ಭಾರತಕ್ಕೆ ಅಪಾರ ಸಾಮರ್ಥ್ಯವಿದೆ. 13 ಕೋಟಿ ಜನರಿದ್ದಾರೆ. ನೂತನ ತಂತ್ರಜ್ಞಾನವು ಆವಿಷ್ಕಾರಗೊಂಡು ಅಭಿವೃತ್ತ ಸಾಗುತ್ತಿದೆ, ಇಲ್ಲಿ ಜಾಗತಿಕವಾಗಿ ಸ್ಪರ್ಧೆ ಒಡ್ಡುವ ಸಂಸ್ಥೆಗಳಿವೆ. ಅಲ್ಪಾವಧಿ ಅಭಿವೃದ್ಧಿ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಮುಂದಿನ ದಶಕದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ವಿಕಾಸ ಹೊಂದುವ ಅಂತಃಸತ್ವ ಭಾರತಕ್ಕಿದೆ. ಇದು ಜನರನ್ನು ಬಡತನದಿಂದ ಮೇಲೆತ್ತಲು ಮತ್ತು ಆದ್ಯತಾ ಕ್ಷೇತ್ರಗಳಾದ ಆರೋಗ್ಯ, ಶಿಕ್ಷಣ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಚೈತನ್ಯವನ್ನು ಸರ್ಕಾರಕ್ಕೆ ಒದಗಿಸಲಿದೆ.
ಇತ್ತೀಚೆಗೆ ನವದೆಹಲಿಗೆ ಅಮೆರಿಕದ ಪ್ರಸಿದ್ಧ ದಾನಿ, ಸಾಫ್ಟ್‌ವೇರ್ ದಿಗ್ಗಜ ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಬಳಿಕ ಟೈಮ್ಸ್ ನೌ ಪತ್ರಿಕೆಗೆ ಸಂದರ್ಶನ ನೀಡಿದ್ದ ಅವರು ಭಾರತದ ಆರ್ಥಿಕ ಪ್ರಗತಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಹೇಗಿರಬೇಕು ಎಂದು ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.
ಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ. ಆದರೆ ನೀವು ಮಾತ್ರ ಭಾರತದ ಭವಿಷ್ಯದಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದೀರಿ. ಏನಿದರ ಅರ್ಥ?
ಭಾರತಕ್ಕೆ ಅಪಾರ ಸಾಮರ್ಥ್ಯವಿದೆ. 13 ಕೋಟಿ ಜನರಿದ್ದಾರೆ. ನೂತನ ತಂತ್ರಜ್ಞಾನವು ಆವಿಷ್ಕಾರಗೊಂಡು ಅಭಿವೃತ್ತ ಸಾಗುತ್ತಿದೆ, ಇಲ್ಲಿ ಜಾಗತಿಕವಾಗಿ ಸ್ಪರ್ಧೆ ಒಡ್ಡುವ ಸಂಸ್ಥೆಗಳಿವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಬೇಕಾದ ಆದ್ಯತೆ ಹೆಚ್ಚುತ್ತಿದೆ. ನಮ್ಮ ಸಂಸ್ಥೆಗೆ ಭಾರತದೊಂದಿಗೆ 20ಗಳ ವರ್ಷ ಭಾಂಧವ್ಯವಿದೆ. ಶಿಶು ಮರಣ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. ನಾವು ಕಳೆದ 10 ವರ್ಷ ಹಿಂದೆ ಬಿಹಾರ ಮುಖ್ಯಮಂತ್ರಿ ಅವರೊಟ್ಟಿಗೆ ಕೈಜೋಡಿಸಿ ಲಸಿಕೆ ಕಾರ‍್ಯಕ್ರಮವನ್ನು ಅನುಷ್ಠಾನಗೊಳಿಸಿದ್ದೆವು.
'ದೇಶಕ್ಕೆ ಆರ್ಥಿಕ ಸಂಕಷ್ಟವಿದೆ ಎಂಬುದನ್ನು ಮೊದಲು ಮೋದಿ ಒಪ್ಪಿಕೊಳ್ಳಲಿ'
ಇದರಿಂದ ಇತರ ರಾಜ್ಯಗಳೂ ಪ್ರೇರೇಪಣೆಗೊಂಡು ತಮ್ಮ ರಾಜ್ಯದಲ್ಲೂ ಅನುಷ್ಠಾನಗೊಳಿಸಿದವು. ಅಲ್ಪಾವಧಿ ಅಭಿವೃದ್ಧಿ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಮುಂದಿನ ದಶಕದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ವಿಕಾಸ ಹೊಂದುವ ಅಂತಃಸತ್ವ ಭಾರತಕ್ಕಿದೆ. ಇದು ಜನರನ್ನು ಬಡತನದಿಂದ ಮೇಲೆತ್ತಲು ಮತ್ತು ಆದ್ಯತಾ ಕ್ಷೇತ್ರಗಳಾದ ಆರೋಗ್ಯ, ಶಿಕ್ಷಣ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಚೈತನ್ಯವನ್ನು ಸರ್ಕಾರಕ್ಕೆ ಒದಗಿಸಲಿದೆ.
ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿರುವವರತ್ತ ಭಾರತ ಗಮನ ಹರಿಸಬೇಕು. ಏಕೆಂದರೆ ಇದು ನಮಗೆ ಅಥವಾ ಇಡೀ ದೇಶಕ್ಕೇ ಅಪಾಯಕಾರಿ. ಇದರ ಹೊರತಾಗಿ ಬಂಡವಾಳ ಹೂಡಿಕೆ ಹೆಚ್ಚಬೇಕು. ಆದರೆ ಭಾರತದ ಒಟ್ಟಾರೆ ಸ್ಥಿತಿಯು ಉತ್ತಮವಾಗಿಯೇ ಇದೆ. ಆತಂಕಪಡಬೇಕಿಲ್ಲ.
ಪ್ರಧಾನಿ ನರೇಂದ್ರ ಮೋದಿ 2024ರ ಒಳಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದು ಸಾಧ್ಯವೇ?
ನಾನು ಅರ್ಥಶಾಸ್ತ್ರಜ್ಞ ಅಲ್ಲ. ಖಂಡಿತವಾಗಿಯೂ ಭಾರತ ಈಗಿರುವ ಆರ್ಥಿಕತೆಯನ್ನು 2024ರ ಒಳಗಾಗಿ 5 ಟ್ರಿಲಿಯನ್ ಡಾಲರ್‌ನತ್ತ ಕೊಂಡೊಯ್ಯಬಹುದು. ಈ ಹಿಂದೆ 10% ಹೆಚ್ಚು ಪ್ರಗತಿ ಸಾಧಿಸಿದಾಗಲೂ ಯಾರೂ ಭಾರತಕ್ಕೆ ಇದು ಸಾಧ್ಯ ಎಂದು ನಂಬಿರಲಿಲ್ಲ. ಬಂಡವಾಳ ಹೂಡಿಕೆ ಮೇಲೆ ಭಾರತ ಇಟ್ಟಪ್ರೀತಿ, ಪವಾಡ ಎನಿಸುವ ಅನಿಯಂತ್ರಣ ನೀತಿಗಳು, ಕಾರ್ಮಿಕ ನೀತಿ, ಭೂ ಕಾನೂನುಗಳು ಭಾರತದ ಪ್ರಗತಿಗೆ ಕಾರಣವಾದವು.
‘ಮಹಾರಾಜ’ನ ಮಾರಾಟ! ಸತತ ನಷ್ಟದಲ್ಲಿರುವ ಏರ್‌ಇಂಡಿಯಾವನ್ನು ಖರೀದಿಸುವವರು ಯಾರು?
ಬಹುಶಃ ಭಾರತ ಈಗುರಿಯನ್ನು 2024ರ ಒಳಗಾಗಿ ಅಥವಾ ಅದಕ್ಕಿಂತ ಸ್ವಲ್ಪ ತಡವಾಗಿಯಾದರೂ ತಲುಪೇ ತಲುಪುತ್ತದೆ. ನಿಮ್ಮಲ್ಲಿ ಅತ್ಯುತ್ತಮ ನಾಯರಿದ್ದಾರೆ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಭಾರತ ಇನ್ನಷ್ಟುಡಿಜಿಟಲೀಕರಣಗೊಂಡರೆ ಮತ್ತಷ್ಟುವಿಭಿನ್ನವಾಗಿ ಕಾಣಲಿದೆ. ಆದರೆ ಮುಂದಿನ ವರ್ಷ ಭಾರತದ ಆರ್ಥಿಕತೆ ಎತ್ತರಕ್ಕೆ ಅಥವಾ ಕೆಳಗೆ ಬರಬಹುದು ಎಂದು ನಾನು ಹೇಳುವುದಿಲ್ಲ. ಆದರೆ ನಾನು ತುಂಬಾ ಆತ್ಮವಿಶ್ವಾಸದಿಂದಿದ್ದೇನೆ.
ಅಭಿವೃದ್ಧಿ ಅಂದರೆ ಸುಸ್ಥಿರತೆ, ನ್ಯಾಯ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ. ಈ ಅಭಿವೃದ್ಧಿ ವೇಗವಾಗಿ ಮತ್ತು ನ್ಯಾಯಯುತವಾಗಿ ಇರಲು ಸಾಧ್ಯವೇ?
ಅದು ಸರ್ಕಾರಕ್ಕೆ ಬಿಟ್ಟಿದ್ದು. ಪ್ರಗತಿದಾಯಕ ತೆರಿಗೆ ವ್ಯವಸ್ಥೆ ಇದ್ದಲ್ಲಿ ಕಂಪನಿಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತವೆ. ಯಾವಾಗ ಕಂಪನಿಗಳು ಅತ್ಯುತ್ತಮ ಕಾರ‍್ಯದಲ್ಲಿ ತೊಡಗುತ್ತವೋ ಆಗ ಸರ್ಕಾರ ಅದರ ಲಾಭ ಪಡೆಯುತ್ತದೆ. ಆಗ ಮಹಿಳಾ ಸಂಘಗಳು, ಸ್ವ-ಸಹಾಯ ಸಂಘಗಳು ತಲೆ ಎತ್ತುತ್ತವೆ. ಹೆಚ್ಚೆಚ್ಚು ಲಸಿಕೆಗಳನ್ನು ಕೊಂಡುಕೊಳ್ಳಬಹುದು, ಹೆಚ್ಚೆಚ್ಚು ಡಾಕ್ಟರ್ ಮತ್ತು ಆರೋಗ್ಯ ಕ್ಷೇತ್ರದ ಸಹಾಯಕರನ್ನು ನೇಮಿಸಿಕೊಳ್ಳಬಹುದು.
ಇದೊಂದು ರೀತಿಯ ಚಕ್ರ. ಸರ್ಕಾರ ಕ್ರಮಬದ್ಧವಾದ ತೆರಿಗೆ ವ್ಯವಸ್ಥೆ ಹೊಂದಿದ್ದರೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಬಹುದು. ಸದ್ಯ ಭಾರತ ಇದೇ ಹಾದಿಯಲ್ಲಿದೆ. ಭಾರತ ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದೆ. ಹಾಗಾಗಿ ತನ್ನದೇ ಆದ ಸವಾಲು ಮತ್ತು ಅವಕಾಶಗಳನ್ನು ಹೊಂದಿದೆ.
ಶ್ರೀಮಂತರಿಗೆ ವಿಧಿಸುವ ಕಾರ್ಪೊರೇಟ್ ತೆರಿಗೆಯನ್ನು ಇತ್ತೀಚೆಗೆ ಭಾರತದಲ್ಲಿ ಕಡಿಮೆ ಮಾಡಲಾಗಿದೆ. ಆದರೂ ಉದ್ಯಮಿಗಳು ಇನ್ನಷ್ಟುತೆರಿಗೆ ಕಡಿತ ಮಾಡಬೇಕೆಂದು ಕೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಭಾರತ ಹೆಚ್ಚೆಚ್ಚು ತೆರಿಗೆಯನ್ನು ಸಂಗ್ರಹಿಸಬೇಕಾದ ಅಗತ್ಯವಿದೆ. ಆದರೆ ಭಾರತ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ತೊಡಗಿಸುತ್ತಿಲ್ಲ. 60% ಆರೋಗ್ಯ ಸೇವೆಯ ಖರ್ಚು ಜನರ ಜೇಬಿನಿಂದಲೇ ಖರ್ಚಾಗುತ್ತಿದೆ. ಎಲ್ಲಾ ದೇಶಗಳಲ್ಲೂ ಶ್ರೀಮಂತರು ಹೆಚ್ಚು ತೆರಿಗೆ ಪಾವತಿಸುತ್ತಾರೆ.
ಹೀಗೆ ಶ್ರೀಮಂತರಿಂದ ಸಂಗ್ರಹಿಸಿದ ತೆರಿಗೆಯನ್ನು ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಲಾಗುತ್ತದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರಕ್ಕೆ ಹೆಚ್ಚು ಹಣ ಬೇಕು. ತೆರಿಗೆ ಹೆಚ್ಚಳದಿಂದ ಸರ್ಕಾರ ಮೂಲಭೂತ ಸೌಕರ‍್ಯಗಳನ್ನು ಹೆಚ್ಚಿಸಬಹುದು.
ಆಧಾರ್ ವ್ಯವಸ್ಥೆ ವಿಶ್ವಕ್ಕೇ ಮಾದರಿ: ಬಿಲ್ ಗೇಟ್ಸ್ ಪ್ರಶಂಸೆ!
ಆಧಾರ್‌ನಿಂದ ಭಾರತದ ಪ್ರಗತಿ ಸಾಧ್ಯವೇ ಅಥವಾ ಖಾಸಗಿ ಹಕ್ಕು ಉಲ್ಲಂಘನೆ ಹಾಗೂ ಡೇಟಾ ಕದಿಯುವಿಕೆಯ ಅಪಾಯದಿಂದಾಗಿ ಮುಂದಿನ ದಿನಗಳಲ್ಲಿ ಇದು ಸಮಸ್ಯೆ ತಂದೊಡ್ಡಲಿದೆಯೇ?
ಆಧಾರ್ ಒಂದು ದೊಡ್ಡ ಆಸ್ತಿ. ಡಿಜಿಟಲ್ ಪೇಮೆಂಟ್ ಹೆಚ್ಚು ಮಾಡಲು ಇದನ್ನು ಅತ್ಯುತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ನಮ್ಮ ಸಂಸ್ಥೆ ಆರ್‌ಬಿಐನೊಂದಿಗೆ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದೆ. ಖಾಸಗಿ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು ಎಂದು ಕೇಳ್ಪಟ್ಟೆ. ಆದರೆ ಆಧಾರ್‌ನಿಂದ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಸರ್ಕಾರದ ಕಲ್ಯಾಣ ಕಾರ‍್ಯಕ್ರಮಗಳು ನೇರವಾಗಿ ಫಲಾನುಭವಿಗಳನ್ನು ತಲುಪುತ್ತವೆ. ಭ್ರಷ್ಟಾಚಾರ ಕಡಿಮೆಯಾಗುತ್ತದೆ.
ನಕಲಿ ಫಲಾನುಭವಿಗಳು ಸರ್ಕಾರ ಯೋಜನೆಗಳ ಉಪಯೋಗ ಪಡೆಯಲು ಸಾಧ್ಯವಾಗುವುದಿಲ್ಲ. ಇದು ಸರ್ಕಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. ಹಲವು ದೇಶಗಳ ಸರ್ಕಾರಗಳು ಹಣವನ್ನು ಸರಿಯಾದ ರೀತಿಯಲ್ಲಿ ವ್ಯಯಿಸುತ್ತಿಲ್ಲ. ಆದರೆ ಭಾರತ ನೇರ ನಗದು ವರ್ಗಾವಣೆ ಮೂಲಕ ಕಲ್ಯಾಣ ಕಾರ‍್ಯಕ್ರಮಗಳನ್ನು ನೇರವಾಗಿ ಅಗತ್ಯವಿದ್ದವರಿಗೆ ತಲುಪಿಸುತ್ತಿದೆ. ಈ ಡಿಜಿಟಲ್ ವ್ಯವಸ್ಥೆ ಆರೋಗ್ಯ ವಿಮೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಸಹಕಾರಿ. ಆಧಾರ ವ್ಯವಸ್ಥೆ ಹೊಂದಿರುವುದಕ್ಕೆ ಭಾರತ ನಿಜಕ್ಕೂ ಹೆಮ್ಮೆ ಪಡಬೇಕು.
ಬೆಜೋಸ್ ಹಿಂದಿಕ್ಕಿದ ಬಿಲ್‌ಗೇಟ್ಸ್ ವಿಶ್ವದ ನಂ.1 ಸಿರಿವಂತ!, ಅಂಬಾನಿಗೆ ಯಾವ ಸ್ಥಾನ?
-ಬೇರೆ ದೇಶಗಳ ಡಿಜಿಟಲ್ ವ್ಯವಸ್ಥೆಗೂ ಭಾರತಕ್ಕೂ ಏನು ವ್ಯತ್ಯಾಸವಿದೆ?
ಆಫ್ರಿಕನ್ ದೇಶಗಳಲ್ಲಿ ಈಗಲೂ ಕೇವಲ 40% ಜನರು ಮಾತ್ರ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಅಲ್ಲಿ ಶುಲ್ಕ ಹೆಚ್ಚಿರುತ್ತದೆ. ಸಣ್ಣಪುಟ್ಟವರ್ಗಾವಣೆಗೂ ಬ್ಯಾಂಕ್‌ಗೇ ತೆರಳಬೇಕು. ಆದರೆ ಭಾರತದಲ್ಲಿ ಡಿಜಿಟಲ್ ವರ್ಗಾವಣೆ ಶುಲ್ಕ ತೀರಾ ಕಡಿಮೆ ಇದೆ. ಕೆಲವೊಂದು ಸಂಪೂರ್ಣ ಉಚಿತವಾಗಿದೆ. ಭಾರತ ಫಿನಾನ್ಸ್, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಡಿಜಿಟಲೀಕರಣ ಮಾಡಿದ ಪ್ರವರ್ತಕ. ಭಾರತದೊಂದಿಗೆ ಇತರ ದೇಶಗಳು ಸಹಭಾಗಿತ್ವ ಹೊಂದಿದ್ದರೆ ಅವೂ ಸಾಕಷ್ಟುಉಪಯೋಗ ಪಡೆಯಲಿವೆ.
ನರೇಂದ್ರ ಮೋದಿ ಸ್ವಚ್ಛಭಾರತ್ ಮಿಷನ್ ಆರಂಭಿಸಿದ್ದಾರೆ. ಅದಕ್ಕೆ ಸ್ವತಃ ನೀವೇ ಮೊದಿ ಅವರಿಗೆ ಪ್ರಶಸ್ತಿ ನೀಡಿದ್ದೀರಿ. ಆದರೆ ಅದನ್ನೂ ಕೆಲವರು ಟೀಕಿಸಿದ್ದಾರಲ್ಲ?
ಸ್ವತಃ ಪ್ರಧಾನಿಯೇ ನೈರ್ಮಲ್ಯ ಕುರಿತಂತೆ ಮಹತ್ವಾಕಾಂಕ್ಷಿಯ ಗುರಿ ಹಾಕಿಕೊಂಡಿದ್ದಾರೆ. ಇದು ಪ್ರಶಂಸನಾರ್ಹ ಎಂಬುದರಲ್ಲಿ ಸಂದೇಹವೇ ಇಲ್ಲ. ನಾವು ಕೂಡ ನೈರ್ಮಲೀಕರಣದಲ್ಲಿ ಭಾಗಿಯಾಗಿದ್ದೇವೆ. ಅದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಮಾನವ ತ್ಯಾಜ್ಯ ವಿಲೇವಾರಿಯಲ್ಲಿ ಪ್ರಗತಿ ಕಾಣುತ್ತಿದೆ. ಸ್ವಚ್ಛತೆಯ ಪ್ರವರ್ತಕ ಭಾರತ. ಈ ಹಿನ್ನೆಲೆಯಲ್ಲಿ ಯಾವ ರೀತಿಯ ಪ್ರಗತಿಯಾಗುತ್ತಿದೆ ಎನ್ನುವುದು ನಮಗೆ ಗೊತ್ತಿದೆ. ಹಾಗಾಗಿ ಪ್ರಶಸ್ತಿ ನೀಡಿದ್ದೇವೆ.
- ಸಂದರ್ಶನ
ಬಿಲ್ ಗೇಟ್ಸ್, ಅಮೆರಿಕದ ಸಾಫ್ಟ್‌ವೇರ್ ದಿಗ್ಗಜ