National Girl Child Day: ಪ್ರತಿ ಹೆಣ್ಣಿಗೂ ಸ್ಫೂರ್ತಿಯ ಸೆಲೆ ಉದ್ಯಮ ರಂಗದ ಈ 7 ಮಹಿಳಾ ಸಾಧಕಿಯರು

By Suvarna News  |  First Published Jan 24, 2022, 2:23 PM IST

ಇಂದು (ಜ.24) ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಹೆಣ್ಣು ಮನೆಯನ್ನಷ್ಟೇ ಅಲ್ಲ, ಉದ್ಯಮವನ್ನೂ ಪುರುಷನಿಗಿಂತಲೂ ಸಾಮರ್ಥ್ಯವಾಗಿ ನಿಭಾಯಿಸಬಲ್ಲಳು ಎಂಬುದನ್ನು ಕೆಲವು ಮಹಿಳೆಯರು ಜಗತ್ತಿಗೆ ಮನದಟ್ಟು ಮಾಡಿಸಿದ್ದಾರೆ. ಅಂಥ ಯಶಸ್ವಿ ಮಹಿಳೆಯರ ಪಟ್ಟಿಯಲ್ಲಿ ಈ 7 ಭಾರತೀಯ ಸಾಧಕಿಯರೂ ಸೇರಿದ್ದಾರೆ.ಇವರ ಕಥೆ ಸಾಧನೆಯ ಹಾದಿಯಲ್ಲಿ ಮುನ್ನುಗ್ಗೋ ಅನೇಕ ಹೆಣ್ಣುಮಕ್ಕಳಿಗೆ ಪ್ರೇರಣೆಯ ದೀವಟಿಗೆ. 


Business Desk: ಇಂದು (ಜ.24) ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ( National Girl Child Day).ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ 2008ರಿಂದ ಪ್ರತಿವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸುತ್ತಿದೆ. ದೇಶದ ಹೆಣ್ಣುಮಕ್ಕಳಿಗೆ ಎಲ್ಲ ವಿಧದ ಬೆಂಬಲ ಹಾಗೂ ಅವಕಾಶಗಳನ್ನು ನೀಡೋದು ಈ ದಿನದ ಉದ್ದೇಶ.  ಈ ಸಂದರ್ಭದಲ್ಲಿ ಪ್ರತಿದಿನ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗೋ ಭಾರತೀಯ ಮಹಿಳಾ ಸಾಧಕಿಯರನ್ನು ನೆನಪಿಸಿಕೊಳ್ಳದಿದ್ರೆ ಹೇಗೆ?  ಉದ್ಯಮ ಕ್ಷೇತ್ರದ 7 ಮಹಿಳಾ ಸಾಧಕಿಯರು ಹಾಗೂ ಅವರ ಸಾಧನೆಯ ಕಿರುಚಿತ್ರಣ ಇಲ್ಲಿದೆ. 

ಫಲ್ಗುಣಿ ನಾಯರ್‌
ನಾಯಿಕಾ (Nykaa)ಕಾಸ್ಮೆಟಿಕ್ಸ್‌ ಕಂಪನಿ ಸಂಸ್ಥಾಪಕಿ ಫಲ್ಗುಣಿ ನಾಯರ್ (Falguni Nayar) ಸ್ವ ಉದ್ಯಮದ ಕನಸು ಕಾಣುತ್ತಿರೋ ಭಾರತೀಯ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಸ್ವಂತ ಪರಿಶ್ರಮದಿಂದ ಶೃಂಗಾರ ಉತ್ಪನ್ನಗಳ ಸಂಸ್ಥೆ ಪ್ರಾರಂಭಿಸಿರೋ ಫಲ್ಗುಣಿ ನಾಯರ್, ಅಮೆರಿಕ ಮೂಲದ ಪ್ರಖ್ಯಾತ ನಿಯತಕಾಲಿಕಾ ಫೋಬ್ಸ್(Forbes)ಇತ್ತೀಚೆಗೆ ಪ್ರಕಟಿಸಿರುವ ಜಗತ್ತಿನ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ 88ನೇ ಸ್ಥಾನ ಗಿಟ್ಟಿಸಿಕೊಡಿದ್ದಾರೆ. ಮ್ಯಾನೇಜ್‌ಮೆಂಟ್‌ ಪದವೀಧರೆಯಾಗಿರೋ ನಾಯರ್, ಹಲವು ವರ್ಷಗಳ ಕಾಲ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದರು. 2012ರಲ್ಲಿ 50ನೇ ವರ್ಷಕ್ಕೆ ಕಾಲಿಡುವುದಕ್ಕೆ ಕೆಲವೇ ದಿನಗಳು ಬಾಕಿಯಿರೋವಾಗ, ಉದ್ಯೋಗ ತೊರೆದು ನಾಯಿಕಾ (Nykaa)ಎಂಬ ಶೃಗಾರ ಸಾಮಗ್ರಿಗಳ ಕಂಪನಿ ಸ್ಥಾಪಿಸಿದರು. 

Tap to resize

Latest Videos

undefined

Koo App FY21: ಜಾಹೀರಾತುಗಳಿಗಾಗಿ ರೂ. 7 ಕೋಟಿ ಖರ್ಚು ಮಾಡಿದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್!

ಗೀತಾ ಗೋಪಿನಾಥ್
ಕನ್ನಡತಿ, ಮೈಸೂರು ಮೂಲದ ಗೀತಾ ಗೋಪಿನಾಥ್ (Gita Gopinath) ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞೆ. ಇತ್ತೀಚೆಗೆ ಅವರಿಗೆ ಬಡ್ತಿ ನೀಡಿ, ಸಂಸ್ಥೆಯ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಲಾಗಿದೆ.  ಗೀತಾ ಕಳೆದ ಮೂರು ವರ್ಷಗಳಿಂದ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾರ್ವರ್ಡ್ ವಿವಿಯಲ್ಲಿ ಪ್ರೊಫೆಸರ್ ಹುದ್ದೆಗೆ ಏರಿದ ವಿಶ್ವದ ಮೂರನೇ ಮಹಿಳೆ ಮತ್ತು ನೊಬೆಲ್ ಪುರಸ್ಕೃತ ಭಾರತೀಯ ಅಮರ್ಥ್ಯ ಸೇನ್ ಬಳಿಕ ಇಂಥ ಹಿರಿಮೆ ಪಡೆದ ಏಕೈಕ ಭಾರತೀಯ ಸಂಜಾತೆ ಎಂಬ ಗೌರವಕ್ಕೆ ಕೂಡ ಗೀತಾ ಪಾತ್ರರಾಗಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಆರ್ಥಿಕ ಸಲಹೆಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಕಿರಣ್ ಮಜುಂದಾರ್ ಶಾ
ಬೆಂಗಳೂರು ಮೂಲದ ಔಷಧ ತಯಾರಿಕಾ ಕಂಪನಿ ‘ಬಯೋಕಾನ್‌’(Biocon) ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ( Kiran Mazumdar-Shaw) ಭಾರತದ ಔಷಧ ತಯಾರಿಕಾ ವಲಯದ ಅತ್ಯಂತ ಪ್ರಭಾವಿ ನಾಯಕಿ. 1978ರಲ್ಲಿ ಕೇವಲ ಇಬ್ಬರು ಉದ್ಯೋಗಿಗಳೊಂದಿಗೆ ಪ್ರಾರಂಭಿಸಿದ ಬಯೋಕಾನ್ ಸಂಸ್ಥೆ ಇಂದು 11,000 ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. 50,000 ಕೋಟಿ ರೂ.ಗಿಂತಲೂ ಹೆಚ್ಚಿನ ಮಾರುಕಟ್ಟೆ ಕ್ಯಾಪಿಟಲ್ ಹೊಂದಿದೆ. ಫೋಬ್ಸ್(Forbes) ಇತ್ತೀಚೆಗೆ ಪ್ರಕಟಿಸಿರುವ ಜಗತ್ತಿನ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಕಿರಣ್ ಮಜುಂದಾರ್ ಶಾ 72ನೇ ಸ್ಥಾನದಲ್ಲಿದ್ದಾರೆ.

ಸುಧಾಮೂರ್ತಿ
ಸುಧಾಮೂರ್ತಿ (Sudha Murty) ಭಾರತದ ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಒಬ್ಬರು. ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆಯಾಗಿ 25 ವರ್ಷಗಳ ಕಾಲ ಸಮಾಜದ ವಿವಿಧ ಸ್ತರದ ಜನರ ಸಮಸ್ಯೆಗಳಿಗೆ ಆರ್ಥಿಕ ನೆರವು ಒದಗಿಸಿದ್ದಾರೆ. 2021ರ ಡಿಸೆಂಬರ್ 31ರಂದು ಇನ್ಫೋಸಿಸ್ ಫೌಂಡೇಷನ್ (Infosys Foundation) ಅಧ್ಯಕ್ಷೆ ಸ್ಥಾನದಿಂದ ನಿವೃತ್ತಿಯಾಗಿರೋ ಸುಧಾಮೂರ್ತಿ, 'ಮೂರ್ತಿ ಫೌಂಡೇಷನ್'(Murty Foundation) ಎಂಬ ತಮ್ಮ ಸ್ವಂತ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಅದರ ಮೂಲಕ ಸಮಾಜಸೇವೆ ಮುಂದುವರಿಸಲಿದ್ದಾರೆ. ಇವರು ಉತ್ತಮ ಬರಹಗಾರ್ತಿಯೂ ಆಗಿದ್ದು, ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. 

Business Woman : ಬೇರೆಯವರ ವಾರ್ಡ್ರೋಬ್ ಕ್ಲೀನ್ ಮಾಡಿ ಗಳಿಸ್ತಾಳೆ 50 ಸಾವಿರ..!

ಇಂದ್ರಾ   ನೂಯಿ
ಪೆಪ್ಸಿಕೋ (PepsiCo) ಮಾಜಿ ಸಿಇಒ (CEO) ಇಂದ್ರಾ  ನೂಯಿ (Indra Nooyi) ಜಗತ್ತಿನ ಅತ್ಯಂತ ಪ್ರಭಾವಿ ನಾಯಕಿಯರಲ್ಲಿ ಒಬ್ಬರು. ಬಹುರಾಷ್ಟ್ರೀಯ ಕಂಪನಿಯೊಂದರ ಜಾಗತಿಕ ಸಿಇಒ ಪಟ್ಟಕ್ಕೇರಿದ ಪ್ರಥಮ ಭಾರತೀಯ ಮಹಿಳೆ ಕೂಡ ಹೌದು. ಪೆಪ್ಸಿಕೋದಲ್ಲಿ 24 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ನೂಯಿ, 12 ವರ್ಷಗಳ ಕಾಲ ಅದರ ಸಿಇಒ ಆಗಿದ್ದರು. ನೂಯಿ ಸಿಇಒ ಆಗಿದ್ದ ಅವಧಿಯಲ್ಲಿ ಪೆಪ್ಸಿಕೋ ಆದಾಯ 35 ಬಿಲಿಯನ್ ಡಾಲರ್ ನಿಂದ 63.5 ಬಿಲಿಯನ್ ಡಾಲರ್ ಗೆ ಹೆಚ್ಚಳಗೊಂಡಿತ್ತು. 

ಲೀನಾ ನಾಯರ್ 
ಲೀನಾ ನಾಯರ್ (Leena Nair) ಇತ್ತೀಚೆಗಷ್ಟೇ ಫ್ರಾನ್ಸ್ ನ(France) ಪ್ರತಿಷ್ಠಿತ ಫ್ಯಾಷನ್ ಸಂಸ್ಥೆ ಚಾನೆಲ್(Chanel)ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ (CEO) ನೇಮಕಗೊಂಡಿದ್ದಾರೆ.  ಇಂದ್ರಾ ನೂಯಿ ಬಳಿಕ ಇಂಥ ಪ್ರತಿಷ್ಠಿತ ಹುದ್ದೆಗೇರಿದ ಎರಡನೇ ಭಾರತೀಯ ಮಹಿಳೆ ಇವರಾಗಿದ್ದಾರೆ. 52 ವರ್ಷದ ಲೀನಾ, 30 ವರ್ಷಗಳ ಕಾಲ ಆಂಗ್ಲೋ-ಡಚ್ ನ ಪ್ರಮುಖ ಎಫ್ಎಂಸಿಜೆ( FMCG)ಕಂಪನಿ ಯುನಿಲಿವರ್ ನಲ್ಲಿ (Unilever) ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿ (CHRO)ಕಾರ್ಯನಿರ್ವಹಿಸಿದ್ದಾರೆ.  ಯುನಿಲಿವರ್ ಸಂಸ್ಥೆಯ ಮೊದಲ ಮಹಿಳಾ ಮಾನವ ಸಂಪನ್ಮೂಲ ಅಧಿಕಾರಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ರೋಶ್ನಿ ನಡಾರ್ ಮಲ್ಹೋತ್ರಾ 
ಎಚ್‌ಸಿಎಲ್ ಟೆಕ್ನಾಲಜೀಸ್ ಕಂಪನಿಯ ಚೇರ್‌ಪರ್ಸನ್ ರೋಶ್ನಿ ನಡಾರ್ ಮಲ್ಹೋತ್ರಾ, ಭಾರತದಲ್ಲಿ ಐಟಿ ಕಂಪನಿಯೊಂದನ್ನು ಮುನ್ನಡೆಸುತ್ತಿರೋ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈಕೆ ಎಚ್‌ಸಿಎಲ್ ಸಂಸ್ಥಾಪಕ ಬಿಲಿಯನೇರ್ ಶಿವ ನಡಾರ್ ಪುತ್ರಿ. 2009ರಲ್ಲಿ ಎಚ್‌ಸಿಎಲ್ ಕಂಪನಿಗೆ ಸೇರಿದ ರೋಶ್ನಿ,  ಒಂದೇ ವರ್ಷದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ, 27ನೇ ವಯಸ್ಸಿಗಾಗಲೇ ಸಿಇಒ ಆದರು. ಫೋರ್ಬ್ಸ್‌ನ ವಿಶ್ವದ 100 ಪವರ್‌ಫುಲ್ ಮಹಿಳೆಯರ ಪಟ್ಟಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ರೋಶ್ನಿ ಸ್ಥಾನ ಗಿಟ್ಟಿಸಿಕೊಂಡು ಬಂದಿದ್ದಾರೆ. 

click me!