ರಾಜ್ಯ ಜಾಗತಿಕ ಕೇಂದ್ರವಾಗಿಸುವ ಗುರಿ: ಡಿ.ಕೆ. ಶಿವಕುಮಾರ್‌

Published : Feb 12, 2025, 12:18 PM ISTUpdated : Feb 12, 2025, 12:43 PM IST
ರಾಜ್ಯ ಜಾಗತಿಕ ಕೇಂದ್ರವಾಗಿಸುವ ಗುರಿ: ಡಿ.ಕೆ. ಶಿವಕುಮಾರ್‌

ಸಾರಾಂಶ

ಕರ್ನಾಟಕ ಅತ್ಯುತ್ತಮ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ, ಮಾನವಸಂಪನ್ಮೂಲವನ್ನು ಹೊಂದಿದೆ. ಅವೆಲ್ಲವೂ ಜಾಗತಿಕ ಕೇಂದ್ರವಾಗಲು ಪೂರಕವಾಗಿದ್ದು, ಎಲ್ಲರೂ ಅದಕ್ಕೆ ಕೈ ಜೋಡಿಸಬೇಕು ಎಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌  

ಬೆಂಗಳೂರು(ಫೆ.12):  ಮಾಹಿತಿ ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಬೆಂಗಳೂರು ಈಗಾಗಲೇ ಹಲವು ವಿಚಾರಗಳಲ್ಲಿ ಜಾಗತಿಕ ಕೇಂದ್ರವಾಗಿ ರೂಪುಗೊಂಡಿದೆ. ಅದರ ಜತೆಗೆ ಇದೀಗ ಇಡೀ ಕರ್ನಾ ಟಕವನ್ನು ಜಾಗತಿಕ ಕೇಂದ್ರವನ್ನಾಗಿಸಬೇಕಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬೆಂಗಳೂರು ಅರಮನೆಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳವಾರ ಮಾತನಾಡಿದ ಅವರು, ಕರ್ನಾಟಕ ಅತ್ಯುತ್ತಮ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ, ಮಾನವಸಂಪನ್ಮೂಲವನ್ನು ಹೊಂದಿದೆ. ಅವೆಲ್ಲವೂ ಜಾಗತಿಕ ಕೇಂದ್ರವಾಗಲು ಪೂರಕವಾಗಿದ್ದು, ಎಲ್ಲರೂ ಅದಕ್ಕೆ ಕೈ ಜೋಡಿಸಬೇಕು ಎಂದರು. 

Invest Karnataka 2025: ಕರ್ನಾಟಕದಲ್ಲಿ 12 ವಿಶೇಷ ಹೂಡಿಕೆ ವಲಯ, ಸಚಿವ ಎಂ.ಬಿ.ಪಾಟೀಲ್

ಬೆಂಗಳೂರಿನಲ್ಲಿ ಸದ್ಯ 1.40 ಕೋಟಿ ಜನಸಂಖ್ಯೆಯಿದ್ದು, 1 ಕೋಟಿಗೂ ಹೆಚ್ಚಿನ ವಾಹನಗಳಿವೆ. ಇಲ್ಲಿನ ಒತ್ತಡ ಹೆಚ್ಚುತ್ತಿದ್ದು, ರಾಜ್ಯದ 2 ಮತ್ತು 3ನೇ ಹಂತದ ನಗರಗಳತ್ತ ಹೂಡಿಕೆಗೆ ಗಮನಕೊಡಬೇಕಿದೆ. ಹೂಡಿಕೆದಾರರು ರಾಜ್ಯದ ಇತರ ಭಾಗಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿದ ಪೂರಕ ವಾತಾವರಣ ಅರಿಯಬೇಕು. ಎಲ್ಲರೂ ಭವಿಷ್ಯದ ಕರ್ನಾಟಕ ನಿರ್ಮಿಸಲು ಒಂದಾಗಬೇಕು. ಕರ್ನಾಟಕವನ್ನು ಹೂಡಿಕೆ ಸ್ನೇಹಿಯನ್ನಾಗಿಸುವುದು ನಮ್ಮ ಗುರಿಯಾಗಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡಲಾಗುತ್ತಿದೆ. ಮೂಲಸೌಕರ್ಯ ವಿಚಾರದಲ್ಲಿ ಕರ್ನಾಟಕವೂ ಮುಂಚೂಣಿಯಲ್ಲಿದೆ. ಅದರಲ್ಲೂ ಬೆಂಗಳೂರಿನಲ್ಲಿ ಟನಲ್ ರಸ್ತೆ, ಡಬ್ಬಲ್ ಡೆಕ್ಕರ್ ಮೆಟ್ರೋ, ಎಲಿವೇಟೆಡ್ ಕಾರಿಡಾರ್, ಸೈಡೆಕ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.

'ಕರ್ನಾಟಕ ನಂ.1 ರಾಜ್ಯವಾಗಿಸುವ ಗುರಿ'

ಭಾರತವು ವಿಶ್ವದ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿ ಶೀಘ್ರದಲ್ಲಿ 3ನೇ ಸ್ಥಾನಕ್ಕೆ ತಲುಪಲಿದೆ. ಅದೇ ರೀತಿ ಕರ್ನಾಟಕ ವನ್ನೂ ಆರ್ಥಿಕ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸದೃಢವಾಗುವಂತೆ ಮಾಡಲು ಕೇಂದ್ರ ಸರ್ಕಾರ ಎಲ್ಲ ನೆರವು ನೀಡಲಿದೆ. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕರ್ನಾಟಕ ಸರ್ಕಾರದ ಜತೆಗೆ ಸದಾ ಇರುತ್ತೇನೆ. ಕರ್ನಾಟಕವನ್ನು ದೇಶಕ್ಕೇ ಮಾದರಿ ರಾಜ್ಯವಾಗಿಸಲು ಹಾಗೂ ದೇಶದ ನಂ. 1 ರಾಜ್ಯವನ್ನಾಗಿಸಲು ಸರ್ಕಾರಕ್ಕೆ ನೆರವಾಗುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!