ಅಯ್ಯಯ್ಯಪ್ಪಾ: 2 ಸಾವಿರ ನೋಟ್ ಬ್ಯಾನ್ ಅಂದಿದ್ಯಾರಪ್ಪಾ?

Published : Nov 08, 2019, 07:20 PM IST
ಅಯ್ಯಯ್ಯಪ್ಪಾ: 2 ಸಾವಿರ ನೋಟ್ ಬ್ಯಾನ್ ಅಂದಿದ್ಯಾರಪ್ಪಾ?

ಸಾರಾಂಶ

‘2 ಸಾವಿರ ರೂ. ಮುಖಬೆಲೆಯ ನೋಟ್ ಬ್ಯಾನ್ ಮಾಡಿ’/ ಕೇಂದ್ರ ಸರ್ಕಾರಕ್ಕೆ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಸಲಹೆ/ ‘ಬಹುತೇಕ 2 ಸಾವಿರ ರೂ. ಮುಖ ಬೆಲೆಯ ನೋಟುಗಳು ಕಾಳ ಧನಿಕರ ಕೈಯಲ್ಲಿವೆ’/ ಸರ್ಕಾರ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವುದು ಒಳ್ಳೆಯದು ಎಂದು ಗರ್ಗ್/ 2 ಸಾವಿರ ರೂ. ನೋಟುಗಳ ಅಪನಗದೀಕರಣದ ಸುಳಿವು ನೀಡಿದ್ರಾ ಗರ್ಗ್/

ನವದೆಹಲಿ(ನ.08): ಅಪನಗದೀಕರಣಕ್ಕೆ ಇಂದಿಗಗೆ ಭರ್ತಿ ಮೂರು ವರ್ಷ ತುಂಬಿದೆ. ಕೇಂದ್ರ ಸರ್ಕಾರ ಇಂದು ಅಪನಗದೀಕರಣದ ಮೂರನೇ ವರ್ಷಾಚರಣೆ ಮಾಡುತ್ತಿದೆ. 

ದೇಶದ ಅರ್ಥ ವ್ಯವಸ್ಥೆಯ ಪಥ ಬದಲಿಸಿದ ಅಪನಗದೀಕರಣದ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳ ಕುರಿತು ಚರ್ಚೆ ನಡೆಯುತ್ತಿದೆ.

ಡಿಮಾನಿಟೈಸೇಶನ್ ಗೆ 3 ವರ್ಷ: ಅಪನಗದೀಕರಣ ಮತ್ತೆ ಆದರೂ ಆಗಬಹುದು!

ಈ ಮಧ್ಯೆ ದೇಶದ ಆರ್ಥಿಕ ಸ್ಥಿತಿ ಸುಧಾರಣೆಗಾಗಿ 2 ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದಗೊಳಿಸುವುದು ಉತ್ತಮ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅಭಿಪ್ರಾಯಪಟ್ಟಿದ್ದಾರೆ.

2 ಸಾವಿರ ರೂ. ಬಹುತೇಕ ನೋಟುಗಳು ಈಗ ಚಲಾವಣೆಯಲ್ಲಿಲ್ಲ ಎಂದಿರುವ ಗರ್ಗ್, ಕಾಳ ಧನಿಕರು ಭಾರೀ ಪ್ರಮಾಣದಲ್ಲಿ 2 ಸಾವಿರ ರೂ ಮುಖ ಬೆಲೆಯ ನೋಟುಗಳನ್ನು ಗುಪ್ತವಾಗಿ ಕೂಡಿಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 

ದೇಶಕ್ಕಾಗಿ ಕಷ್ಟ ಇಷ್ಟ ಎಂದ ಭಾರತೀಯ: ಅಪನಗದೀಕರಣಕ್ಕೆ 3 ವರ್ಷದ ಐತಿಹ್ಯ!

ಈ ಹಿನ್ನೆಲೆಯಲ್ಲಿ 2 ಸಾವಿರ ರೂ. ಮುಖ ಬೆಲೆಯ ನೋಟುಗಳ ಅಪನಗದೀಕರಣ ಆಗಲೂಬಹುದು ಎಂದು ಗರ್ಗ್ ಸುಳಿವು ನೀಡಿದ್ದಾರೆ.

2 ಸಾವಿರ ರೂ. ಮುಖ ಬೆಲೆಯ ನೋಟುಗಳು ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟಾರೆ ನೋಟುಗಳ ಪೈಕಿ ಶೇ.33 ರಷ್ಟು ಪಾಲು ಹೊಂದಿವೆ. ಆದರೆ ಈ ಪೈಕಿ ಸಾಕಷ್ಟು ನೋಟುಗಳು ಈಗ ಚಲಾವಣೆಯಲ್ಲೇ ಇಲ್ಲ. ಇವುಗಳನ್ನು ಅಕ್ರಮವಾಗಿ ಕಾಳಧನಿಕರು ದಾಸ್ತಾನು ಮಾಡಿಟ್ಟಿರುವ ಶಂಕೆ ಇದೆ ಎಂದು ಗರ್ಗ್ ತಿಳಿಸಿದ್ದಾರೆ.

ನೋಟ್ ಬ್ಯಾನ್ ವರ್ಷಾಚರಣೆ ದಿನವೇ ಬ್ಯಾಡ್ ನ್ಯೂಸ್: ಮೋದಿ ಮೂಡ್ ಹಾಳು ಮಾಡಿದ ಮೂಡಿ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Rules Change: ಕ್ಯಾಲೆಂಡರ್ ಪೇಜ್ ಮಾತ್ರವಲ್ಲ, ಜುಲೈ 1ರಿಂದ LPG, ಆಧಾರ್‌ ಕಾರ್ಡ್‌ನಲ್ಲಿ ಬದಲಾವಣೆ
Gold ETF: ಗೋಲ್ಡ್ ಇಟಿಎಫ್ ಅಂದ್ರೇನು? ಜನರು ಮುಗಿಬಿದ್ದು ಇದ್ರಲ್ಲಿ ಹೂಡಿಕೆ ಮಾಡ್ತಿರೋದು ಯಾಕೆ?