CPI Inflation: 8 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಚಿಲ್ಲರೆ ಹಣದುಬ್ಬರ; ಜನಸಾಮಾನ್ಯರ ಜೇಬಿಗೆ ಹೆಚ್ಚಿದ ಹೊರೆ!

By Suvarna News  |  First Published Mar 15, 2022, 10:47 PM IST

*ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಫೆಬ್ರವರಿಯಲ್ಲಿ ಶೇ.6.07ರಷ್ಟು ದಾಖಲು
*2021ರ ಜೂನ್ ಬಳಿಕ ಎರಡನೇ ಬಾರಿ ಆರ್ ಬಿಐ ಗರಿಷ್ಠ ಮಿತಿ ಮೀರಿದ ಚಿಲ್ಲರೆ ಹಣದುಬ್ಬರ
*ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ.6.01ಕ್ಕೆ ಏರಿಕೆ


ನವದೆಹಲಿ (ಮಾ.15): ಗ್ರಾಹಕರ ದರ ಸೂಚ್ಯಂಕದ (CPI) ಆಧಾರದಲ್ಲಿ ಭಾರತದಲ್ಲಿ (India) ಚಿಲ್ಲರೆ ಹಣದುಬ್ಬರ (retail inflation) ಫೆಬ್ರವರಿಯಲ್ಲಿ ಶೇ.6.07ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಮಾಹಿತಿ ನೀಡಿದೆ. ಇದು ಕಳೆದ 8 ತಿಂಗಳಲ್ಲೇ ಗರಿಷ್ಠ ದರವಾಗಿದೆ.
 2021ರ ಜೂನ್ ಬಳಿಕ ಚಿಲ್ಲರೆ ಹಣದುಬ್ಬರ ಭಾರತೀಯ ರಿಸರ್ವ್ ಬ್ಯಾಂಕಿನ (RBI) ಹಣಕಾಸು ನೀತಿ ಸಮಿತಿಯ (MPC) ಗರಿಷ್ಠ ಮಿತಿಯನ್ನು  ಮೀರಿರೋದು ಇದು ಎರಡನೇ ಸಲ. 2022ರ ಜನವರಿಯಲ್ಲಿ ಚಿಲ್ಲರೆ (Retail) ಹಣದುಬ್ಬರ (Inflation) ಶೇ.6.01ಕ್ಕೆ ಏರಿಕೆಯಾಗಿತ್ತು. 

ಇನ್ನು ನಗರ ಪ್ರದೇಶದ ಹಣದುಬ್ಬರ (Inflation) ಫೆಬ್ರವರಿಯಲ್ಲಿ ಇಳಿಕೆಯಾಗಿದೆ. ಜನವರಿಯಲ್ಲಿ ಶೇ. 5.91 ನಗರ ಹಣದುಬ್ಬರ ಫೆಬ್ರವರಿಯಲ್ಲಿ ಶೇ.5.75ಕ್ಕೆ ಇಳಿಕೆಯಾಗಿದೆ. ಆದ್ರೆ ಗ್ರಾಮೀಣ ಹಣದುಬ್ಬರದಲ್ಲಿ ಏರಿಕೆ ಕಂಡುಬಂದಿದೆ. ಜನವರಿಯಲ್ಲಿ ಗ್ರಾಮೀಣ ಹಣದುಬ್ಬರ ಶೇ. 6.12 ಆಗಿದ್ದು, ಫೆಬ್ರವರಿಯಲ್ಲಿ ಶೇ. 6.38ಕ್ಕೆ ಏರಿಕೆಯಾಗಿದೆ. ಇನ್ನು ಮಾಸಿಕ ಚಿಲ್ಲರೆ ಹಣದುಬ್ಬರ ತಿಂಗಳಿಂದ ತಿಂಗಳಿಗೆ ಶೇ. 0.24 ಏರಿಕೆ ದಾಖಲಿಸಿದೆ. ಹಾಗೆಯೇ ಗ್ರಾಮೀಣ ಹಾಗೂ ನಗರ ಹಣದುಬ್ಬರ ಕ್ರಮವಾಗಿ ಶೇ.0.18 ಹಾಗೂ ಶೇ.30ರಷ್ಟು ಹೆಚ್ಚಳವಾಗಿದೆ.

Tap to resize

Latest Videos

ಕೆಲಸದ ಮಧ್ಯೆ ಯೋಗನಿದ್ರೆ ಮಾಡಿ ರಿಲ್ಯಾಕ್ಸ್ ಆಗ್ತಾರೆ ಸುಂದರ್ ಪಿಚೈ, ನೀವ್ಯಾಕೆ ಟ್ರೈ ಮಾಡ್ಬಾರ್ದು?

ಕೆಲವು ಸಮಯದಿಂದ ನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆಯಲ್ಲಿ ಕೂಡ ಹೆಚ್ಚಳ ಕಂಡುಬಂದಿದೆ. ಮೊಟ್ಟೆ ಹಣದುಬ್ಬರ ಜನವರಿಯಲ್ಲಿ ಶೇ.2.23ರಷ್ಟಿದ್ದು, ಫೆಬ್ರವರಿಯಲ್ಲಿ ಶೇ.4.15ಕ್ಕೆ ಏರಿಕೆಯಾಗಿದೆ. ಅಡುಗೆ ಎಣ್ಣೆ (Cooking oil) ಹಣದುಬ್ಬರದಲ್ಲಿ ಕೂಡ ಇಳಿಕೆ ಕಂಡುಬಂದಿದೆ. ಜನವರಿಯಲ್ಲಿ ಶೇ.18.70ರಷ್ಟಿದ್ದ ಹಣದುಬ್ಬರ ಫೆಬ್ರವರಿಯಲ್ಲಿ ಶೇ.16.44ಕ್ಕೆ ಇಳಿಕೆಯಾಗಿದೆ. ತರಕಾರಿ ಹಣದುಬ್ಬರದಲ್ಲಿ ಕೂಡ ಹೆಚ್ಚಳವಾಗಿದೆ. ಜನವರಿಯಲ್ಲಿ ಶೇ.5.19ರಷ್ಟಿದ್ದ ಹಣದುಬ್ಬರ ಫೆಬ್ರವರಿಯಲ್ಲಿ ಶೇ.6.13ಕ್ಕೆ ಏರಿಕೆಯಾಗಿದೆ. ಜವಳಿ ಹಾಗೂ ಪಾದರಕ್ಷೆ ಹಣದುಬ್ಬರದಲ್ಲಿ ತುಸು ಏರಿಕೆ ಕಂಡುಬಂದಿದೆ. ಜನವರಿಯಲ್ಲಿ ಶೇ.8.84ರಷ್ಟಿದ್ದ ಹಣದುಬ್ಬರ ಫೆಬ್ರವರಿಯಲ್ಲಿ ಶೇ.8.86ಕ್ಕೆ ಹೆಚ್ಚಳವಾಗಿದೆ. ವಿಶೇಷವೆಂದ್ರೆ ಫೆಬ್ರವರಿಯಲ್ಲಿ ಇಂಧನ ಹಾಗೂ ವಿದ್ಯುತ್ ಹಣದುಬ್ಬರದಲ್ಲಿ ಇಳಿಕೆ ಕಂಡುಬಂದಿದೆ. ಜನವರಿಯಲ್ಲಿ ಶೇ. 9.32ರಷ್ಟಿದ್ದ ಹಣದುಬ್ಬರ ಫೆಬ್ರವರಿಯಲ್ಲಿ ಶೇ.8.73ಕ್ಕೆ ಇಳಿಕೆಯಾಗಿದೆ. 

ಸಗಟು ಹಣದುಬ್ಬರ ಸೂಚ್ಯಂಕದ (WPI) ಪ್ರಕಾರ ಫೆಬ್ರವರಿಯಲ್ಲಿ ಸಗಟು ಹಣದುಬ್ಬರ ದರದಲ್ಲಿ ಶೇ.13.11ಕ್ಕೆ ಏರಿಕೆಯಾಗಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ, ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಮುಂತಾದ ಕಾರಣದಿಂದ ಹಣದುಬ್ಬರದಲ್ಲಿ ಹೆಚ್ಚಳ ಕಂಡುಬಂದಿದೆ. ಸತತ 11  ತಿಂಗಳಿಂದ ಸಗಟು ಹಣದುಬ್ಬರ ದರ ಎರಡಂಕಿ ದಾಖಲಿಸುತ್ತ ಬಂದಿದೆ. ಕಳೆದ ತಿಂಗಳು ಸಗಟು ಹಣದುಬ್ಬರ ದರ ಶೇ 12.96ರಷ್ಟಿತ್ತು. ರಷ್ಯಾ (Russia)-ಉಕ್ರೇನ್ (Ukraine) ಯುದ್ಧದ ಪರಿಣಾಮ ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾಗಿದೆ, ಇದು ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಇನ್ನಷ್ಟು ಬೆಲೆಯೇರಿಕೆಗೆ ಕಾರಣವಾಗೋ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. 

ದೇಶದಲ್ಲಿ Cryptocurrency ಪರಿಚಯಿಸುವ ಗುರಿ ಇಲ್ಲ ಎಂದ ಕೇಂದ್ರ ಸರ್ಕಾರ!

ಆರ್ ಬಿಐ ನೀತಿಗಳು ಗ್ರಾಹಕರ ದರ ಸೂಚ್ಯಂಕದ (CPI) ಮೇಲೆ ಹೆಚ್ಚು ಕೇಂದ್ರೀಕೃತವಾಗಿದ್ದು, ಗ್ರಾಹಕರ ದರದಲ್ಲಿ ಏರಿಕೆ ಕಂಡುಬಂದಿರೋ ಕಾರಣ ಸಗಟು ಹಣದುಬ್ಬರ ಸೂಚ್ಯಂಕದಲ್ಲಿ (WPI)  ಹೆಚ್ಚಳವಾಗೋ ಸಾಧ್ಯತೆಯಿದೆ. ರಷ್ಯಾ ಹಾಗೂ ಉಕ್ರೇನ್ ಯುದ್ಧದ ಪರಿಣಾಮ ಈಗಾಗಲೇ ಚಿನ್ನ, ಕಚ್ಚಾ ತೈಲ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಮುಖ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ರಷ್ಯಾ ಹಾಗೂ ಉಕ್ರೇನ್ ನಿಂದ ಪೂರೈಕೆಯಾಗೋ ವಸ್ತುಗಳ ಬೆಲೆಯಲ್ಲಿ ಇನ್ನಷ್ಟು ಹೆಚ್ಚಳ ಕಂಡುಬರೋ ಸಾಧ್ಯತೆಯಿದೆ. ಕೋವಿಡ್ -19 ಕಾರಣದಿಂದ ಸಾಕಷ್ಟು ತ್ತರಿಸಿರೋ ಆರ್ಥಿಕತೆಗೆ ರಷ್ಯಾ-ಉಕ್ರೇನ್ ಯುದ್ಧ ಮತ್ತಷ್ಟು ಹೊಡೆತ ನೀಡಿದೆ. ಇದು ಮೊದಲೇ ಏರಿಕೆ ಹಾದಿಯಲ್ಲಿರೋ ಹಣದುಬ್ಬರವನ್ನು ಇನ್ನಷ್ಟು ಹೆಚ್ಚಿಸೋ ಸಾಧ್ಯತೆಯಿದೆ. 
 

click me!