ಜಿಬಿಎ ಬಜೆಟ್‌ಗೆ ರಾಜ್ಯ, ಕೇಂದ್ರ ಸರ್ಕಾರದಿಂದ ₹4196 ಕೋಟಿ ನೀರಿಕ್ಷೆ

Kannadaprabha News   | Kannada Prabha
Published : Mar 30, 2026, 05:28 AM IST
 Greater Bengaluru Authority

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ಬಳಿಕ ಐದು ಪಾಲಿಕೆಗಳ ಬಹುನಿರೀಕ್ಷೆಯ ಆದಾಯ ಮತ್ತು ವೆಚ್ಚಗಳ ಅಂದಾಜು ಬಜೆಟ್‌ನಲ್ಲಿ ಶೇ.21ರಷ್ಟು ಹಣ ಅಂದರೆ ₹4,196 ಕೋಟಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿದೆ.

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ಬಳಿಕ ಐದು ಪಾಲಿಕೆಗಳ ಬಹುನಿರೀಕ್ಷೆಯ ಆದಾಯ ಮತ್ತು ವೆಚ್ಚಗಳ ಅಂದಾಜು ಬಜೆಟ್‌ನಲ್ಲಿ ಶೇ.21ರಷ್ಟು ಹಣ ಅಂದರೆ ₹4,196 ಕೋಟಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿದೆ.

ನಗರದ ರಸ್ತೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳ ನಿರ್ಮಾಣ, ಅಭಿವೃದ್ಧಿ ಮತ್ತು ಮೇಲ್ದರ್ಜೆಗೆ ಏರಿಸಲು ಸರ್ಕಾರಗಳೇ ದೊಡ್ಡ ಮೊತ್ತದ ಅನುದಾನವನ್ನು ಒದಗಿಸಬೇಕಿದೆ. ಅದರಲ್ಲಿ ಸಿಂಹಪಾಲು ಅನುದಾನವನ್ನು ರಾಜ್ಯ ಸರ್ಕಾರವೇ ಒದಗಿಸಬೇಕಿದೆ. ರಾಜ್ಯ ಸರ್ಕಾರ ₹3,922.81 ಕೋಟಿ ಒದಗಿಸಬೇಕಿದ್ದು, ಕೇಂದ್ರ ಸರ್ಕಾರ ₹794.15 ಬಿಡುಗಡೆ ಮಾಡಬೇಕಾಗಿದೆ.

ಐದು ಪಾಲಿಕೆಗಳ ಪೈಕಿ ಪಶ್ಚಿಮ ನಗರ ಪಾಲಿಕೆಯು ಸರ್ಕಾರಗಳ ಅನುದಾನವನ್ನು ಗರಿಷ್ಠ ಪ್ರಮಾಣದಲ್ಲಿ ನೆಚ್ಚಿಕೊಂಡಿದೆ. ಒಟ್ಟಾರೆ ಆದಾಯದಲ್ಲಿ ₹1,196.72 ಕೋಟಿಯನ್ನು (ಶೇ.30) ಸರ್ಕಾರಗಳು ಒದಗಿಸಬೇಕಿದೆ. ನಂತರದಲ್ಲಿ ಉತ್ತರ ನಗರ ಪಾಲಿಕೆಯಿದ್ದು, ತನ್ನ ಒಟ್ಟು ಅಂದಾಜು ಆದಾಯದಲ್ಲಿ ₹886.24 ಕೋಟಿಯನ್ನು (ಶೇ.23.93) ಸರ್ಕಾರಗಳಿಂದ ನಿರೀಕ್ಷಿಸಿದೆ.

ದಕ್ಷಿಣ ನಗರ ಪಾಲಿಕೆಗೆ ₹837.28 ಕೋಟಿ (ಶೇ.21.73), ಕೇಂದ್ರ ನಗರ ಪಾಲಿಕೆಗೆ ₹741.58 ಕೋಟಿ (ಶೇ.26) ಹಾಗೂ ಪೂರ್ವ ಪಾಲಿಕೆಯು ಸರ್ಕಾರಗಳಿಂದ ₹534.37 ಕೋಟಿ (ಶೇ.14) ಅನುದಾನವನ್ನು ಬಯಸಿದೆ.

ದಕ್ಷಿಣ ನಗರ ಪಾಲಿಕೆಒಟ್ಟು ನಿರೀಕ್ಷಿತ ಆದಾಯ: 3,826 ಕೋಟಿ ರು.

ಕೇಂದ್ರ ಸರ್ಕಾರ: 159.29 ಕೋಟಿ ರು. (ಶೇ.4.01)

ರಾಜ್ಯ ಸರ್ಕಾರ: 677.99 ಕೋಟಿ ರು. (ಶೇ.17.72)

ಕೇಂದ್ರ ಮತ್ತು ರಾಜ್ಯದ ಒಟ್ಟು ಅನುದಾನ: 837.28 ಕೋಟಿ ರು. (ಶೇ.21.73)

ಪೂರ್ವ ನಗರ ಪಾಲಿಕೆಒಟ್ಟು ನಿರೀಕ್ಷಿತ ಆದಾಯ: 3,888 ಕೋಟಿ ರು.

ಕೇಂದ್ರ ಸರ್ಕಾರ: 114.09 ಕೋಟಿ ರು. (ಶೇ. 3)​ರಾಜ್ಯ ಸರ್ಕಾರ: 420.28 ಕೋಟಿ ರು. (ಶೇ. 11)​

ಕೇಂದ್ರ ಮತ್ತು ರಾಜ್ಯದ ಒಟ್ಟು ಅನುದಾನ: 534.37 ಕೋಟಿ ರು. (ಶೇ. 14)

ಪಶ್ಚಿಮ ನಗರ ಪಾಲಿಕೆಒಟ್ಟು ನಿರೀಕ್ಷಿತ ಆದಾಯ: 4,732.81 ಕೋಟಿ ರು.​

ಕೇಂದ್ರ ಸರ್ಕಾರದ ಅನುದಾನ: 224.56 ಕೋಟಿ ರು. (ಶೇ. 5)

​ರಾಜ್ಯ ಸರ್ಕಾರದ ಒಟ್ಟು ಅನುದಾನ: 1,196.72 ಕೋಟಿ ರು. (ಶೇ. 25)

ಕೇಂದ್ರ ಮತ್ತು ರಾಜ್ಯದ ಒಟ್ಟು ಅನುದಾನ: 1,196.72 (ಶೇ.30)

ಉತ್ತರ ನಗರ ಪಾಲಿಕೆ​ಒಟ್ಟು ನಿರೀಕ್ಷಿತ ಆದಾಯ: 4,344 ಕೋಟಿ ರೂ.​

ಕೇಂದ್ರ ಸರ್ಕಾರದ ಅನುದಾನ: 153.29 ಕೋಟಿ ರು. (ಶೇ. 3.54)​

ರಾಜ್ಯ ಸರ್ಕಾರದ ಅನುದಾನ: 886.24 ಕೋಟಿ ರು. (ಶೇ. 20.39)

ಕೇಂದ್ರ ಮತ್ತು ರಾಜ್ಯದ ಒಟ್ಟು ಅನುದಾನ: 886.24 ಕೋಟಿ ರು. (ಶೇ.23.93)

ಕೇಂದ್ರ ನಗರ ಪಾಲಿಕೆ

ಒಟ್ಟು ನಿರೀಕ್ಷಿತ ಆದಾಯ: 3,427 ಕೋಟಿ ರು.​

ಕೇಂದ್ರ ಸರ್ಕಾರದ ಅನುದಾನ: 142.92 ಕೋಟಿ ರು. (ಶೇ. 4)​

ರಾಜ್ಯ ಸರ್ಕಾರದ ಅನುದಾನ: 741.58 ಕೋಟಿ ರು. (ಶೇ. 22)

ಕೇಂದ್ರ ಮತ್ತು ರಾಜ್ಯದ ಒಟ್ಟು ಅನುದಾನ: 741.58 ಕೋಟಿ ರು. (ಶೇ.26)

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಶಾಕ್ ಇಲ್ಲ, ಹಲವರಿಗೆ ಗೊತ್ತಾಗಲೇ ಇಲ್ಲ, ಜೊಮ್ಯಾಟೋ ಪ್ಲಾಟ್‌ಫಾರ್ಮ್ ಫೀ‌ನಿಂದ 1000 ಕೋಟಿ ಆದಾಯ
25 ವರ್ಷದಲ್ಲಿ ಮೊದಲ ಬಾರಿ ಚಿನ್ನದ ಮಾರುಕಟ್ಟೆಯಲ್ಲಿ ಹಲ್​ಚಲ್​: ಬಂಗಾರದ ಮಾರಾಟಕ್ಕೆ ಮುಂದಾದ ರಷ್ಯಾ