Grocery Delivery 1800 ನಗರಗಳಿಗೆ ಸೇವೆ ವಿಸ್ತರಿಸಿದ ಫ್ಲಿಪ್‌ಕಾರ್ಟ್ ಗ್ರಾಸರಿ!

By Suvarna News  |  First Published Jan 24, 2022, 9:02 PM IST
  • 23 ರಾಜ್ಯಗಳಲ್ಲಿ ಫ್ಲಿಪ್‌ಕಾರ್ಟ್ ಗ್ರಾಸರಿ ಸೇವೆ ವಿಸ್ತರಣೆ
  • 10,000 ಕ್ಕೂ ಹೆಚ್ಚು ಪಿನ್ ಕೋಡ್ ಗಳಲ್ಲಿ ಫ್ಲಿಪ್ ಕಾರ್ಟ್ ಗ್ರಾಸರಿ ಸೇವೆ
  • 6000+ ಕ್ಕಿಂತ ಹೆಚ್ಚು ಆಯ್ಕೆಗಳೊಂದಿಗೆ ಖರೀದಿಸುವ ಅವಕಾಶ

ಬೆಂಗಳೂರು(ಜ.24):ಭಾರತದ ದೇಶೀಯ ಇ-ಕಾಮರ್ಸ್(E-commerce) ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್(Flipkart) ಇದೀಗ ಅಜ್ಮೀರ್, ಅಮೃತಸರ, ಭುಜ್, ಬೊಕಾರೋ, ದಾಮನ್ & ಡಿಯು, ಡೆಹ್ರಾಡೂನ್ ಮತ್ತು ಕನ್ಯಾಕುಮಾರಿ ಸೇರಿದಂತೆ 1800 ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಗ್ರಾಸರಿ ಪೂರೈಕೆ(Grocery Delivery) ಸೇವೆಯನ್ನು ವಿಸ್ತರಣೆ ಮಾಡಿದೆ. ಈ ವಿಸ್ತರಣೆಯೊಂದಿಗೆ ಫ್ಲಿಪ್ ಕಾರ್ಟ್ ದೇಶದ ಒಟ್ಟು 23 ರಾಜ್ಯಗಳ 10,000 ಪಿನ್ ಕೋಡ್ ಗಳಲ್ಲಿ ತನ್ನ ಸೇವೆಯನ್ನು ನೀಡಿದಂತಾಗಿದೆ. ಇದೀಗ ಗ್ರಾಹಕರು ಉತ್ತಮ ಗುಣಮಟ್ಟದ ಮೌಲ್ಯಯುತವಾದ ದಿನಸಿ ಉತ್ಪನ್ನಗಳನ್ನು ಸುರಕ್ಷಿತ ಮತ್ತು ತಡೆರಹಿತವಾದ ರೀತಿಯಲ್ಲಿ 6000+ ಕ್ಕಿಂತ ಹೆಚ್ಚು ಆಯ್ಕೆಗಳೊಂದಿಗೆ ಖರೀದಿಸುವ ಅವಕಾಶವನ್ನು ಹೊಂದಿದ್ದಾರೆ. ಇದೇ ವೇಳೆ,  ಏಕೆಂದರೆ ಅವರು ಡಿಜಿಟಲ್ ಆರ್ಥಿಕತೆಯ ಭಾಗವಾಗಲು ವೇದಿಕೆಯನ್ನು ಬಳಸಿಕೊಳ್ಳುವುದರಿಂದ ವಿಸ್ತರಣೆಯು ಸ್ಥಳೀಯ ರೈತರನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಕೋವಿಡ್-19 ರ ಮೂರನೇ ಅಲೆಯು(Coronavirus) ಸನ್ನಿಹಿತವಾಗುತ್ತಿದ್ದಂತೆಯೇ ಈ ನಗರಗಳಲ್ಲಿನ ಗ್ರಾಹಕರು ತಮ್ಮ ಮನೆಗಳಲ್ಲಿಯೇ ಕುಳಿತು ಮನೆ ಬಾಗಿಲಿಗೆ ಸುರಕ್ಷಿತವಾಗಿ ದಿನಸಿಗಳನ್ನು ತಲುಪಿಸಲು ಸಾಧ್ಯವಾಗುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಫ್ಲಿಪ್ ಕಾರ್ಟ್ ದಿನಸಿ ವ್ಯವಹಾರಕ್ಕೆ ಸಾಕಷ್ಟು ಹೂಡಿಕೆ ಮಾಡಿದೆ ಮತ್ತು ಇಂದು ದೇಶಾದ್ಯಂತ ಇರುವ ತನ್ನ 22 ಗ್ರಾಸರಿ ಫುಲ್ ಫಿಲ್ಮೆಂಟ್ ಸೆಂಟರ್ ಗಳ ಮೂಲಕ ದಿನಸಿ ಪದಾರ್ಥಗಳನ್ನು ಗ್ರಾಹಕರಿಗೆ ಪೂರೈಸುತ್ತಿದೆ. ಈ ಸೆಂಟರ್ ಗಳು ಒಟ್ಟು 25.2 ಲಕ್ಷ ಚದರಡಿಗಳಷ್ಟು ವಿಸ್ತೀರ್ಣ ಹೊಂದಿದ್ದು, ಸಾವಿರಾರು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳ ಅವಕಾಶಗಳನ್ನು ಕಲ್ಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುತ್ತಿವೆ.

Tap to resize

Latest Videos

Flipkart Grand Gadget Days Sale: ಸ್ಮಾರ್ಟ್‌ವಾಚ್, ಇಯರ್‌ಫೋನ್‌, ಕ್ಯಾಮೆರಾಗಳ ಮೇಲೆ 80%ವರೆಗೆ ರಿಯಾಯಿತಿ!

ಭಾರತದ ಬಹುತೇಕ ಭಾಗಗಳಲ್ಲಿ ನಮ್ಮ ಗ್ರಾಸರಿ ಕಾರ್ಯಾಚರಣೆ ತಲುಪಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಇ-ಗ್ರಾಸರಿ ಮಾರುಕಟ್ಟೆಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಏಕೆಂದರೆ, ಶ್ರೇಣಿ 2 ಮತ್ತು 3 ಮಾರುಕಟ್ಟೆಗಳಿಂದ ಗ್ರಾಹಕರು ಉತ್ತಮ ಗುಣಮಟ್ಟದ ಆಯ್ಕೆಯ ಸ್ಟೇಪಲ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳನ್ನು ಪ್ರತಿಷ್ಠಿತ ಬ್ರ್ಯಾಂಡ್ ಗಳಿಂದ ಬಯಸುತ್ತಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಆಯ್ಕೆಯನ್ನು ಬಲಪಡಿಸಿ, ಎಫ್ ಪಿಒಗಳು ಮತ್ತು ತಾಜಾ ಉತ್ಪನ್ನಗಳಲ್ಲಿ ಹೂಡಿಕೆ ಮಾಡಿ ಹಾಗೂ ನಮ್ಮ ಪೂರೈಕೆ ಜಾಲವನ್ನು ಹೆಚ್ಚಿಸಿದಂತೆ ಇ-ಶಾಪಿಂಗ್(E Shopping) ಅನುಭವವನ್ನು ದೇಶದೆಲ್ಲೆಡೆ ಗ್ರಾಹಕರಿಗೆ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಫ್ಲಿಪ್ ಕಾರ್ಟ್ ಗ್ರಾಸರಿಯ ಉಪಾಧ್ಯಕ್ಷ ಸ್ಮೃತಿ ರವಿಚಂದ್ರನ್ ಹೇಳಿದರು.

ಈ ವರ್ಷ, ಇತ್ತೀಚೆಗೆ ಮುಕ್ತಾಯಗೊಂಡ ಬಿಗ್ ಬಿಲಿಯನ್ ಡೇಸ್ ಕಾರ್ಯಕ್ರಮದ ವೇಳೆ ಗ್ರಾಸರಿ ವಿಭಾಗಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಬೇಡಿಕೆ ಬಂದಿದೆ. 200 ಕ್ಕೂ ಹೆಚ್ಚು ಹೊಸ ನಗರಗಳು ಮತ್ತು ಪಟ್ಟಣಗಳ ಗ್ರಾಹಕರು ಫ್ಲಿಪ್ ಕಾರ್ಟ್ ನಲ್ಲಿ ಮೊದಲ ಬಾರಿಗೆ ದಿನಸಿ ಪದಾರ್ಥಗಳನ್ನು ಖರೀದಿಸಿದ್ದಾರೆ. ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಕೊಲ್ಕತ್ತಾ, ಲಕ್ನೋ, ಮುಂಬೈ, ಎನ್ ಸಿಆರ್ ಪಾಟ್ನಾ ಮತ್ತು ಪುಣೆಯಂತಹ ಪ್ರಮುಖ ನಗರಗಳ ಗ್ರಾಹಕರು ದಿನಸಿ ಪದಾರ್ಥಗಳನ್ನು ಹೆಚ್ಚಾಗಿ ಖರೀದಿಸುವಲ್ಲಿ ಆಸಕ್ತಿ ತೋರಿದ್ದಾರೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ, ದಿನಸಿ ವಿಭಾಗದಲ್ಲಿ ಆರ್ಡರ್ ಮತ್ತು ಆದಾಯದಲ್ಲಿ 2.3 ಪಟ್ಟು ಹೆಚ್ಚಳವಾಗಿದೆ.

National Startup Day ಫ್ಲಿಪ್‌ಕಾರ್ಟ್‌ ಲೀಪ್‌ನ 2ನೇ ಹಂತದ ಫ್ಲಾಗ್‌ಶಿಪ್‌ ಪ್ರೋಗ್ರಾಂ ಅರಂಭ, ಆಸಕ್ತರಿಂದ ಅರ್ಜಿ ಆಹ್ವಾನ!

ಇತ್ತೀಚಿಗೆ ಬಿಡುಗಡೆಯಾದ ‘How India Shops Online 2021’ ಎಂಬ ಹೆಸರಿನ ಫ್ಲಿಪ್ ಕಾರ್ಟ್ –ಬೇಯ್ನ್ ವರದಿ ಪ್ರಕಾರ, ದಿನಸಿ ಉತ್ಪನ್ನಗಳ ಮಾರಾಟ ವೇಗವಾಗಿ ಮುಂದುವರಿದಿದೆ ಮತ್ತು ಸಾಂಕ್ರಾಮಿಕದ ನಂತರವೂ ಈ ಬೆಳವಣಿಗೆ ಮುಂದುವರಿಯುತ್ತದೆ. ತನ್ನ ಪ್ಯಾನ್-ಇಂಡಿಯಾ ಗ್ರಾಹಕರಿಗೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ದಿನಸಿ ಉತ್ಪನ್ನಗಳನ್ನು ಪೂರೈಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ತನ್ನ ಫುಲ್ ಫಿಲ್ಮೆಂಟ್ ಸೆಂಟರ್ ಗಳು ಮತ್ತು ದಿನಸಿ ಪೂರೈಕೆ ಜಾಲವನ್ನು ಕಠಿಣ ರೀತಿಯಲ್ಲಿ ಗುಣಮಟ್ಟದ ನಿಯಂತ್ರಣಕ್ಕೆ ಒಳಪಡಿಸುತ್ತಿದೆ. ಫ್ಲಿಪ್ ಕಾರ್ಟ್ ಗ್ರಾಸರಿ ಪೂರೈಕೆ ಸೆಂರ್ ಗಳು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿವೆ ಮತ್ತು ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಒಳಪಡಿಸುವ ವ್ಯವಸ್ಥೆಯನ್ನು ಒಳಗೊಂಡಿವೆ.
 

click me!