ಬಡ ರೈತನ ಮಗ ಇಂದು 100 ಕೋಟಿ ಮೌಲ್ಯದ ಏರ್ ಬಸ್ ಹೆಲಿಕಾಪ್ಟರ್ ಒಡೆಯ; ಉದ್ಯಮಿ ರವಿ ಪಿಳ್ಳೈ ಯಶಸ್ಸಿನ ಕಥೆ ಇಲ್ಲಿದೆ

Published : Jun 22, 2023, 04:49 PM IST
ಬಡ ರೈತನ ಮಗ ಇಂದು 100 ಕೋಟಿ ಮೌಲ್ಯದ ಏರ್ ಬಸ್ ಹೆಲಿಕಾಪ್ಟರ್ ಒಡೆಯ; ಉದ್ಯಮಿ ರವಿ ಪಿಳ್ಳೈ ಯಶಸ್ಸಿನ ಕಥೆ ಇಲ್ಲಿದೆ

ಸಾರಾಂಶ

ಸಾಧಿಸುವ ಮನಸ್ಸುಗಳಿಗೆ ಬಡತನ ಅನ್ನೋದು ಶಾಪವಲ್ಲ, ವರ ಎಂಬುದಕ್ಕೆ ಸಮಾಜದಲ್ಲಿ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಹುಟ್ಟು ಬಡತನವಿದ್ದರೂ ಸಾಧನೆಯ ಮೂಲಕ ಸಿರಿವಂತರಾದವರು ಹಲವರು. ಅಂಥವರಲ್ಲಿ ಕೇರಳ ಮೂಲದ ದುಬೈಯಲ್ಲಿ ನೆಲೆಸಿರುವ ಉದ್ಯಮಿ  ರವಿ ಪಿಳ್ಳೈ ಕೂಡ ಒಬ್ಬರು. 100 ಕೋಟಿ ರೂ. ಮೌಲ್ಯದ ಏರ್ ಬಸ್ ಎಚ್ 145 ಹೆಲಿಕಾಪ್ಟರ್ ಹೊಂದಿರುವ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಕೂಡ ಇವರದ್ದು.

Business Desk:ವಿವಿಧ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರು ಅನೇಕ ರಂಗಗಳಲ್ಲಿ ಸಾಧನೆಯ ಛಾಪು ಮೂಡಿಸಿದ್ದಾರೆ. ಅಂಥವರಲ್ಲಿ ಯುಎಇ ದುಬೈಯಲ್ಲಿ ನೆಲೆಸಿರುವ ಉದ್ಯಮಿ ಬಿ.ರವಿ ಪಿಳ್ಳೈಕೂಡ ಒಬ್ಬರು.ಕೇರಳ ಮೂಲದ ಇವರು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಭಾವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಲಿಯನೇರ್ ಬಿ. ರವಿ ಪಿಳ್ಳೈ ಆರ್ ಪಿ ಗ್ರೂಪ್ ಎಂಬ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ. ಕೇರಳದ ಕೊಲ್ಲಂ ಸಮೀಪದ ಪುಟ್ಟ ಹಳ್ಳಿಯ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ರವಿ ಪಿಳ್ಳೈ ಅವರ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ. ಬಾಲ್ಯದಲ್ಲಿ ಬಡತನದ ಕಾರಣಕ್ಕೆ ರವಿ ಪಿಳ್ಳೈ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ, ಅವೆಲ್ಲವನ್ನೂ ಮೆಟ್ಟಿ ನಿಂತು ಇಂದು ಬಿಲಿಯನೇರ್ ಉದ್ಯಮಿಯಾಗಿದ್ದಾರೆ. ಅಷ್ಟೇ ಅಲ್ಲ, 100 ಕೋಟಿ ರೂ. ಮೌಲ್ಯದ ಏರ್ ಬಸ್ ಎಚ್ 145 ಹೆಲಿಕಾಪ್ಟರ್ ಹೊಂದಿದ್ದಾರೆ. ಎಚ್ 145 ಹೆಲಿಕಾಪ್ಟರ್ ಏರ್ ಬಸ್ ಹೊಂದಿರುವ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಕೂಡ ಇವರದ್ದು. ಆರ್ ಪಿ ಗ್ರೂಪ್ ಇಂದು ನಿರ್ಮಾಣ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿದೆ. 

1953ರ ಸೆಪ್ಟೆಂಬರ್ 2ರಂದು ಜನಿಸಿದ ರವಿ ಪಿಳ್ಳೈ ಅವರ ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿರದಿದ್ದರೂ ಅವರ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಕೊಚ್ಚಿ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸುವ ರವಿ, ಆ ಬಳಿಕ ಸಾಲ ಪಡೆದು ಚಿಟ್ ಫಂಡ್ ಕಂಪನಿ ಸ್ಥಾಪಿಸುತ್ತಾರೆ. ಆದರೆ, ಅದೃಷ್ಟ ಅವರಿಗೆ ಕೈಕೊಡುತ್ತದೆ. ಈ ಉದ್ಯಮ ಯಶಸ್ವಿಯಾಗಿ ನಡೆಯೋದಿಲ್ಲ. ಆದರೂ ರವಿ ಪಿಳ್ಳೈ ಎದೆಗುಂದುವುದಿಲ್ಲ.ಏನಾದರೂ ಸಾಧಿಸಲೇಬೇಕು ಎಂಬ ಛಲದಿಂದ ಸೌದಿ ಅರೇಬಿಯಾಕ್ಕೆ ಹೋಗಲು ನಿರ್ಧರಿಸುತ್ತಾರೆ. 1978ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ ಅವರು, ಅಲ್ಲಿ 150 ಜನರೊಂದಿಗೆ ಪುಟ್ಟ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ. ಈ ಸಂಸ್ಥೆಗೆ ನಸ್ಸರ್ ಎಸ್. ಅಲ್ ಹಜ್ರಿ ಕಾರ್ಪೋರೇಷನ್ (NSH) ಎಂದು ಹೆಸರಿಡುತ್ತಾರೆ. ಆ ಬಳಿಕ ಹಂತ ಹಂತವಾಗಿ ಈ ಸಂಸ್ಥೆ ಯಶಸ್ಸು ಕಾಣುತ್ತದೆ. ಇಂದು ಈ ಕಂಪನಿಯಲ್ಲಿ 70 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಪಿಳ್ಳೈ ಉದ್ಯಮ ಎಷ್ಟು ಯಶಸ್ವಿಯಾಗಿದೆ ಎನ್ನೋದಕ್ಕೆ ಸಾಕ್ಷಿ.

Kanika Tekriwal: ಈಕೆ ಐಐಟಿ ವಿದ್ಯಾರ್ಥಿನಿಯಲ್ಲ, ಶ್ರೀಮಂತ ಕುಟುಂಬದ ಹಿನ್ನೆಲೆಯೂ ಇಲ್ಲ, ಆದರೂ 10 ಖಾಸಗಿ ಜೆಟ್ ಒಡತಿ!

100 ಕೋಟಿ ಮೌಲ್ಯದ H145 ಹೆಲಿಕಾಪ್ಟರ್ ಒಡೆಯ
ಆರ್ ಆರ್ ಗ್ರೂಪ್ ಸಿಇಒ ರವಿ ಪಿಳ್ಳೈ 2022ರ ಜೂನ್ ನಲ್ಲಿ 100 ಕೋಟಿ ರೂ. ಮೌಲ್ಯದ ಏರ್ ಬಸ್ 145 ಹೆಲಿಕಾಪ್ಟರ್ ಖರೀದಿಸಿದ ಬಳಿಕ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಾರೆ. ಈ ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್ ಗಳು ಹಾಗೂ ಏಳು ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಈ ಹೆಲಿಕಾಪ್ಟರ್ ಅನ್ನು ಸಮುದ್ರ ಮಟ್ಟಕ್ಕಿಂತ  20,000 ಅಡಿ ಎತ್ತರದಲ್ಲಿ ಹಾರಿಸಬಹುದು ಹಾಗೂ ಇಳಿಸಬಹುದು. ಹೆಲಿಕಾಪ್ಟರ್ ನಲ್ಲಿ ಇಂಧನ ಹೀರಿಕೊಳ್ಳುವ ಸೀಟುಗಳಿದ್ದು, ಇದು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ. ರವಿ ಪಿಳ್ಳೈ ಕಡಿಮೆ ಪ್ರೊಫೈಲ್ ನಿರ್ವಹಣೆ ಮಾಡುತ್ತಾರೆ ಅಲ್ಲದೆ, ಇವರು ಸಮಾಜಮುಖಿ ಕಾರ್ಯಗಳಿಂದ ಕೂಡ ಸಾಕಷ್ಟು ಹೆಸರು ಗಳಿಸಿದ್ದಾರೆ. 

ಈ ಮಹಿಳೆಗೆ ಉದ್ಯಮ ಪ್ರಾರಂಭಿಸಲು ಅಡುಗೆ ಮನೆಯೇ ಪ್ರೇರಣೆ; ತುಪ್ಪ ಮಾರಾಟದಿಂದ ತಿಂಗಳಿಗೆ 20 ಲಕ್ಷ ರೂ.ಆದಾಯ!

ರವಿ ಪಿಳ್ಳೈ ಅವರ ಮಗಳ ವಿವಾಹ ಕಾರ್ಯಕ್ರಮ ಕೂಡ ಸಾಕಷ್ಟು ಸದ್ದು ಮಾಡಿತ್ತು. ಇದನ್ನು ಕೇರಳದಲ್ಲಿ ನಡೆದ ಅತ್ಯಂತ ದುಬಾರಿ ವಿವಾಹ ಸಮಾರಂಭ ಎಂದು ಕೂಡ ಪರಿಗಣಿಸಲಾಗಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಸಿಇಒಗಳು, ಯುಎಐ ರಾಜಮನೆತನದ ಸದಸ್ಯರು ಕೂಡ ಭಾಗವಹಿಸಿದ್ದರು. ಇನ್ನು ಈ ವಿವಾಹ ಸಮಾರಂಭಕ್ಕೆ ಪಿಳ್ಳೈ  55 ಕೋಟಿ ರೂ. ಖರ್ಚು ಮಾಡಿದ್ದರು. ಫೋರ್ಬ್ಸ್‌ ಮಾಹಿತಿ ಪ್ರಕಾರ ರವಿ ಪಿಳ್ಳೈಅವರ ನಿವ್ವಳ ಆಸ್ತಿ ಮೌಲ್ಯ 25,000 ಕೋಟಿ ರೂ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!