ನವೀಕರಣಗೊಂಡ ಐಕಾನಿಕ್ ಆಡಿ 100 ಕಾರು, ರೇಮಂಡ್ ಮಾಲೀಕರಿಗೆ ಥ್ಯಾಂಕ್ಸ್ ಎಂದ ರವಿಶಾಸ್ತ್ರಿ!

1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಆಂಡ್ ಹೆಜಸ್ ವಿಶ್ವ ಚಾಂಪಿಯನ್ ಷಿಪ್ ಕ್ರಿಕೆಟ್ ಟೂರ್ನಿಯಲ್ಲಿ ರವಿಶಾಸ್ತ್ರಿ ಅವರಿಗೆ ಉಡುಗೊರೆಯ ರೂಪದಲ್ಲಿ ಆಡಿ 100 ಕಾರು ನೀಡಲಾಗಿತ್ತು. ಆದರೆ, ಇತ್ತೀಚೆಗೆ ಅವರನ್ನು ನವೀಕರಣ ಮಾಡಲು ಪ್ರಯತ್ನ ಮಾಡಿದರೂ ಅದರಲ್ಲಿ ಯಶಸ್ವಿಯಾಗಿರಲಿಲ್ಲ. ಕೊನೆಗೆ ಸೂಪರ್ ಕಾರ್ ಕ್ಲಬ್ ಗ್ಯಾರೇಜ್ ನಲ್ಲಿ ಅಂದಾಜು 8 ತಿಂಗಳ ನಿರಂತರ ಪ್ರಯತ್ನದ ಬಳಿಕ ಕಾರನ್ನು ಹೊಸದರಂತೆ ಮಾಡಲಾಗಿದೆ.

Former Cricketer Ravi Shastris Audi 100 Gets Restored By Super Car Club Garage owned by Raymond Group Gautam Singhania san

ಮುಂಬೈ (ಜೂನ್ 4): ಟೀಮ್ ಇಂಡಿಯಾ ಮಾಜಿ ಆಟಗಾರ (Indian former cricketer ) ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ( former head coach of the India national cricket team) ರವಿಶಾಸ್ತ್ರಿ (Ravi Shastri) ಅಂದಾಜು ಒಂದು ವರ್ಷದ ಬಳಿಕ ಸಂಪೂರ್ಣ ನವೀಕರಣಗೊಂದ ತಮ್ಮ ಆಡಿ 100 ಲಕ್ಸುರಿ ಸೆಡಾನ್ ಕಾರಿನ ಡೆಲಿವರಿ ಪಡೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ರವಿಶಾಸ್ತ್ರಿ ಇದನ್ನು ಹಂಚಿಕೊಂಡಿದ್ದು, ರೇಮಂಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾಗೆ ( Managing Director of Raymond Group Gautam Singhania) ಈ ಕುರಿತಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಇಡೀ ಮುಂಬೈನಲ್ಲಿ ಎಲ್ಲಾ ಕಡೆ ಹುಡುಕಾಡಿದ್ದರೂ, ಆಡಿ 100 ಲಕ್ಸುರಿ ಸೆಡಾನ್ (Audi 100 luxury sedan) ಕಾರಿನ ಪಾರ್ಟ್ಸ್ ಗಳು ಸಿಗದ ಕಾರಣಕ್ಕಾಗಿ ಯಾವುದೇ ಗ್ಯಾರೇಜ್ ಗಳು ಇದನ್ನು ನವೀಕರಣ ಮಾಡಲು ಮುಂದೆ ಬಂದಿರಲಿಲ್ಲ. ಈ ವೇಳೆ ಗೌತಮ್ ಸಿಂಘಾನಿಯಾ ಅವರ ಸೂಪರ್ ಕಾರ್ ಕ್ಲಬ್ ಗ್ಯಾರೇಜ್ (ಎಸ್ ಸಿಸಿಜಿ) (Super Car Club Garage (SCCG) )ಇದನ್ನು ನವೀಕರಣ ಮಾಡಿಕೊಡುವ ಭರವಸೆ ನೀಡಿತ್ತು. ಅದರಂತೆ ಅಂದಾಜು 1 ವರ್ಷದ ಹೋರಾಟದ ಬಳಿಕ ಕಾರು ಹೊಸದರಂತೆ ಬದಲಾಗಿದೆ. ಕಾರಿನ ದುರಸ್ತಿಗಾಗಿಯೇ 8 ತಿಂಗಳು ಸಮಯ ಹಿಡಿದಿದೆ ಎಂದು ಎಸ್ ಸಿಸಿಜಿ ತಿಳಿಸಿದೆ.

ಎಂಟು ತಿಂಗಳ ಹಿಂದೆ ಕಾರು ನಮ್ಮ ಗ್ಯಾರೇಜ್ ಗೆ ಬಂದಾಗ ಕೆಟ್ಟ ಪರಿಸ್ಥಿತಿಯಲ್ಲಿತ್ತು. ಯಾವುದೇ ಗ್ಯಾರೇಜ್ ಕೂಡ ಇದರ ನವೀಕರಣ ಮಾಡುವ ಸಾಧ್ಯತೆಯನ್ನು ತಳ್ಳುಹಾಕಿದ್ದವು. ಅದಕ್ಕೆ ಕಾರಣ, ಇದರ ಪಾರ್ಟ್ಸ್ ಗಳು ಸಿಗುತ್ತಿರಲಿಲ್ಲ. ಆದರೆ, 8 ತಿಂಗಳ ಅವಿರತ ಹೋರಾಟದ ಬಳಿಕ ಕಾರು ಉತ್ತಮ ಸ್ಥಿತಿಗೆ ಬಂದಿದೆ. ಆರಂಭದಿಂದ ಅಂತ್ಯದವರೆಗಿನ ಕೆಲಸ ಲೆಕ್ಕ ಹಾಕಿದರೆ, ಒಂದು ವರ್ಷದ ಪ್ರಕ್ರಿಯೆ ಇದಾಗಿತ್ತು ಎಂದು ಎಸ್ ಸಿಸಿಜಿ ತಿಳಿಸಿದೆ. ಗೌತಮ್ ಸಿಂಘಾನಿಯಾ ಅವರೇ ಸ್ವತಃ ಈ ಕಾರನ್ನು ರವಿಶಾಸ್ತ್ರಿ ಅವರಿಗೆ ಹಸ್ತಾಂತರ ಮಾಡಿದರು.


ಆಸ್ಟ್ರೇಲಿಯಾದಲ್ಲಿ 1985ರಲ್ಲಿ ನಡದ ಬೆನ್ಸನ್ ಮತ್ತು ಹೆಜಸ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಯನ್ನು ರವಿಶಾಸ್ತ್ರಿ ಗೆದ್ದಿದ್ದರು, ಅದಕ್ಕಾಗಿ ಅವರಿಗೆ ಆಡಿ 100 ಲಕ್ಷುರಿ ಸೆಡಾನ್ ಅನ್ನು ಉಡುಗೊರೆಯಾಗಿ ನೀಡಲಾಗಿತ್ತು. ಅದಲ್ಲದೆ, ಈ ಟೂರ್ನಿಯ ಫೈನಲ್ ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ ವಿಶ್ವ ಚಾಂಪಿಯನ್ ಎನಿಸಿಕೊಂಡಿತ್ತು. ರವಿಶಾಸ್ತ್ರಿ ಕಾರ್ ಗೆದ್ದ ಬೆನ್ನಲ್ಲಿಯೇ ಅವರ ಕಾರ್ ನಲ್ಲಿಯೇ ಇಡೀ ತಂಡ ಎಂಸಿಜಿಯಲ್ಲಿ ಸುತ್ತ ರೌಡ್ ಹೊಡೆದಿತ್ತು.

Former Cricketer Ravi Shastris Audi 100 Gets Restored By Super Car Club Garage owned by Raymond Group Gautam Singhania san
"ಈಗ ಈ ಕಾರ್ 37 ವರ್ಷದ ಹಿಂದೆ ನಾನು ಗೆದ್ದಿದ್ದ ಕಾರ್ ಎನಿಸುತ್ತಿದೆ. ಇದರಲ್ಲಿ ಏನೂ ಬದಲಾವಣೆ ಮಾಡಲಾಗಿಲ್ಲ. ಗೌತಮ್ ಸಿಂಘಾನಿಯಾಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ. ಈ ಕಾರ್ ನಲ್ಲಿ ಹತ್ತಿ ಕುಳಿತಾಗಿ ನನಗೆ 1985ರ ಅಂದಿನ ರಾತ್ರಿಯೇ ನೆನಪಾಗುತ್ತದೆ. ಎಂಥಾ ಸ್ಮರಣೀಯ ದಿನಗಳು ಅದಾಗಿದ್ದವು' ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಮುಂದೆ ವಿಶ್ವಕಪ್‌ ಇದೆ, ಹನಿಮೂನ್ ವೇಳೆ ಸೊಂಟ ಹುಷಾರು..! ದೀಪಕ್ ಚಹಾರ್ ಕಾಲೆಳೆದ ಸಹೋದರಿ

ರಾಜೀವ್ ಗಾಂಧಿಯನ್ನು ನೆನಪಿಸಿಕೊಂಡ ರವಿಶಾಸ್ತ್ರಿ: ಕಾರ್ ತೆಗೆದುಕೊಳ್ಳುವ ವೇಳೆ ರವಿಶಾಸ್ತ್ರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ನೆನಪಿಸಿಕೊಂಡರು. ಅಂದು ರಾಜೀವ್ ಗಾಂಧಿ ಕಾರ್ ಅನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಆಮದು ಸುಂಕವನ್ನು ತೆಗೆದುಹಾಕಿದ್ದ ಕಾರಣಕ್ಕಾಗಿಯೇ ಕಾರು ಭಾರತಕ್ಕೆ ಬರಲು ಸಾಧ್ಯವಾಯಿತು. ಅಂದು ದೇಶದಲ್ಲಿದ್ದ ಅತಿಯಾದ ತೆರಿಗೆಯಿಂದಾಗಿ ಕಾರ್ ಅನ್ನು ತರುವುದು ಸಾಧ್ಯವಾಗುತ್ತಿರಲಿಲ್ಲ.

ವಿಶ್ವ ಕಿರಿಯರ ಅಥ್ಲೆಟಿಕ್ಸ್‌ ಕೂಟಕ್ಕೆ ರಾಜ್ಯದ ಕೃಷಿಕ್, ಪ್ರಿಯಾ ಆಯ್ಕೆ

ಇದೇ ವೇಳೆ ಅಂದು ಹೇಳಿದ್ದ ಮಾತನ್ನೇ ರವಿಶಾಸ್ತ್ರಿ ಪುನರುಚ್ಚರಿಸಿದರು. ಇದು ನನ್ನ ಕಾರ್ ಅಲ್ಲ. ಇಡೀ ಭಾರತ ಕ್ರಿಕೆಟ್ ತಂಡದ, ಇಡೀ ಭಾರತದ ಕಾರ್ ಎಂದರು. ಇದು ಭಾರತಕ್ಕೆ ಆಮದಾದ ಮೊದಲ ಆಡಿ ಕಾರು ಆಗಿತ್ತು. ಇಡೀ ಕಾರ್ ನಲ್ಲಿ ಮಾಡಿರುವ ಏಕೈಕ ಬದಲಾವಣೆ ಎಂದರೆ, ಮುಂಭಾಗದ ಎರಡೂ ಕನ್ನಡಿಯ ಕೆಳಭಾಗದಲ್ಲಿ ರವಿಶಾಸ್ತ್ರಿ ಅವರ ಸಹಿಯನ್ನು ಪ್ರಿಂಟ್ ಮಾಡಿ ಸೇರಿಸಲಾಗಿದೆ.

 

Latest Videos
Follow Us:
Download App:
  • android
  • ios