೇಗೆ?  ಬಿಎಸ್ ಎನ್ ಎಲ್ ಗ್ರಾಹಕ ಮೊದಲಿಗೆ ತನ್ನ ಸಂಖ್ಯೆ ರಜಿಸ್ಟರ್ ಮಾಡಬೇಕಾಗುತ್ತದೆ. ಇದಾದ ಮೇಲೆ ವೈಸ್ ಸಂದೇಶ ರೆಕಾರ್ಡ್ ಮಾಡಿ ಮೊಬೈಲ್ ಆಪ್ ಗೆ ಅಪ್ ಲೋಡ್ ಮಾಡಬೇಕಾಗುತ್ತದೆ. ಇದಾದ ಮೇಲೆ ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿ  ಯಾರಿಗೆ ಸೆಂಡ್ ಮಾಡಬೇಕು ಅವರ ಸಂಖ್ಯೆ ಸೆಲೆಕ್ಟ್ ಮಾಡಿ ಸಬ್ ಮಿಟ್ಟ ಬಟನ್ ಒಕೆ ಮಾಡಬೇಕಾಗುತ್ತದೆ. 

ನೀವು ಸೆಂಡ್ ಮಾಡಿದವರಿಗೆ ಕಾಲ್ ಹೋಗುತ್ತದೆ. ಅವರು ರಿಸಿವ್ ಮಾಡಿದಾಗ  ನೀವು ಕಳಿಸಿದ ಆಡಿಯೋ ಸಂದೇಶ ತೆರೆದುಕೊಳ್ಳುತ್ತದೆ.  ಇದನ್ನು ಕಾಲ್ಮ ಪಂಪಿಂಗ್ ಎಂದು ಕರೆಯಲಾಗಿದ್ದು ಸಂದೇಶ ಸ್ವೀಕಾರ ಮಾಡದೇ ಇದ್ದರೆ ಕೆಲ ಸಮಯದ ನಂತರ ಮತ್ತೆ ಕಾಲ್ ಹೋಗುತ್ತದೆ.

ಲಿಮಿಟ್ ಇಲ್ಲ: ಉಳಿದ ಅಪ್ಲಿಕೇಶನ್ ಗೆ ಹೋಲಿಕೆ ಮಾಡಿದರೆ ಇದು ಒಂದು ಹೆಜ್ಜೆ ಮುಂದಿದೆ. ಇಲ್ಲಿ ಎಷ್ಟು ನಂಬರ್ ಬೇಕಾದರೂ ಸೆಲೆಕ್ಟ್ ಮಾಡಿಕೊಳ್ಳಬಹುದು ಲಿಮಿಟ್ ಇಲ್ಲ.  ಈ ಹಿಂದೆ ಈ ರೀತಿ ಸಂದೇಶ ರವಾನೆ ಮಾಡಬೇಕಿದ್ದರೆ ಬಿಎಸ್ ಎನ್ ಎಲ್ ಜಿಲ್ಲಾ ಕೇಂದ್ರಗಳಿಂದ ಅನುಮತಿ ಪಡೆದುಕೊಳ್ಳಬೇಕಾಗಿತ್ತು.

click me!