
ಪ್ಯಾರಿಸ್(ಏ.14): ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ ನ ಫ್ರೆಂಚ್ ನೋಂದಾಯಿತ ಟೆಲಿಕಾಮ್ ಸಂಸ್ಥೆಗೆ ತೆರಿಗೆ ಮನ್ನಾ ಮಾಡುವಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ನಡೆದಿಲ್ಲ ಎಂದು ಫ್ರಾನ್ಸ್ ಸ್ಪಷ್ಟಪಡಿಸಿದೆ.
ತೆರಿಗೆ ಮನ್ನಾ ಪ್ರಕ್ರಿಯೆ ಪ್ರಕ್ರಿಯೆ ಫ್ರಾನ್ಸ್ ತೆರಿಗೆ ಅಧಿಕಾರಿಗಳು ಹಾಗೂ ರಿಲಯನ್ಸ್ ಅಂಗಸಂಸ್ಥೆ ನಡುವೆ ನಡೆದಿರುವ ಒಪ್ಪಂದ ಎಂದು ಫ್ರಾನ್ಸ್ ದೂತವಾಸ ಕಚೇರಿ ಸ್ಪಷ್ಟಪಡಿಸಿದೆ.
ಫ್ರಾನ್ಸ್ ನ ತೆರಿಗೆ ಅಧಿಕಾರಿಗಳು ಹಾಗೂ ರಿಲಯನ್ಸ್ ಫ್ಲಾಗ್ 2008-12 ರ ನಡುವಿನ ತೆರಿಗೆ ವಿವಾದವನ್ನು ಇತ್ಯರ್ಥಪಡಿಸಲು ಈ ಒಪ್ಪಂದಕ್ಕೆ ಬರಲಾಗಿದೆ ಎಂದು ಫ್ರಾನ್ಸ್ ಸ್ಪಷ್ಟನೆ ನೀಡಿದೆ.
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ ನ ಫ್ರೆಂಚ್ ನೋಂದಾಯಿತ ಟೆಲಿಕಾಮ್ ಸಂಸ್ಥೆಯ 143.7 ದಶಲಕ್ಷ ಯೂರೋ ತೆರಿಗೆಯನ್ನು ಫ್ರಾನ್ಸ್ ಮನ್ನಾ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.