ಕಷ್ಟವಿಲ್ಲದ ಕೆಲಸ ಮಾಡಿ 6 ತಿಂಗಳಲ್ಲಿ 58 ಲಕ್ಷ ಗಳಿಸಿದ ಹುಡುಗಿ! ಯಾರು ಬೇಕಾದ್ರೂ ಮಾಡಬಹುದು

By Roopa Hegde  |  First Published Jun 27, 2024, 3:35 PM IST

ವಿದ್ಯೆಗೆ ತಕ್ಕಂತೆ ಜಾಬ್ ಸಿಕ್ತಿಲ್ಲ ಅಂತ ಕೂತ್ರೆ ಮನೆಯಲ್ಲೇ ಇರ್ತೀರಿ. ಇದು ಡಿಜಿಟಲ್ ಯುಗ. ಇಲ್ಲಿ ಗಳಿಕೆಗೆ ನಾನಾ ದಾರಿ ಇದೆ. ಈ ಹುಡುಗಿಯಂತೆ ನಿಮಗೂ ಟ್ಯಾಲೆಂಟ್ ಇದ್ರೆ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡ್ಬಹುದು. 
 


ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿದ್ರೂ ನೌಕರಿ ಸಿಗೋದು ಕಷ್ಟ ಎನ್ನುವಂತಾಗಿದೆ. ಎಷ್ಟು ಟ್ಯಾಲೆಂಟ್ ಇದ್ರೂ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಕಡಿಮೆ ಏನಿಲ್ಲ. ಜನರು ಒಂದೇ ಸಮಯದಲ್ಲಿ ಮೂರ್ನಾಲ್ಕು ಕೆಲಸ ಮಾಡಿ ಹಣ ಸಂಪಾದಿಸಲು ಯತ್ನಿಸುತ್ತಾರೆ. ಓದಿಗೆ ತಕ್ಕಂತೆ ಕೆಲಸ ಸಿಗದ ಜನರು, ಅಂಗಡಿ ಶುರು ಮಾಡಿ ಇಲ್ಲವೆ ಆನ್ಲೈನ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡಿ, ವಿಮಾ ಏಜೆಂಟ್ (Insurance Agent) ಆಗಿ ದುಡಿಯುತ್ತಿದ್ದಾರೆ. ನಿಜ ಹೇಳ್ಬೇಕೆಂದ್ರೆ ದುಡಿಮೆಗೆ ನಾನಾ ದಾರಿ ಇದೆ. ಆದ್ರೆ ಅದು ಎಲ್ಲರಿಗೂ ತಿಳಿದಿಲ್ಲ. ಕೆಲವೇ ಕೆಲವು ಮಂದಿ ಈ ಗುಟ್ಟನ್ನು ಪತ್ತೆ ಹಚ್ಚಿದ್ದಾರೆ. ಯಾವುದೇ ಸಮಸ್ಯೆ ಇಲ್ಲದೆ, ಬಾಸ್ ಕಿರಿಕಿರಿ ಇಲ್ಲದೆ ಆರಾಮವಾಗಿ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಾರೆ. ಅದ್ರಲ್ಲಿ ಅಮೆರಿಕದ ಈ ಹುಡುಗಿ ಕೂಡ ಸೇರಿದ್ದಾಳೆ. ಆಕೆ ಬೆಳಿಗ್ಗೆ ಎದ್ದು ತಿಂಡಿ ತಿನ್ನದೆ ಕೆಲಸಕ್ಕೆ ಓಡೋದಿಲ್ಲ. 9 ರಿಂದ ಆರು ಗಂಟೆ ಕೆಲಸ ಮಾಡಿ ಸುಸ್ತಾಗೋದಿಲ್ಲ. ಬಿಂದಾಸ್ ಆಗಿ ಊರು ಸುತ್ತಿ ಹಣ ಸಂಪಾದನೆ ಮಾಡ್ತಿದ್ದಾಳೆ. ಆರು ತಿಂಗಳಲ್ಲಿ 58 ಲಕ್ಷ ರೂಪಾಯಿ ಗಳಿಸಿದ್ದಾಳೆ ಅಂದ್ರೆ ನೀವು ನಂಬ್ಲೇಬೇಕು. ಅಷ್ಟಕ್ಕೂ ಆಕೆ ಯಾರು, ಆಕೆ ಮಾಡ್ತಿರೋ ಕೆಲಸ ಏನು ಅನ್ನೋದನ್ನು ನಾವು ಹೇಳ್ತೇವೆ.

ಅವಳ ಹೆಸರು ಅಲೆಕ್ಸಾಂಡ್ರಾ ಹಾಲ್ಮನ್ (Alexandra Hallman). ಆಕೆಗಿನ್ನು 25 ವರ್ಷ. ಆಕೆ ಮೊಬೈಲ್ ಹಿಡಿದು ಊರು ಸುತ್ತಲು ಹೋಗ್ತಾಳೆ. ಅಲ್ಲಿ ಕಂಡ ದೃಶ್ಯಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿತಾಳೆ. ಅದನ್ನು ದೊಡ್ಡ ದೊಡ್ಡ ಕಂಪನಿ (Company) ಗೆ ಮಾರಾಟ ಮಾಡ್ತಾಳೆ. ಇಷ್ಟೇ.. ಈ ಕೆಲಸದಲ್ಲೇ ಆಕೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. 

Tap to resize

Latest Videos

ಕಾಲಲ್ಲಿ ಪುರುಷರ ಹೆಸರು ಬರೆದು ಮಾರೋ ಹುಡುಗಿ ಗಳಿಸೋದು ಲಕ್ಷ ಲಕ್ಷ!

ಅಲೆಕ್ಸಾಂಡ್ರಾ, ಸಿಯಾಟಲ್ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾಳೆ. ಆಕೆ ಸ್ಥಳೀಯ ಕಾಫಿ ಶಾಪ್ ಮತ್ತು  ರೆಸ್ಟೋರೆಂಟ್‌, ವರ್ಜಿನ್ ಗ್ಯಾಲಕ್ಟಿಕ್ ಮತ್ತು ಲೋರಿಯಲ್‌ನಂತಹ ದೊಡ್ಡ ಬ್ರಾಂಡ್‌ಗಳಿಗೆ ಕಂಟೆಂಟ್ ಸಿದ್ಧಪಡಿಸಿಕೊಡ್ತಿದ್ದಳು. ಆದ್ರೆ ಈ ಹಣ ಆಕೆಗೆ ಸಾಲ್ತಿರಲಿಲ್ಲ. ದಿನಸಿ, ಮನೆ ಬಾಡಿಗೆಗೆ ಮೂರು, ನಾಲ್ಕು ಕೆಲಸವನ್ನು ಆಕೆ ಮಾಡ್ಬೇಕಿತ್ತು. ಈ ವಿಷ್ಯವನ್ನು ಅಲೆಕ್ಸಾಂಡ್ರಾ ಗಂಭೀರವಾಗಿ ತೆಗೆದುಕೊಂಡಳು. ಸುಲಭವಾಗಿ ಹಣ ಗಳಿಸೋದು ಹೇಗೆ ಎಂಬ ಬಗ್ಗೆ ಆಕೆ ಆಲೋಚನೆ ಮಾಡತೊಡಗಿದಳು. ಆಗ ತಾನು ಕ್ಲಿಕ್ಕಿಸಿದ ಫೋಟೋ ಮೇಲೆ ಗಮನ ಹರಿದಿತ್ತು. ಮ್ಯಾಗಜೀನ್ ಮುಖಪುಟಕ್ಕೆ ಯೋಗ್ಯವಿರುವಂತಹ ಫೋಟೋಗಳನ್ನು ಅಲೆಕ್ಸಾಂಡ್ರಾ ಕ್ಲಿಕ್ಕಿಸುತ್ತಿದ್ದಳು. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಅಲೆಕ್ಸಾಂಡ್ರಾ ನಿರ್ಧರಿಸಿದಳು. ಸಾಮಾಜಿಕ ಜಾಲತಾಣದಲ್ಲಿ ಆಹಾರ, ಸಮುದ್ರ ಸೇರಿದಂತೆ ಸುತ್ತಲ ಪರಿಸರದ ಫೋಟೋಗಳನ್ನು ಹಾಕುವುದಲ್ಲದೆ ಅದಕ್ಕೆ ಸಂಬಂಧಿಸಿದ ಕಂಪನಿಗೆ ಟ್ಯಾಗ್ ಮಾಡ್ತಿದ್ದಳು. 

ಆಸಕ್ತ ಕಂಪನಿಗಳು ಆಕೆಯನ್ನು ಸಂಪರ್ಕಿಸಲು ಶುರು ಮಾಡಿದ್ದವು. ಆರಂಭದಲ್ಲಿ ಅಲೆಕ್ಸಾಂಡ್ರಾ ಗಳಿಕೆ ಕಡಿಮೆ ಇತ್ತು. ದಿನ ಕಳೆದಂತೆ ದೊಡ್ಡ ಮೊತ್ತಕ್ಕೆ ಫೋಟೋಗಳನ್ನು ಖರೀದಿಸಲಾಯ್ತು. ಈಗ್ಲೂ ಅಲೆಕ್ಸಾಂಡ್ರಾ ತನ್ನ ಫೋಟೋವನ್ನು ಎಲ್ಲಿಯೂ ಹಂಚಿಕೊಳ್ಳೋದಿಲ್ಲ. ತಾನು ತೆಗೆದ ಫೋಟೋವನ್ನು ಮಾರಾಟ ಮಾಡುತ್ತಾಳೆ.

ದೀಪಿಕಾಯಿಂದ ಪೀಸೀವರೆಗೆ.. ಇವರದೇನ್ ಲಕ್ಕು ಗುರೂ! ನಟಿಯರಾಗೂ ಯಶಸ್ಸು, ಉದ್ಯಮಿಯಾಗೂ ಗೆಲುವು

ಅನೇಕ ಕಾರ್ಯಕ್ರಮಗಳಿಗೆ ಆಹ್ವಾನಿಸುವ ಜನ ಅಲೆಕ್ಸಾಂಡ್ರಾಗೆ ಹಣ ನೀಡ್ತಿದ್ದಾರೆ. ಪ್ರಯಾಣದ ಅನುಭವವನ್ನು ಅಲೆಕ್ಸಾಂಡ್ರಾ ಪುಸ್ತಕದ ಮೂಲಕ ಎಲ್ಲರಿಗೂ ತಿಳಿಸುವ ಪ್ರಯತ್ನ ನಡೆಸಿದ್ದಾಳೆ. ಅವಳು ದಿ ಸ್ಲೀಪಿ ಮಿಲಿಯನೇರ್: ಹೌ ಟು ಗೆಟ್ ಪೇಯ್ಡ್ ಟು ಟ್ರಾವೆಲ್ ಹೆಸರಿನ ಪುಸ್ತಕ ಬರೆದಿದ್ದಾಳೆ. ವೆಬ್ ಸೈಟ್ ಕೂಡ ಶುರು ಮಾಡಿದ್ದು, ಅದ್ರಲ್ಲಿ ಹೇಗೆ ಹಣ ಗಳಿಸಬಹುದು ಎಂಬ ಮಾಹಿತಿ ನೀಡ್ತಾರೆ. ಈ ಮಾಹಿತಿಗೆ ಅಲೆಕ್ಸಾಂಡ್ರಾ 800 ರೂಪಾಯಿ ಶುಲ್ಕ ಪಡೆಯುತ್ತಾರೆ. ಅಲೆಕ್ಸಾಂಡ್ರಾ, ನೋ ಕ್ಲಾಕಿಂಗ್ ಇನ್: ಪ್ರಾಫಿಟ್ 24/7 ಫ್ರಂ ವಾಟ್ ಯು ಲವ್ ಎಂಬ ಇನ್ನೊಂದು ಪುಸ್ತಕ ಕೂಡ ಬರೆದಿದ್ದಾಳೆ. ನಿಮ್ಮ ಫೋಟಫೋಗ್ರಫಿ ಮೇಲೆ ನಿಮಗೆ ಭರವಸೆ ಇದ್ರೆ ನೀವು ಇಂಥ ಕೆಲಸ ಶುರು ಮಾಡಬಹುದು ಎನ್ನುತ್ತಾಳೆ ಅಲೆಕ್ಸಾಂಡ್ರಾ.

click me!