ಬೆಲೆ ಏರಿಕೆಯಿಂದ ಆತಂಕಗೊಂಡಿರುವ ಜನರಿಗೆ ಪ್ರತಿ ದಿನ ಪೆಟ್ರೋಲ್ ಡೀಸೆಲ್ ಬೆಲೆ ಮತ್ತಷ್ಟು ಭೀತಿ ಹುಟ್ಟಿಸುತ್ತಿದೆ. ಇಂದು ಬೆಂಗಳೂರು ಹಾಗೂ ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿದೆ.
ಬೆಂಗಳೂರು(ಜೂ.27) ಒಂದೆಡೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ, ಮತ್ತೊಂದಡೆ ತರಕಾರಿಗಳ ಬೆಲೆ ಗಗನಕ್ಕೇರಿದೆ. ಇದರ ನಡುವೆ ಇಂಧನ ದರವೂ ಹಲವು ಬದಲಾವಣೆ ಕಂಡಿದೆ. ಬೆಂಗಳೂರಿನಲ್ಲಿಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ 88.94 ದರ ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ಆಧರಿಸಿ ಆಯಿಲ್ ಮಾರ್ಕೆಟಿಂಗ್ ಕಂಪನಿ ಪ್ರತಿ ದಿನ ಇಂಧನ ಪರಿಷ್ಕರಿಸುತ್ತದೆ.
ದೆಹಲಿಯಲ್ಲಿಂದು ಪೆಟ್ರೋಲ್ 94.72 ದರ ರೂಪಾಯಿ, ಡೀಸೆಲ್ 87.62 ರೂಪಾಯಿ ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ 104.21 ರೂಪಾಯಿ ಹಾಗೂ ಡೀಸೆಲ್ ದರ 92.15 ರೂಪಾಯಿ ಆಗಿದೆ. ದೇಶದಲ್ಲಿ 2022ರ ಮೇ ತಿಂಗಳಿನಿಂದ ಪೆಟ್ರೋಲ್ ಡೀಸೆಲ್ ಬೆಲೆ ಸ್ಥಿರವಾಗಿದೆ. 2024ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಇಂಧನ ದರದಲ್ಲಿ 2 ರೂಪಾಯಿ ಇಳಿಕೆ ಮಾಡಿತ್ತು. ಇದನ್ನು ಹೊರತುಪಡಿಸಿದರೆ ಕೇಂದ್ರ ಸರ್ಕಾರ ಇಂಧನ ದರಲ್ಲಿ ವ್ಯತ್ಯಾಸ ಮಾಡಿಲ್ಲ. ಆದರೆ ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳು ಇಂಧನದ ಮಾರಾಟ ತರಿಗೆ ಹೆಚ್ಚಿಸಿದೆ. ಜೂನ್ 16ರಂದು ಸಿದ್ದರಾಮಯ್ಯ ಸರ್ಕಾರ 3 ರೂಪಾಯಿ ಮಾರಾಟ ತೆರಿಗೆ ವಿಧಿಸಿತ್ತು.
ಈ ಟ್ರಿಕ್ ಬಳಸಿದ್ರೆ ಮಹಿಳೆಯರು ಶ್ರೀಮಂತರಾಗಬಹುದು
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕೆಲ ವ್ಯತ್ಯಾಸಗಳಿವೆ. ಗೋವಾ ಗಡಿ ಹಂಚಿಕೊಂಡಿರು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವಾಹನ ಸವಾರರು ಗೋವಾಗೆ ತೆರಳಿ ಇಂಧನ ತುಂಬಸಿಕೊಳ್ಳುತ್ತಿದ್ದರೆ. ಇತ್ತೀಚೆಗೆ ಗೋವಾ ಸರ್ಕಾರ ಇಂಧನದ ಮೇಲೆ 1 ರೂಪಾಯಿ ಹೆಚ್ಚಳ ಮಾಡಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರದ ಪಟ್ಟಿ ಇಲ್ಲಿದೆ.
ಬಾಗಲಕೋಟೆ: ಪೆಟ್ರೋಲ್ ದರ: 103.57
ಬೆಳಗಾವಿ: ಪೆಟ್ರೋಲ್ ದರ: 103.42
ಧಾರವಾಡ: ಪೆಟ್ರೋಲ್ ದರ: 102.63
ಗದಗ: ಪೆಟ್ರೋಲ್ ದರ: 103.19
ಹಾವೇರಿ: ಪೆಟ್ರೋಲ್ ದರ: 103.24
ಉತ್ತರ ಕನ್ನಡ: ಪೆಟ್ರೋಲ್ ದರ: 103.90
ವಿಜಯಪುರ: ಪೆಟ್ರೋಲ್ ದರ: 102.93
ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ: 102.93
ಬೆಂಗಳೂರು ನಗರ: ಪೆಟ್ರೋಲ್ ದರ: 102.86
ಚಿಕ್ಕಬಳ್ಳಾಪುರ: ಪೆಟ್ರೋಲ್ ದರ: 103.34
ಚಿತ್ರದುರ್ಗ: ಪೆಟ್ರೋಲ್ ದರ: 103.68
ದಾವಣಗೆರೆ: ಪೆಟ್ರೋಲ್ ದರ: 103.97
ಕೋಲಾರ: ಪೆಟ್ರೋಲ್ ದರ: 102.80
ರಾಮನಗರ: ಪೆಟ್ರೋಲ್ ದರ: 102.22
ಶಿವಮೊಗ್ಗ: ಪೆಟ್ರೋಲ್ ದರ: 104.59
ತುಮಕೂರು: ಪೆಟ್ರೋಲ್ ದರ: 103.23
ಬಳ್ಳಾರಿ: ಪೆಟ್ರೋಲ್ ದರ: 104.71
ಬೀದರ್: ಪೆಟ್ರೋಲ್ ದರ: 103.41
ಕಲಬುರಗಿ: ಪೆಟ್ರೋಲ್ ದರ: 103.23
ಕೊಪ್ಪಳ: ಪೆಟ್ರೋಲ್ ದರ: 104.17
ರಾಯಚೂರು: ಪೆಟ್ರೋಲ್ ದರ: 103.57
ವಿಜಯನಗರ: ಪೆಟ್ರೋಲ್ ದರ: 104.17
ಯಾದಗಿರಿ: ಪೆಟ್ರೋಲ್ ದರ: 103.74
ಚಾಮರಾಜನಗರ: ಪೆಟ್ರೋಲ್ ದರ: 102.85
ಚಿಕ್ಕಮಗಳೂರು: ಪೆಟ್ರೋಲ್ ದರ: 103.74
ದಕ್ಷಿಣ ಕನ್ನಡ: ಪೆಟ್ರೋಲ್ ದರ: 102.03
ಹಾಸನ: ಪೆಟ್ರೋಲ್ ದರ: 102.83
ಕೊಡಗು: ಪೆಟ್ರೋಲ್ ದರ: 104.16
ಮಂಡ್ಯ: ಪೆಟ್ರೋಲ್ ದರ: 102.98
ಮೈಸೂರು : ಪೆಟ್ರೋಲ್ ದರ: 102.64
ಉಡುಪಿ: ಪೆಟ್ರೋಲ್ ದರ: 102.30
ಕಷ್ಟವಿಲ್ಲದ ಕೆಲಸ ಮಾಡಿ 6 ತಿಂಗಳಲ್ಲಿ 58 ಲಕ್ಷ ಗಳಿಸಿದ ಹುಡುಗಿ! ಯಾರು ಬೇಕಾದ್ರೂ ಮಾಡಬಹುದು