Vision of Karnataka: 2025ಕ್ಕೆ ಕರ್ನಟಕದ ಆರ್ಥಿಕತೆ 75 ಲಕ್ಷ ಕೋಟಿ: ಸಿಎಂ ಬೊಮ್ಮಾಯಿ

By Girish Goudar  |  First Published Mar 16, 2022, 6:26 AM IST

*  ವ್ಯಾಪಾರ ಹೆಚ್ಚಳ, 2 ಅಂಕಿಗೆ ಜಿಡಿಪಿ, ಆರ್ಥಿಕ ಶಿಸ್ತಿನಿಂದ ಆದಾಯ ಹೆಚ್ಚಳ
*  ರಾಜ್ಯದ ಆದಾಯ ಹೆಚ್ಚಳ: ಬೊಮ್ಮಾಯಿ
*  ಕೃಷಿಕರು ಕೇವಲ ಉತ್ಪಾದಕರು ಮಾತ್ರವಲ್ಲ ಅವರು ಗ್ರಾಹಕರು ಕೂಡ ಹೌದು


ಬೆಂಗಳೂರು(ಮಾ.16):  ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) 2025ರ ಹೊತ್ತಿಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ಗೆ (375 ಲಕ್ಷ ಕೋಟಿ) ಹೆಚ್ಚಿಸುವ ಗುರಿ ಹೊಂದಿದ್ದು, ಇದರಲ್ಲಿ ರಾಜ್ಯದ ಆರ್ಥಿಕತೆಯ ಪಾಲು ಒಂದರಿಂದ ಒಂದೂವರೆ ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ಇರಲಿದೆ (75 ಲಕ್ಷ ಕೋಟಿಯಿಂದ 112 ಲಕ್ಷ ಕೋಟಿ) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

ನಗರದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ‘ವಿಷನ್‌ ಆಫ್‌ ಕರ್ನಾಟಕ -2025’(Vision of Karnataka-2025) ಕುರಿತು ಮಾತನಾಡಿದ ಅವರು, 2025ರ ಹೊತ್ತಿಗೆ ನಮ್ಮ ವ್ಯಾಪಾರ ವಹಿವಾಟು ಹೆಚ್ಚಲಿದೆ. ಜಿಡಿಪಿ(GDP) ಎರಡಂಕಿಗೆ ಏರಲಿದೆ. ಆರ್ಥಿಕ ಶಿಸ್ತು ರೂಪುಗೊಂಡು ಆದಾಯ ಹೆಚ್ಚಿರುವ ಬಜೆಟ್‌(Budget) ಮಂಡನೆ ಆಗಲಿದೆ. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಭಾರಿ ಪ್ರಗತಿ ಕಾಣಲಿದ್ದೇವೆ ಎಂದು ಹೇಳಿದರು.
ಕೃಷಿಯಲ್ಲಿ ಶೇಕಡ 1ರಷ್ಟು ಪ್ರಗತಿ ಆದರೆ ಉತ್ಪಾದನಾ ಕ್ಷೇತ್ರದಲ್ಲಿ ಶೇ.4 ಮತ್ತು ಸೇವಾ ಕ್ಷೇತ್ರದಲ್ಲಿ ಶೇ.10 ರಷ್ಟುಬೆಳವಣಿಗೆ ಆಗುತ್ತದೆ. ಕೃಷಿಕರು ಕೇವಲ ಉತ್ಪಾದಕರು ಮಾತ್ರವಲ್ಲ ಅವರು ಗ್ರಾಹಕರು ಕೂಡ ಹೌದು. ಅವರ ಆದಾಯ ಹೆಚ್ಚಿದರೆ ಅವರ ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಈ ಅಂಶ ಗಮನಲ್ಲಿರಿಸಿಕೊಂಡು ಬಜೆಟ್‌ ಮಂಡಿಸಲಾಗಿದೆ ಎಂದು ಹೇಳಿದರು.

Tap to resize

Latest Videos

Indian Economy Growth: Q3 GDP: ಭಾರತದ್ದು ವಿಶ್ವದಲ್ಲೇ ವೇಗದ ಆರ್ಥಿಕ ಪ್ರಗತಿ!

ರಾಜ್ಯ ಅಭಿವೃದ್ಧಿ ಆಗಬೇಕಾದರೆ ಜನರು ಕ್ರಿಯಾಶೀಲರಾಗಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಹಿಂದೆ ಜಮೀನು ಇದ್ದವರು ಆರ್ಥಿಕತೆಯನ್ನು ಮುನ್ನಡೆಸುತ್ತಿದ್ದರು. ಆದರೆ 21ನೇ ಶತಮಾನದಲ್ಲಿ ದುಡಿಮೆಯೇ ದೊಡ್ಡಪ್ಪ ಎಂದು ಅವರು ಹೇಳಿದರು.

ಕೋವಿಡ್‌-19ರ(Covid-19) ಸಂಕಷ್ಟ ಇದ್ದರೂ ಬಜೆಟ್‌ ಗಾತ್ರ ಹಿಗ್ಗಿದೆ. ಹೊಸ ತೆರಿಗೆ ವಿಧಿಸಿಲ್ಲ. ಜನಪ್ರಿಯ ಯೋಜನೆ ಘೋಷಿಸದೆ ರಾಜ್ಯದ ಆರ್ಥಿಕ ಚೈತನ್ಯ ಹೆಚ್ಚಿಸುವ ಮೂಲ ಸೌಕರ್ಯ, ನೀರಾವರಿ, ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದೇವೆ. ಈ ಮೂಲಕ 2025ಕ್ಕೆ ನವ ಕರ್ನಾಟಕದ(Karnataka) ಮೂಲಕ ನವಭಾರತ ನಿರ್ಮಾಣ ಗುರಿ ಹೊಂದಲಾಗಿದೆ ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷ ಐ.ಎಸ್‌.ಪ್ರಸಾದ್‌ ಮಾತನಾಡಿ, ಟ್ರೇಡ್‌ ಲೈಸನ್ಸ್‌ ವ್ಯವಸ್ಥೆ ರದ್ದು ಮಾಡಬೇಕು. ವಿದ್ಯುತ್‌ ದರ ಕಡಿಮೆ ಮಾಡಬೇಕು. ಪ್ರಸಕ್ತ ಕೈಗಾರಿಕಾ ಘಟಕ ಹೊಂದಿರುವ ಸಂಸ್ಥೆಗಳಿಗೆ ಹೆಚ್ಚುವರಿ ವಿದ್ಯುತ್‌ ಪಡೆಯಲು ಸ್ವಾಧೀನ ಪ್ರಮಾಣ ಪತ್ರದಿಂದ ವಿನಾಯಿತಿ ನೀಡಬೇಕು. ಆಸ್ತಿ ತೆರಿಗೆಯನ್ನು ಪರಿಷ್ಕರಿಸಬೇಕು. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕು. ಆಧುನಿಕ ಕ್ಷೇತ್ರಗಳಲ್ಲಿ ಕೌಶಲ ಅಭಿವೃದ್ಧಿಗೆ ಜಾಗತಿಕ ಮಟ್ಟದ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಬೇಕು. ಇದಕ್ಕಾಗಿ .20 ಕೋಟಿ ನೀಡಬೇಕು. ಯುವ ಉದ್ದಿಮೆದಾರರ ಸಮಾವೇಶಕ್ಕೆ ನೆರವು ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಕೆ.ಸುಧಾಕರ್‌, ಭೈರತಿ ಬಸವರಾಜು ಹಾಗೂ ಎಫ್‌ಕೆಸಿಸಿಐ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Russia Ukraine Crisis: ಯುದ್ಧದಿಂದ ಗ್ಲೋಬಲ್‌ ಎಕಾನಾಮಿ ತಲ್ಲಣ: ಭಾರತದ ಆರ್ಥಿಕತೆಗೂ ಭಾರೀ ಹೊಡೆತ!

ಭಾರತದ ಆರ್ಥಿಕತೆ ಮೇಲೆ ಉಕ್ರೇನ್‌ ಪರಿಣಾಮ: ಕೇಂದ್ರ ಸಚಿವೆ ನಿರ್ಮಲಾ

ಬೆಂಗಳೂರು: ಕೋವಿಡ್‌(Covid-19) ಸೋಂಕಿನಂತಹ ತುರ್ತು ಪರಿಸ್ಥಿತಿ ನಡುವೆಯೂ ದೇಶದ ಅರ್ಥ ವ್ಯವಸ್ಥೆ ಸದೃಢವಾಗಿ ನಿಲ್ಲಲು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಆತ್ಮನಿರ್ಭರ ತತ್ವದಡಿ ಕೈಗೊಂಡ ಕ್ರಮಗಳೇ ಪ್ರಮುಖ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಪ್ರತಿಪಾದಿಸಿದ್ದಾರೆ. ಆದರೆ, ಪ್ರಸಕ್ತ ನಡೆಯುತ್ತಿರುವ ಉಕ್ರೇನ್‌-ರಷ್ಯಾ ಯುದ್ಧದಿಂದ(Russia-Ukraine War) ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದೂ ಅವರು ಹೇಳಿದ್ದರು.

ರಾಜ್ಯ ಬಿಜೆಪಿಯಿಂದ(BJP) ಮಾ.08 ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಆತ್ಮನಿರ್ಭರ ಅರ್ಥ ವ್ಯವಸ್ಥೆ ಭಾರತ’ ವಿಷಯ ಕುರಿತ ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರಧಾನಿ ಮೋದಿ ಅವರು ಪ್ರತಿ ವಿಚಾರದಲ್ಲೂ ಬದ್ಧತೆ ಹೊಂದಿದ್ದಾರೆ. ಯಾವುದೇ ಯೋಜನೆ ಘೋಷಣೆಗೆ ಮಾತ್ರ ಸೀಮಿತಗೊಳಿಸದೆ ಅನುಷ್ಠಾನಗೊಳಿಸಿದ್ದಾರೆ. ಮೋದಿ ಅವರ ನಾಯಕತ್ವದಲ್ಲಿ ದೇಶ(India) ಅಭಿವೃದ್ಧಿ ಪಥದಲ್ಲಿ ಮುನ್ನುಗುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ಬಂದಿದೆ. ಭ್ರಷ್ಟಾಚಾರಕ್ಕೆ(Corruption) ಕಡಿವಾಣ ಬಿದ್ದಿದೆ. ಸಮಾಜದ ಕಟ್ಟಡ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುತ್ತಿವೆ. ಅಡುಗೆ ಅನಿಲ, ಮನೆ ಮನೆಗೂ ಶುದ್ಧ ಕುಡಿಯುವ ನೀರು, ವಿದ್ಯುತ್‌ ಸಂಪರ್ಕ ಕಲ್ಪಿಸುವಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಸಾಧ್ಯವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಯಾರೊಬ್ಬರೂ ಮೋದಿ ಅವರ ಬದ್ಧತೆ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ’ ಎಂದರು.
 

click me!