ಗೌತಮ್ ಅದಾನಿ ಒಂದು ನಿರ್ಧಾರ ಇದೀಗ ಹಲವು ಉದ್ಯಮಿಗಳಿಗೆ ನಡುಕ ತಂದಿದೆ. ಕಾರಣ ಫುಡ್ ಹಾಗೂ ಎಂಎಂಸಿಜಿ ಉದ್ಯಮದಲ್ಲಿ ಪಳಗಿರುವ 3 ಕಂಪನಿಗಳನ್ನು ಗೌತಮ್ ಅದಾನಿ ಬರೋಬ್ಬರಿ 8,388 ಕೋಟಿ ರೂಪಾಯಿಗೆ ಖರೀದಿಗೆ ಸಜ್ಜಾಗಿದ್ದಾರೆ.
ನವದೆಹಲಿ(ಸೆ.02) ಉದ್ಯಮಿ ಗೌತಮ್ ಅದಾನಿ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಹಿಂಡನ್‌ಬರ್ಗ್ ವರದಿಯಿಂದ ಅಲ್ಲೋಲ ಕಲ್ಲೋಲವಾಗಿದ್ದ ಅದಾನಿ ಉದ್ಯಮ ಜಗತ್ತಿ ಇದೀಗ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದೆ. ಇದರ ಬೆನ್ನಲ್ಲೇ ಅದಾನಿ ಇದೀಗ ಫುಡ್ ಹಾಗೂ ಎಂಎಂಸಿಜಿ ಉದ್ಯಮಕ್ಕೆ ಕಾಲಿಡುತ್ತಿದ್ದಾರೆ. ಹಾಗಂತ ಹೊಸದಾಗಿ ಉದ್ಯಮ ಆರಂಭಿಸುತ್ತಿಲ್ಲ. ಬದಲಾಗಿದೆ ಮಾರುಕಟ್ಟೆಯಲ್ಲಿ ದಿಗ್ಗಜರಾಗಿ ಮೆರೆಯುತ್ತಿರುವ ಮೂರು ಕಂಪನಿಗಳನ್ನು ಬರೋಬ್ಬರಿ 8,388 ಕೋಟಿ ರೂಪಾಯಿಗೆ ಖರೀದಿಸಲು ಮುಂದಾಗಿದ್ದಾರೆ.
ಆಹಾರ ಉತ್ಪನ್ನಗಳ ಮಾರುಕಟ್ಟೆ ವಿಸ್ತಾರವಾಗಿದೆ. ಇದರ ಬೆನ್ನಲ್ಲೇ ಹಲವು ದಿಗ್ಗಜ ಕಂಪನಿಗಳು ರೆಡಿ ಟು ಈಟ್ ಆಹಾರಗಳನ್ನು ನೀಡುತ್ತದೆ. ಜೊತೆಗೆ ಹಲವು ಆಹಾರ ಉತ್ಪನ್ನಗಳು, ಮಸಾಲೆ, ಪದಾರ್ಥಗಳನ್ನು ನೀಡುತ್ತಿದೆ. ಇದೀಗ ಅದಾನಿ ಕಂಪನಿ ಈ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಅದಾನಿ ವಿಲ್ಮಾರ್ ಗ್ರೂಪ್ ಇದೀಗ 8,388 ಕೋಟಿ ರೂಪಾಯಿಗೆ ಮೂರು ಕಂಪನಿಗಳ ಖರೀದಿಸಿ ಉದ್ಯಮ ಸಾಮ್ರಾಜ್ಯ ವಿಸ್ತರಿಸಲು ಭಾರಿ ತಯಾರಿ ನಡೆಸಿದೆ. ಬಹುತೇಕ ಮಾತುಕತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅಧಿಕೃತ ಮಾಹಿತಿಗಳು ಹೊರಬೀಳಲಿದೆ ಎಂದು ಕೆಲ ವರದಿಗಳು ಸೂಚಿಸುತ್ತಿದೆ.
undefined
ಅತ್ಯಂತ ಶ್ರೀಮಂತ ವ್ಯಕ್ತಿ ಯಾರು? ಮುಕೇಶ್ ಅಂಬಾನಿ, ಅದಾನಿ, ರತನ್ ಟಾಟಾ ಅಲ್ಲ!
ಅದಾನಿ ವಿಲ್ಮಾರ್ ಗ್ರೂಪ್ ಎರಡು ಉದ್ಯಮ ಗ್ರೂಪ್‌ಗಳ ಜಂಟಿ ಸಂಸ್ಥೆ. ಅದಾನಿ ಗ್ರೂಪ್ ಹಾಗೂ ಸಿಂಗಾಪೂರ್‌ನ ವಿಲ್ಮಾರ್ ಗ್ರೂಪ್ ಜಂಟಿಯಾಗಿ ನಡೆಸುತ್ತಿರುವ ಉದ್ಯಮ ಸಾಮ್ರಾಜ್ಯವೇ ಅದಾನಿ ವಿಲ್ಮಾರ್ ಗ್ರೂಪ್. ಆಯಿಲ್ , ಕೊಹಿನೂರ್ ಅಕ್ಕಿ ಸೇರಿದಂತೆ ಹಲವು ಉತ್ಪನ್ನಗಳನ್ನು ಈ ಗ್ರೂಪ್ ಸಂಸ್ಥೆ ಮುನ್ನಡೆಸುತ್ತಿದೆ. ಉತ್ಪನ್ನಗಳ ಉದ್ಯಮ ಸಾಮ್ರಾಜ್ಯದಲ್ಲಿ ದೈತ್ಯನಾಗಿರುವ ಗ್ರೂಪ್ ಕಂಪನಿ ಇದೀಗ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ.
ಅದಾನಿ ವಿಲ್ಮಾರ್ ಗ್ರೂಪ್ ಸದ್ಯ 3 ಕಂಪನಿಗಳ ಖರೀದಿಗೆ ಮುಂದಾಗಿದೆ. ಆದರ ಮುಂದಿನ ಕೆಲ ವರ್ಷದಲ್ಲಿ ತನ್ನ ಪ್ರತಿಸ್ಪರ್ಧಿಗಳ ಕಂಪನಿಗಳನ್ನು ಖರೀದಿಸಿ ಏಷ್ಯಾದಲ್ಲಿ ಅತೀದೊಡ್ಡ ಕಂಪನಿಯಾಗಿ ಹೊರಹೊಮ್ಮಲು ತಯಾರಿ ಮಾಡಿಕೊಂಡಿದೆ. ಸದ್ಯ ಈ ವರ್ಷ 3 ಕಂಪನಿಗಳನ್ನು ಅದಾನಿ ವಿಲ್ಮಾರ್ ಗ್ರೂಪ್ ಖರೀದಿಗೆ ಮುಂದಾಗಿದೆ. ಈ ಮೂರ ಕಂಪನಿಗಳಲ್ಲಿ ಏರ್‌ಪೋರ್ಟ್ ಉದ್ಯಮ, ಕಮೋಡಿಟಿ ಕೂಡ ಸೇರಿಕೊಂಡಿದೆ.
ಹಿಂಡನ್‌ಬರ್ಗ್ ವರದಿಯಿಂದ ಅದಾನಿ ಕಂಪನಿಗಳ ಮೇಲೆ ಭಾರಿ ತೂಗುಗತ್ತಿ ಎದುರಾಗಿತ್ತು. ಆದರೆ ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ತಣ್ಣಗಾಗಿದ್ದರೂ ಇತ್ತೀಚೆಗೆ ಮತ್ತೆ ಹಿಂಡನ್‌ಬರ್ಗ್ ವರದಿ ಕೋಲಾಹಲ ಸೃಷ್ಟಿಸಿದೆ. ಪ್ರತಿಪಕ್ಷಗಳು ಹಿಂಡನ್‌ಬರ್ಗ್ ವರದಿ ಹಿಡಿದು ಅದಾನಿ ಸಾಮ್ರಾಜ್ಯದ ಜೊತೆಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದೆ.
ಜಿಂದಾಲ್, ಅಂಬಾನಿ ಸೋಲಿಸಿ ಅದಾನಿ ಗೆಲುವು, 4100 ಕೋಟಿಗೆ ಈ ಕಂಪನಿ ಖರೀದಿ