ಪ್ರತಿದಿನ 1600 ಕೋಟಿ ಸಂಪದಾನೆಯ ಗುಟ್ಟು ಬಿಟ್ಟು ಕೊಟ್ಟ ಗೌತಮ್ ಅದಾನಿ

Published : Feb 12, 2025, 01:10 PM ISTUpdated : Feb 13, 2025, 04:40 PM IST
ಪ್ರತಿದಿನ 1600 ಕೋಟಿ ಸಂಪದಾನೆಯ ಗುಟ್ಟು ಬಿಟ್ಟು ಕೊಟ್ಟ ಗೌತಮ್ ಅದಾನಿ

ಸಾರಾಂಶ

Businessman Gautam Adani: ಕೋಟ್ಯಧಿಪತಿ ಗೌತಮ್ ಅದಾನಿ ತಮ್ಮ ದೈನಂದಿನ 1600 ಕೋಟಿ ರೂಪಾಯಿ ಸಂಪಾದನೆಯ ಗುಟ್ಟನ್ನು ಬಹಿರಂಗಪಡಿಸಿದ್ದಾರೆ. 10ನೇ ತರಗತಿಯ ನಂತರ ಶಿಕ್ಷಣವನ್ನು ಮೊಟಕುಗೊಳಿಸಿ ಮುಂಬೈಗೆ ಬಂದಿದ್ದರು.

ಪ್ರತಿದಿನ 1600 ಕೋಟಿ ಸಂಪದಾನೆಯ ಗುಟ್ಟು ಬಿಟ್ಟು ಕೊಟ್ಟ ಗೌತಮ್ ಅದಾನಿ

ನವದೆಹಲಿ: ಕೋಟ್ಯಧಿಪತಿ ಉದ್ಯಮಿ ಗೌತಮ್ ಅದಾನಿ ಪ್ರಪಂಚದ ಟಾಪ್ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯೇನರ್ಸ್ ಇಂಡೆಕ್ಸ್ ವರದಿ ಪ್ರಕಾರ, ಅದಾನಿ ಗ್ರೂಪ್ ಚೇರ್‌ಮ್ಯಾನ್ ಆಗಿರುವ ಗೌತಮ್ ಅದಾನಿ ಬಳಿ 69.6 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದು, ವಿಶ್ವದ 15ನೇ ಮತ್ತು ಭಾರತದ  2ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ದಿನಕ್ಕೆ ಸಾವಿರಾರು ಕೋಟಿ ಹಣವನ್ನು ಗೌತಮ್ ಅದಾನಿ ಹೇಗೆ ಸಂಪಾದನೆ ಮಾಡ್ತಾರೆ ಎಂಬ ವಿಷಯ ನಿಮಗೆ ಗೊತ್ತಿದೆಯಾ? ಈ ಕುರಿತು ಸ್ವತಃ ಗೌತಮ್ ಅದಾನಿ ಅವರೇ ಮಾತನಾಡಿದ್ದಾರೆ. ಹೇಗೆ  ತಾವು ಪ್ರತಿದಿನ 1600  ಕೋಟಿ ರೂಪಾಯಿ ಸಂಪಾದಿಸುತ್ತಾರೆ ಎಂಬ ಗುಟ್ಟನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಎರಡು ವರ್ಷಗಳ ಹಿಂದಿನ ಸಂದರ್ಶನದ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಟಿವಿ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಗೌತಮ್ ಅದಾನಿ ಮಾತನಾಡಿದ್ದಾರೆ. ತಮ್ಮ ಯಶಸ್ಸಿನ ಸೀಕ್ರೆಟ್, ಹೇಗೆ ಪ್ರತಿದಿನ 1,600 ಕೋಟಿ ರೂಪಾಯಿ ಸಂಪದಾನೆ ಮಾಡಲಾಗುತ್ತೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಗೌತಮ್ ಅದಾನಿ ಉತ್ತರಿಸಿದ್ದರು.15ನೇ ವಯಸ್ಸಿನಲ್ಲಿ ಶಿಕ್ಷಣ ಮೊಟಕುಗೊಳಿಸಿ ಮುಂಬೈಗೆ ಬರಬೇಕಾಯ್ತು. ಕೆಲವು ಕಾರಣಗಳಿಂದ ಉನ್ನತ ಶಿಕ್ಷಣ ಪಡೆಯಲು ಆಗಲಿಲ್ಲ. ಇದಾದ 4 ವರ್ಷದ ನಂತರ ನಾನು ಮುಂಬೈನಿಂದ ಅಹಮದಾಬಾದ್‌ಗೆ ತೆರಳಿದೆ. ಮುಂಬೈನಲ್ಲಿ ಕಲಿಯಲು ತುಂಬಾ ಸಿಕ್ತು. ಹಾರ್ಡ್ ವರ್ಕ್ ಹೇಗೆ ಮಾಡಬೇಕು ಎಂಬುದನ್ನು ಮುಂಬೈನಲ್ಲಿದ್ದಾಗಲೇ ಕಲಿತಿದ್ದೇನೆ ಎಂದು ಗೌತಮ್ ಅದಾನಿ ಹೇಳಿದ್ದಾರೆ. 

ನಿರೂಪಕ ನಿಮ್ಮ ದಿನದ ಆದಾಯ 1600 ಕೋಟಿ, ಗಂಟೆಗೆ 67 ಕೋಟಿ ರೂಪಾಯಿ ಆಗುತ್ತದೆ. ಈ ರೀತಿ ಹಣ ಸಂಪಾದನೆ ಮಾಡೋದನ್ನು ಕಲಿತಿದ್ದು ಬಾಲ್ಯ ಅಥವಾ ಯೌವನದಲ್ಲಿದ್ದಾಗ ಎಂದು ಕೇಳುತ್ತಾರೆ. ಇದಕ್ಕೆ ಮುಗಳ್ನಕ್ಕ ಗೌತಮ್ ಅದಾನಿ, ಕಾರಣಾಂತರಗಳಿಂದ 10ನೇ ತರಗತಿವಗರೆ ಓದಿ, ಶಿಕ್ಷಣ ಮೊಟಕುಗೊಳಿಸಿ ಅಹಮದಾಬಾದ್‌ನಿಂದ ಮುಂಬೈಗೆ ಬಂದೆ. ಮುಂಬೈನಲ್ಲಿನ ನಾಲ್ಕು ವರ್ಷದ ಜೀವನದಲ್ಲಿ ಕಠಿಣ ಪರಿಶ್ರಮದಿಂದ ಹೇಗೆ ಕೆಲಸ ಮಾಡಬೇಕೆಂದು ಕಲಿತುಕೊಂಡೆ. ನಾನು ಸಂಖ್ಯೆಗಳ ಹಿಂದೆ ಎಂದೂ ಹೋಗಿಲ್ಲ ಎಂದು ಹೇಳುವ ಮೂಲಕ ತಮ್ಮ ಸಾಧನೆಗೆ ಹಾರ್ಡ್‌ ವರ್ಕ್ ಕಾರಣ ಎಂಬುದನ್ನು ತಿಳಿಸಿದರು.

ಇದನ್ನೂ ಓದಿ: ಸರಳವಾಗಿ ಆಪ್ತರ ಸಮ್ಮುಖದಲ್ಲಿ ಜೀತ್ ಅದಾನಿ ಮದುವೆ, ಕ್ಷಮೆ ಕೇಳಿದ ತಂದೆ ಗೌತಮ್ ಅದಾನಿ

ಅದಾನಿ ಕಂಪನಿಗೆ ರಿಲೀಫ್‌
ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ಅಮೆರಿಕದಲ್ಲಿ ತನಿಖೆ ಎದುರಿಸುತ್ತಿರುವ ಅದಾನಿ ಗ್ರೂಪ್‌ ಸಂಸ್ಥೆಗೆ ನೆಮ್ಮದಿ ನೀಡುವ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ವಿದೇಶಿ ನೆಲದಲ್ಲಿನ ಭ್ರಷ್ಟಾಚಾರದ ತನಿಖೆಗೆ ಅವಕಾಶ ಮಾಡಿಕೊಡುವ ಐದು ದಶಕಗಳಷ್ಟು ಹಳೆಯ ಕಾನೂನಿಗೆ ತಡೆ ನೀಡುವ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ. ಇದೇ ಕಾನೂನಿನಡಿ ಅದಾನಿ ಕಂಪನಿ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಕಳೆದ ವರ್ಷ ದೋಷಾರೋಪಣೆ ಸಲ್ಲಿಸಲಾಗಿತ್ತು.

ಅಮೆರಿಕದ 1977ರ ಫಾರಿನ್‌ ಕರಪ್ಟ್‌ ಪ್ರ್ಯಾಕ್ಟೀಸಸ್‌ ಕಾಯ್ದೆ (ಎಫ್‌ಸಿಪಿಎ)ಯು ಗುತ್ತಿಗೆ ಪಡೆಯುವ ಸಲುವಾಗಿ ಅಮೆರಿಕದ ಕಂಪನಿಗಳು, ವ್ಯಕ್ತಿಗಳು ಮತ್ತು ವಿದೇಶಿ ಕಂಪನಿಗಳು ಹೊರದೇಶದ ಸಂಸ್ಥೆಗಳಿಗೆ ಲಂಚ ನೀಡುವುದನ್ನು ನಿರ್ಬಂಧಿಸುತ್ತದೆ. ಅಮೆರಿಕದ ಸಂಸ್ಥೆ ಜತೆಗೆ ಯಾವುದೇ ಸಂಬಂಧ ಹೊಂದಿರುವ ವಿದೇಶಿ ಸಂಸ್ಥೆಗಳ ವಿರುದ್ಧವೂ ಭ್ರಷ್ಟಾಚಾರದ ಆರೋಪ ಕೇಳಿಬಂದರೆ ತನಿಖೆಗೆ ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಇದೇ ಕಾಯ್ದೆಯನ್ನು ಇದೀಗ ಟ್ರಂಪ್‌ ತಡೆಹಿಡಿದ್ದಾರೆ.

ಇದನ್ನೂ ಓದಿ: ಅದಾನಿ ಮಗನ ಸರಳ ವಿವಾಹ ಜತೆ ಬೃಹತ್‌ ದೇಣಿಗೆ vs ಅಂಬಾನಿ ಮಗನ ಮದುವೆ ಖರ್ಚು ಲೆಕ್ಕ ಹಾಕಿದ ನೆಟ್ಟಿಗರು

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!