ಅಂಬಾನಿ ತೆರಿಗೆ ಮನ್ನಾ: 'ಚೌಕೀದಾರನಿಗೆ ದೇಶಕ್ಕಿಂತ ಗೆಳೆಯನೇ ಮೇಲು'

By Web DeskFirst Published Apr 14, 2019, 11:58 AM IST
Highlights

ಅಂಬಾನಿ ಮಾಲೀಕತ್ವದ ಕಂಪೆನಿಯೊಂದರ 1100 ಕೋಟಿ ರು. ತೆರಿಗೆ ಮನ್ನಾ| ಅಂಬಾನಿ ತೆರಿಗೆ ಮನ್ನಾವಾದ ಬೆನ್ನಲ್ಲೇ ಮೋದಿ ವಿರುದ್ಧ ಸಿಡಿದೆದ್ದ ವಿಪಕ್ಷಗಳು| 'ಚೌಕೀದಾರನಿಗೆ ದೇಶಕ್ಕಿಂತ ಗೆಳೆಯನೇ ಮೇಲು' ಎಂದ ನಾಯಕ!

ನವದೆಹಲಿ[ಏ.14]: 2015ರಲ್ಲಿ ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧವಿಮಾನಗಳನ್ನು ಖರೀದಿಸುವ ಒಪ್ಪಂದ ಅಂತಿಮಗೊಂಡಿದೆ ಎಂದು ಮೋದಿ ಪ್ರಕಟಿಸಿದ ಕೆಲವೇ ತಿಂಗಳಲ್ಲಿ ಫ್ರಾನ್ಸ್‌ ಸರ್ಕಾರ ಅನಿಲ್‌ ಅಂಬಾನಿ ಮಾಲೀಕತ್ವದ ಕಂಪೆನಿಯೊಂದರ 1100 ಕೋಟಿ ರು. ತೆರಿಗೆ ಬಾಕಿಯನ್ನು ಮನ್ನಾ ಮಾಡಿದೆ. ಫ್ರಾನ್ಸ್ ನ ಮಾಧ್ಯಮವೊಂದು ಈ ಕುರಿತಾಗಿ ವರದಿ ಪ್ರಕಟಿಸಿದ್ದು, ಇದಾದ ಬಳಿಕ ಪ್ರಧಾನಿ ಮೋದಿ ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬೆಗೂಸ್ರಾಯ್ ಕ್ಷೇತ್ರದ ಸಿಪಿಐ ಅಭ್ಯರ್ಥಿ ಹಾಗೂ JNU ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಕೂಡಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಮೋದಿ ಗೆಳೆಯನಿಗೆ ತೆರಿಗೆ ಕಟ್ಟಲು ಆಗಲಿಲ್ಲ. ಹೀಗಾಗಿ ತೆರಿಗೆಯನ್ನೇ ಮನ್ನಾ ಮಾಡಿದ್ದಾರೆ' ಎನ್ನುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.

ಬೆಗೂಸ್ರಾಯ್ ಕ್ಷೇತ್ರದಿಂದ ತನ್ನ ಅದೃಷ್ಟ ಪರೀಕ್ಷೆಗಿಳಿದಿರುವ ಕನ್ಹಯ್ಯಾ ಕುಮಾರ್ ಟ್ವೀಟ್ ಒಂದನ್ನು ಮಾಡಿ 'ಗೆಳೆಯನಿಗೆ ತೆರಿಗೆ ಕಟ್ಟಲಾಗುತ್ತಿಲ್ಲ, ಹೀಗಾಗಿ ಚೌಕೀದಾರ ಮೂರು ಪಟ್ಟು ಹೆಚ್ಚಿನ ಮೌಲ್ಯಕ್ಕೆ ಮಾರುತ್ತಿರುವವರಿಂದ ತೆರಿಗೆ ಮನ್ನಾ ಮಾಡಿಸಿದ್ದಾರೆ. ಅಂದರೆ ಚೌಕೀದಾರನಿಗೆ ದೇಶಕ್ಕಿಂತ ಗೆಳೆಯನೇ ಮೇಲು. ರಫೇಲ್ ಡೀಲ್ ನ ಹೊಸ ಸುದ್ದಿ ಇದನ್ನೇ ಹೇಳುತ್ತದೆ. ರಫೇಲ್ ನೇರವಾಗಿ ಜೈಲಿಗನ ದಾರಿ ತೋರಿಸುತ್ತಿದೆ ಎಂಬುವುದು ಸ್ಪಷ್ಟ' ಎಂದಿದ್ದಾರೆ.

दोस्त टैक्स नहीं चुका पा रहा था, इसलिए चौकीदार ने विमान तिगुनी कीमत पर ख़रीदकर बेचने वाले से टैक्स माफ़ करवा लिया। मतलब चौकीदार ने दोस्त को देश से बड़ा माना। राफ़ेल डील की नई ख़बर तो यही बताती है। साफ़ दिख रहा है कि राफ़ेल का रास्ता जेल की तरफ़ जा रहा है।

— Kanhaiya Kumar (@kanhaiyakumar)

ತೆರಿಗೆ ಮನ್ನಾ ವಿಚಾರವಾಗಿ ಸ್ಪಷ್ಟನೆ ನೀಡಿರುವ ಅನಿಲ್‌ ಅಂಬಾನಿ ಮಾಲಿಕತ್ವದ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಕಂಪನಿ, ಈ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಫ್ರಾನ್ಸ್‌ನ ಕಾನೂನು ಚೌಕಟ್ಟಿನೊಳಗೆ ಆ ದೇಶದ ಎಲ್ಲಾ ಕಂಪನಿಗಳಿಗೆ ಸಿಗುವ ಅನುಕೂಲವನ್ನು ಬಳಸಿಕೊಂಡು ತೆರಿಗೆ ವಿವಾದ ಬಗೆಹರಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28

click me!