ಜನವರಿಯಿಂದ ಫ್ರಿಜ್‌ ಬೆಲೆ 6000 ರು.ವರೆಗೆ ಏರಿಕೆಯಾಗುವ ಸಂಭವ

By Web Desk  |  First Published Nov 23, 2019, 4:06 PM IST

ಜನವರಿಯಿಂದ ಫ್ರಿಜ್‌ ಬೆಲೆ 6000 ರು.ವರೆಗೆ ಏರಿಕೆಯಾಗುವ ಸಂಭವ| ಜನವರಿಯಿಂದ ಜಾರಿಗೆ ಬರಲಿದೆ ನೂತನ ಇಂಧನ ಕ್ಷಮತೆಯ ನಿಯಮ


ನವದೆಹಲಿ[ನ.23]: ಮುಂದಿನ ವರ್ಷದ ಜನವರಿಯಿಂದ ಜಾರಿಗೆ ಬರಲಿರುವ ನೂತನ ಇಂಧನ ಕ್ಷಮತೆಯ ನಿಯಮಗಳ ಪರಿಣಾಮ ಫೈ-ಸ್ಟಾರ್‌ ರೆಫ್ರಿಜರೇಟರ್‌ಗಳ ಉತ್ಪಾದನಾ ವೆಚ್ಚವು 6000 ರು.ವರೆಗೂ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಗ್ರಾಹಕ ಎಲೆಕ್ಟ್ರಾನಿಕ್ಸ್‌ ಮತ್ತು ಉಪಕರಣಗಳ ತಯಾರಿಕರ ಸಂಘಟನೆ(ಸೀಮಾ) ತಿಳಿಸಿದೆ.

ಲೇಬಲ್ಲಿಂಗ್‌ ಮಾರ್ಗಸೂಚಿಗಳ ಅನ್ವಯ ಫೈ-ಸ್ಟಾರ್‌ ರೇಂಜ್‌ನ ರೆಫ್ರಿಜರೇಟರ್‌ಗಳ ಕೂಲಿಂಗ್‌ ಬಳಸಲಾಗುತ್ತಿದ್ದ ಕೂಲಿಂಗ್‌ಗಾಗಿ ಸಾಂಪ್ರದಾಯಿಕ ನಿರ್ವಾತ ಫಲಕಗಳ ಬದಲಿಗೆ ವಾಕ್ಯೂಮ್‌ ಪ್ಯಾನಲ್‌ಗಳನ್ನು ಅಳವಡಿಸಿಕೊಳ್ಳಬೇಕು. ಇದು ಈ ಉದ್ಯಮದ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

Latest Videos

ಕೊಠಡಿ ಹವಾ ನಿಯಂತ್ರಣಗಳು(ಆರ್‌ಎಸಿ) ಹಾಗೂ ರೆಫ್ರಿಜರೇಟರ್‌ಗಳ ಸ್ಟಾರ್‌ ರೇಟಿಂಗ್‌ ಲೇಬಲ್‌ಗಳ ಬದಲಾವಣೆಯು 2020ರ ಜನವರಿಯಿಂದ ಜಾರಿಗೆ ಬರಲಿದ್ದು, ಫೈ-ಸ್ಟಾರ್‌ ಲೇಬಲ್‌ ರೆಫ್ರಿಜರೇಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಕಷ್ಟಕರವಾಗಿದೆ ಎಂದು ಸೀಮಾ ಹೇಳಿದೆ.

ಈ ಹಿನ್ನೆಲೆಯಲ್ಲಿ ಫೈ ಸ್ಟಾರ್‌ ರೆಫ್ರಿಜರೇಟರ್‌ಗಳಿಗೆ ವಾಕ್ಯೂಮ್‌ ಪ್ಯಾನಲ್‌ ಅಳವಡಿಸಬೇಕಾಗಿರುವ ಕಾರಣ ರೆಫ್ರಿಜರೇಟರ್‌ ದರ 5000-6000 ರು.ವರೆಗೂ ಹೆಚ್ಚಳವಾಗುತ್ತದೆ ಎಂದು ಹೇಳಲಾಗಿದೆ.

ನವೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!