ಪ್ರತಿ ತಿಂಗಳ ಪ್ರಾರಂಭದಲ್ಲಿ ಹಣಕಾಸಿನ ವಿಚಾರಗಳಿಗೆ ಸಂಬಂಧಿಸಿ ಕೆಲವು ನಿಯಮಗಳಲ್ಲಿ ಬದಲಾವಣೆಯಾಗುತ್ತದೆ. ಅದರಂತೆ ಜುಲೈ ತಿಂಗಳಲ್ಲಿ ಕೂಡ ನಾಲ್ಕು ಪ್ರಮುಖ ಬದಲಾವಣೆಗಳಾಗಲಿದ್ದು, ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲಿವೆ.
Business Desk:ಪ್ರತಿ ಹೊಸ ತಿಂಗಳು ಪ್ರಾರಂಭವಾಗುವಾಗ ಕೆಲವು ನಿಯಮಗಳಲ್ಲಿ ಬದಲಾವಣೆಯಾಗುವುದು ಸಾಮಾನ್ಯ. ಅದೇರೀತಿ ಜುಲೈ ತಿಂಗಳ ಪ್ರಾರಂಭಕ್ಕೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಜುಲೈ ತಿಂಗಳಲ್ಲಿ ಕೂಡ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿರುವ ಕಾರಣ ಈ ಬಗ್ಗೆ ಮಾಹಿತಿ ಹೊಂದಿರೋದು ಉತ್ತಮ. ಜುಲೈ ತಿಂಗಳ ಮೊದಲ ದಿನ ಇತರ ಎಲ್ಲ ತಿಂಗಳಂತೆ ಅಡುಗೆ ಹಾಗೂ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಗಳಲ್ಲಿ ವ್ಯತ್ಯಾಸವಾಗಲಿದೆ. ಇನ್ನು ಸಿಎನ್ ಜಿ ಹಾಗೂ ಪಿಎನ್ ಜಿ ದರಗಳಲ್ಲಿ ಕೂಡ ಪರಿಷ್ಕರಣೆ ಮಾಡಲಾಗುತ್ತದೆ. ಇನ್ನು ತೆರಿಗೆದಾರರಿಗೆ ಜುಲೈ ತಿಂಗಳು ಮುಖ್ಯವಾಗಿದೆ. ಏಕೆಂದರೆ ಐಟಿಆರ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಎಲ್ಲ ಬದಲಾವಣೆಗಳು ನಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಕಾರಣ ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಅಲ್ಲದೆ, ಹಣಕಾಸಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ಆ ತಿಂಗಳು ಅಂತಿಮ ಗಡುವಿದ್ದರೆ ತಿಳಿದು ಅದನ್ನು ಪೂರ್ಣಗೊಳಿಸುವ ಮೂಲಕ ಹೆಚ್ಚಿನ ಹಣಕಾಸಿನ ಹೊರೆಯಿಂದ ತಪ್ಪಿಸಿಕೊಳ್ಳಬಹುದು. ಹಾಗಾದ್ರೆ ಜುಲೈ ತಿಂಗಳಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ? ಇಲ್ಲಿದೆ ಮಾಹಿತಿ.
1.ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸ
ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಅಡುಗೆ ಹಾಗೂ ವಾಣಿಜ್ಯ ಅನಿಲದ ಬೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬದಲಾವಣೆ ಮಾಡುತ್ತವೆ. ಹೀಗಾಗಿ ಜುಲೈ 1ರಂದು ಎಲ್ ಪಿಜಿ ಅನಿಲದ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. 19ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮೇ ಹಾಗೂ ಏಪ್ರಿಲ್ ತಿಂಗಳಲ್ಲಿ ಇಳಿಕೆ ಕಂಡುಬಂದಿದೆ. ಆದರೆ, 14 ಕೆಜಿ ತೂಕದ ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಈ ಬಾರಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚಕ್ಕೆ ಟಿಸಿಎಸ್ ಇಲ್ಲ; ಹೊಸ ದರ ಜು.1ರ ಬದಲು ಅ.1ರಿಂದ ಜಾರಿ
2.ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಗಡುವು
2023-24ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಹೀಗಾಗಿ ನೀವು ಇನ್ನೂ ಐಟಿಆರ್ ಸಲ್ಲಿಕೆ ಮಾಡಿಲ್ಲವೆಂದ್ರೆ ತಕ್ಷಣ ಮಾಡಿಬಿಡಿ. ಇಲ್ಲವಾದ್ರೆ ಆ ಬಳಿಕ ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೆ, ನಿಗದಿತ ಸಮಯಕ್ಕೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ನಿಮ್ಮ ಜೇಬಿನ ಮೇಲಿನ ಹೊರೆ ಕೂಡ ಹೆಚ್ಚಲಿದೆ.
3.ಸಿಎನ್ ಜಿ, ಪಿಎನ್ ಜಿ ಬೆಲೆಯಲ್ಲಿ ವ್ಯತ್ಯಾಸ
ಪ್ರತಿ ತಿಂಗಳ ಮೊದಲ ದಿನ ಸಿಎನ್ ಜಿ ಹಾಗೂ ಪಿಎನ್ ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್) ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಹೀಗಾಗಿ ಜುಲೈ ತಿಂಗಳಲ್ಲಿ ಸಿಎನ್ ಜಿ ಹಾಗೂ ಪಿಎನ್ ಜಿ ದರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ದೆಹಲಿ ಹಾಗೂ ಮುಂಬೈನಲ್ಲಿ ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಸಿಎನ್ ಜಿ ಹಾಗೂ ಪಿಎನ್ ಜಿ ಗ್ಯಾಸ್ ಬೆಲೆಯನ್ನು ಪರಿಷ್ಕರಿಸುತ್ತವೆ.
ಆಧಾರ್‌ಗೆ ಪ್ಯಾನ್ ಲಿಂಕ್ ಮಾಡಲು ನಾಳೆ ಕಡೆಯ ದಿನ: ಕೆಲವೇ ಕ್ಷಣಗಳಲ್ಲಿ ಲಿಂಕ್ ಮಾಡುವುದು ಹೀಗೆ..
4.ಪಾದರಕ್ಷೆ ಕಂಪನಿಗಳಿಗೆ ಕ್ಯುಸಿಒ ಕಡ್ಡಾಯ
ಜುಲೈ 1ರಿಂದ ದೇಶಾದ್ಯಂತ ಕಳಪೆ ಗುಣಮಟ್ಟದ ಪಾದರಕ್ಷೆಗಳ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಲಾಗುತ್ತದೆ. ಪಾದರಕ್ಷೆ ಉತ್ಪಾದನಾ ಘಟಕಗಳಿಗೆ ಗುಣಮಟ್ಟ ನಿಯಂತ್ರಣ ಆದೇಶ (QCO) ಅನುಷ್ಠಾನಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಪಾದರಕ್ಷೆ ಕಂಪನಿಗಳಿಗೆ ಕ್ಯುಸಿಇ ಕಡ್ಡಾಯ ಮಾಡಲಾಗಿದೆ ಕೂಡ. ವಿಶ್ವ ವ್ಯಾಪಾರ ಸಂಸ್ಥೆ (WTO) ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸರ್ಕಾರ ಪಾದರಕ್ಷೆ ಕಂಪನಿಗಳಿಗೆ ಈ ಮಾನದಂಡ ನಿಗದಿಪಡಿಸಿದೆ.