ಫ್ಲಿಪ್‌ಕಾರ್ಟ್ ಬೆಂಬಲಿತ ಸೂಪರ್.ಮನಿ, ಯುಪಿಐ ಮೂಲಕ FDಗಳನ್ನು ಬುಕ್ ಮಾಡಲು ಅನುಮತಿಸುವ ಸೂಪರ್ FDಯನ್ನು ಪ್ರಾರಂಭಿಸಿದೆ. ಬಳಕೆದಾರರು ಕೇವಲ ₹1000 ರಿಂದ ಹೂಡಿಕೆ ಮಾಡಬಹುದು ಮತ್ತು 9.5% ವರೆಗೆ ಬಡ್ಡಿಯನ್ನು ಗಳಿಸಬಹುದು.
ಬೆಂಗಳೂರು (ನ.21):ಫ್ಲಿಪ್‌ಕಾರ್ಟ್ ಬೆಂಬಲಿತ super.money ಇಂದು ಸೂಪರ್ ಎಫ್ ಡಿಯನ್ನು ಆರಂಭಿಸಿದೆ. ಇದು ಸಂಪೂರ್ಣ ಡಿಜಿಟಲ್ ಉಳಿತಾಯ ಉತ್ಪನ್ನವಾಗಿದ್ದು, ನಿಶ್ಚಿತ ಠೇವಣಿಗೆ ಯುಪಿಐ ಅನ್ನು ಸುಲಭಗೊಳಿಸುವ ಉತ್ಪನ್ನ ಇದಾಗಿದೆ. ಸಂಪೂರ್ಣ ಡಿಜಿಟಲ್ (2 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ), ಸರಳ ಮತ್ತು ಅತ್ಯುತ್ತಮವಾದ ರೀತಿಯಲ್ಲಿ ನಿಶ್ಚಿತ ಠೇವಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಉದ್ದೇಶವನ್ನು ಕಂಪನಿ ಹೊಂದಿದೆ. ಸೂಪರ್.ಮನಿಯ ಬಳಕೆದಾರರು ಪ್ರಸ್ತುತ ಆರ್ ಬಿಐ ಅನುಮೋದಿಸಿರುವ ಐದು ಬ್ಯಾಂಕುಗಳನ್ನು ಎಫ್‌ಡಿಗಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಸೂಪರ್.ಮನಿಯ ಎಲ್ಲಾ ಎಫ್ ಡಿಗಳಿಗೆ ಡಿಐಸಿಜಿಸಿಯಿಂದ 5,00,000 ರೂಪಾಯಿವರೆಗೆ ವಿಮೆಯ ಸೌಲಭ್ಯವಿರುತ್ತದೆ.
ಭಾರತದ ಯುವ ಸಮುದಾಯವನ್ನು ಉಳಿತಾಯಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉದ್ಯಮದಲ್ಲಿ ಇದೇ ಮೊದಲ ಬಾರಿಗೆ ಸೂಪರ್ ಎಫ್ ಡಿಯನ್ನು ಪರಿಚಯಿಸಲಾಗಿದೆ. ಈ ಸೂಪರ್ ಎಫ್ ಡಿಯೊಂದಿಗೆ ಬಳಕೆದಾರರು ಕೇವಲ 1000 ರೂಪಾಯಿಯಿಂದ ಎಫ್ ಡಿಯನ್ನು ಬುಕ್ ಮಾಡಬಹುದಾಗಿದೆ ಮತ್ತು ಶೇ.9.5 ರವರೆಗೆ ಬಡ್ಡಿಯನ್ನು ಗಳಿಸಬಹುದಾಗಿದೆ. ಹೊಸ ಪೀಳಿಗೆಯ ಭಾರತೀಯ ಹೂಡಿಕೆದಾರರಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಈ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಬಳಕೆದಾರರು ಡಿಜಿಟಲ್ ಮತ್ತು ಹಣಕಾಸು ಸ್ನೇಹಿಯನ್ನಾಗಿ ಬಳಕೆ ಮಾಡಬಹುದಾಗಿದೆ. ಈ ಉತ್ಪನ್ನವು ಬಳಕೆದಾರರಿಗೆ ಉಳಿತಾಯ ಮಾಡಲು ಮತ್ತು ಹೂಡಿಕೆ ಪ್ರಯಾಣವನ್ನು ಆರಂಭಿಸಲು ನೆರವಾಗುತ್ತದೆ.
ಈ ಹೊಸ ಉತ್ಪನ್ನದ ಬಗ್ಗೆ ಮಾತನಾಡಿದ ಸೂಪರ್.ಮನಿಯ ಸಂಸ್ಥಾಪಕ & ಸಿಇಒ ಪ್ರಕಾಶ್ ಸಿಕಾರಿಯಾ ಅವರು, 'ಯುಪಿಐ ಮೂಲಕ ಎಫ್ ಡಿಯನ್ನು ಆರಂಭಿಸುತ್ತಿರುವ ಮೊಟ್ಟ ಮೊದಲ ಕಂಪನಿಯಾಗುತ್ತಿರುವುದಕ್ಕೆ ನಮಗೆ ಅತೀವ ಸಂತಸವೆನಿಸುತ್ತಿದೆ. ನಮ್ಮ ಈ ಉತ್ಪನ್ನವು ಯುವ ಭಾರತೀಯರನ್ನು ಉಳಿತಾಯ ಮತ್ತು ಹೂಡಿಕೆ ಮಾಡಲು ಪ್ರೇರೇಪಿಸುತ್ತದೆ. ಆಕರ್ಷಕ ಬಡ್ಡಿ, ಸರಳ ಮತ್ತು ತಡೆರಹಿತ ಬಳಕೆ ಪ್ರಕ್ರಿಯೆಗಳನ್ನು ನೀಡುವ ಮೂಲಕ ಸೂಪರ್ ಎಫ್ ಡಿ ಹೂಡಿಕೆಯಲ್ಲಿ ಅತ್ಯಂತ ಕಡಿಮೆ ಅಪಾಯ, ಹೆಚ್ಚು ಆದಾಯ ತರುವಂತಹ ಉತ್ಪನ್ನವಗುವ ಮೂಲಕ ಬಳಕೆದಾರರು ಹೂಡಿಕೆ ಮಾಡಲು ಉತ್ಸಾಹ ತುಂಬುತ್ತದೆ. ಹೊಸ ಪೀಳಿಗೆಯ ಹೂಡಿಕೆದಾರರು ತಮ್ಮ ಆದಾಯದಲ್ಲಿನ ಕೆಲ ಭಾಗದಷ್ಟು ಹಣವನ್ನು ಠೇವಣಿ ಮಾಡುವಂತೆ ಮಾಡುವ ಭಾರತೀಯ ರಿಸರ್ವ್ ಬ್ಯಾಂಕಿನ ದೃಷ್ಟಿಗೆ ಪೂರಕವಾಗಿ ಈ ಉತ್ಪನ್ನವನ್ನು ವಿನ್ಯಾಸಗೊಳಿಸಿ, ಪರಿಚಯಿಸಲಾಗಿದೆ’’ ಎಂದು ತಿಳಿಸಿದರು.
ಭಾರತ ಸರ್ಕಾರದ ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಜನಸಾಮಾನ್ಯರಲ್ಲಿ ನಿವ್ವಳ ಆರ್ಥಿಕ ಉಳಿತಾಯ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. 2020-21 ಮತ್ತು 2022-23 ರ ಅವಧಿಯಲ್ಲಿ ಈ ವರ್ಗದ ಉಳಿತಾಯದಲ್ಲಿ 9 ಲಕ್ಷ ಕೋಟಿ ರೂಪಾಯಿಗೂ ಅಧಿಕದಷ್ಟು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾಲ ಮತ್ತು ಠೇವಣಿ ಬೆಳವಣಿಗೆ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಎದುರಾಗಿರುವ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸೂಪರ್ ಎಫ್ ಡಿ ಹೆಜ್ಜೆ ಇಟ್ಟಿದೆ. ಈ ಉತ್ಪನ್ನವು ಹೂಡಿಕೆದಾರರಿಗೆ ಹಣದುಬ್ಬರದಿಂದ ಎದುರಾಗುವ ನಷ್ಟದಿಂದ ರಕ್ಷಣೆ ಮತ್ತು ತಾವು ಹೂಡಿಕೆ ಮಾಡಿದ ಹಣಕ್ಕೆ ಸ್ಥಿರವಾದ ಆದಾಯ ಬರುವುದನ್ನು ಖಾತರಿಪಡಿಸುತ್ತದೆ.
undefined
ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 7 ನಗರಗಳಲ್ಲಿ ಮನೆ ಖರೀದಿ ದುಬಾರಿ!
ಸೂಪರ್ ಎಫ್ ಡಿಯೊಂದಿಗೆ ಸೂಪರ್.ಮನಿ ತನ್ನೆಲ್ಲಾ 7 ಮಿಲಿಯನ್ ಬಳಕೆದಾರರಿಗೆ ತನ್ನ ಮೊದಲ ಹೂಡಿಕೆ ಉತ್ಪನ್ನವನ್ನು ಪರಿಚಯಿಸುತ್ತಿದೆ. ಗ್ರಾಹಕರು ಅತ್ಯಂತ ಸುಲಭವಾಗಿ ಇಕೆವೈಸಿಯನ್ನು ಪೂರ್ಣಗೊಳಿಸುವ ಮೂಲಕ ಈ ಉತ್ಪನ್ನವನ್ನು ಪಡೆದುಕೊಳ್ಳಬಹುದಾಗಿದೆ.
ಬಿಜೆಪಿ MLA ಸಿಕೆ ರಾಮಮೂರ್ತಿ ನನ್ನ ಟೀಕಿಸಿದ್ರು, ಅದಕ್ಕೆ ಜಯನಗರಕ್ಕೆ ಅನುದಾನ ನಿಲ್ಲಿಸಿದ್ದೆ: ಡಿಕೆ ಶಿವಕುಮಾರ್
ಸೂಪರ್ ಎಫ್ ಡಿಯಲ್ಲಿ ಹೂಡಿಕೆ ಮಾಡಲು 4 ಸರಳ ಹಂತಗಳು:
1. super.money ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
2. ಎಫ್ ಡಿಗಾಗಿ ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಿ.
3. ಇಕೆವೈಸಿಯನ್ನು ಮಾಡಿ,
4. ಠೇವಣಿಯನ್ನು ಸೆಟ್ ಮಾಡಿ, ಮತ್ತು ಕೆಲವು ಪ್ರಕರಣಗಳಲ್ಲಿ ವಿಕೆವೈಸಿ ಆಯ್ಕೆಗಳಲ್ಲಿ ಒಂದಾಗಿರುತ್ತದೆ.