ಕಚ್ಚಾತೈಲ ದರ 140 ಡಾಲರ್‌ನಿಂದ 99.84 ಡಾಲರ್‌ಗೆ ಭಾರೀ ಇಳಿಕೆ!

By Kannadaprabha News  |  First Published Mar 16, 2022, 8:28 AM IST

*ಕೇವಲ ಒಂದೇ ವಾರದಲ್ಲಿ 40 ಡಾಲರ್‌ನಷ್ಟುಕುಸಿತ
*ದೇಶದಲ್ಲಿ ಪೆಟ್ರೋಲ್‌ ದರ ಭಾರೀ ಹೆಚ್ಚಳ ಆತಂಕ ದೂರ?


ನವದೆಹಲಿ  (ಮಾ. 16): ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಭಾರೀ ಏರಿಕೆ ಕಂಡಿದ್ದ ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ದರ ಮಂಗಳವಾರ 99.84 ಡಾಲರ್‌ಗೆ ಇಳಿಕೆಯಾಗಿದೆ. 8 ದಿನದಲ್ಲಿ 40 ಡಾಲರ್‌ನಷ್ಟುಇಳಿದಿದ್ದು ಗಮನಾರ್ಹ. ಇದರಿಂದಾಗಿ, ಕಚ್ಚಾ ವಸ್ತುಗಳ ಬೆಲೆ ಏರಿಕೆ ನಡುವೆಯೂ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ತೈಲ ಕಂಪನಿಗಳಿಗೆ ಇದು ಕೊಂಚ ಸಮಾಧಾನ ನೀಡಿದೆ. ಅಲ್ಲದೆ, ಈಗಾಗಲೇ 100 ರು. ದಾಟಿದ್ದ ಪೆಟ್ರೋಲ್‌ ದರ ಭಾರೀ ಏರಿಕೆ ಆಗಬಹುದು ಎಂಬ ಜನರ ಆತಂಕ ದೂರವಾಗಬಹುದು ಎಂದು ಭಾವಿಸಲಾಗಿದೆ.

ಯುದ್ಧ ಆರಂಭವಾದ 4 ದಿನದ ನಂತರ ಫೆ.28ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 100 ಡಾಲರ್‌ ಗಿಂತ ಹೆಚ್ಚಾಗಿತ್ತು. ಮಾ.7ರಂದು ಮತ್ತೆ 139 ಡಾಲರ್‌ಗೆ ತಲುಪುವ ಮೂಲಕ 14 ವರ್ಷಗಳ ಗರಿಷ್ಠಕ್ಕೆ ಏರಿಕೆಯಾಗಿತ್ತು. ಆದರೆ ಮಂಗಳವಾರ ಏಕಾಏಕಿ ಶೇ.7ರಷ್ಟುದರ ತಗ್ಗಿದೆ. ಭಾರತದಲ್ಲಿ ಕಳೆದ 131 ದಿನಗಳಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಸ್ಥಿರವಾಗಿದೆ.

Tap to resize

Latest Videos

ಇದನ್ನೂ ಓದಿ: Vision of Karnataka: 2025ಕ್ಕೆ ಕರ್ನಟಕದ ಆರ್ಥಿಕತೆ 75 ಲಕ್ಷ ಕೋಟಿ: ಸಿಎಂ ಬೊಮ್ಮಾಯಿ

ದೆಹಲಿ-ಜೈಪುರ ಎಲೆಕ್ಟ್ರಿಕ್‌ ಹೆದ್ದಾರಿ ನನ್ನ ಕನಸು :ಗಡ್ಕರಿ: ದೆಹಲಿ ಮತ್ತು ಜೈಪುರದಲ್ಲಿ ಭಾರತದ ಮೊಟ್ಟಮೊದಲ ಎಲೆಕ್ಟ್ರಿಕ್‌ ಹೆದ್ದಾರಿ ನಿರ್ಮಾಣ ಮಾಡುವುದು ನನ್ನ ಕನಸು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಂಗಳವಾರ ಹೇಳಿದ್ದಾರೆ.

ವಿದ್ಯುತ್‌ ಹೆದ್ದಾರಿ ಎಂದರೆ ವಿದ್ಯುತ್‌ ಚಾಲಿತ ವಾಹನಗಳು ಸಂಚರಿಸುತ್ತಲೇ ಚಾಜ್‌ರ್‍ ಆಗುವ ವ್ಯವಸ್ಥೆ ಇರುವ ರಸ್ತೆ. ಅಂಥ ಚಾರ್ಜಿಂಗ್‌ ಸಾಧನಗಳನ್ನು ರಸ್ತೆಯಲ್ಲೇ ಅಳವಡಿಸಿರಲಾಗುತ್ತದೆ. ಸ್ವೀಡನ್‌ನಲ್ಲಿ ಇಂಥ ರಸ್ತೆಗಳು ಈಗಾಗಲೇ ಇವೆ. ಅದನ್ನೇ ಮಾದರಿಯಾಗಿ ಇರಿಸಿಕೊಂಡು ಅಲ್ಲಿನ ಕಂಪನಿಗಳಿಂದ ಸಲಹೆ ಪಡೆದುಕೊಂಡು ಇಂಥ ರಸ್ತೆಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ಕಳೆದ ವರ್ಷ ಗಡ್ಕರಿ ಹೇಳಿದ್ದರು. ಮಂಗಳವಾರವೂ ತಮ್ಮ ಮಾತನ್ನು ಅವರು ಪುನರುಚ್ಚರಿಸಿದ್ದಾರೆ.

ಈ ನಡುವೆ, ‘ಸಚಿವಾಲಯದ ಬಜೆಟ್‌ ಉತ್ತಮವಾಗಿದೆ. ಮಾರುಕಟ್ಟೆಸಹ ಅದಕ್ಕೆ ಪೂರಕವಾಗಿದೆ’ ಎಂದೂ ಅವರು ಹೇಳಿದರು. ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ 1.99 ಲಕ್ಷ ಕೋಟಿ ರು. ಅನುದಾನ ಮೀಸಲಿಡಲಾಗಿದೆ.

click me!